ಬೆಳಗಾವಿ- ಪಾಪ ಅಂಕಲ್ ಎಂದಿನಂತೆ ಡ್ಯುಟಿ ಮಾಡಲು ಬ್ಯಾಂಕ್ ಗೆ ಹೋಗಿದ್ದಾರೆ ಅಂಟಿ ಕೂಡಾ ಮಾರ್ಕೆಟ್ ಗೆ ಹೋಗಿದ್ದನ್ನು ಸಮಯ ಸಾಧಿಸಿ ಇಂದು ಮಟ ಮಟ ಮಧ್ಯಾಹ್ನ ಮನೆಗೆ ಕಣ್ಣ ಹಾಕಿದ ಕಳ್ಳರು ಬರೊಬ್ನರಿ 17 ಲಕ್ಷ 11 ಸಾವಿರ ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ಬೆಳಗಾವಿಯ ಟಿಳಕವಾಡಿಯಲ್ಲಿ ನಡೆದಿದೆ
ಬೆಳಗಾವಿಯ ಟಿಳಕವಾಡಿಯ ಹಿಂದೂ ನಗರದ ನಿವಾಸಿ ಮಂಜುನಾಥ್ ಭಟ್ ಎಂಬುವರ ಮನೆ ಇಂದು ಮಧ್ಯಾಹ್ನ ಎರಡು ಘಂಟೆ ಸುಮಾರಿಗೆ ಲೂಟಿಯಾಗಿದೆ
ಎಲ್ಲರೂ ಚುನಾವಣೆಯ ಗಡಿಬಿಡಿಯಲ್ಲಿರುವಾಗ ಮನೆಯ ಕೀಲಿ ಮುರಿದು ಮನೆಯ ಒಳಗೆ ನುಗ್ಗಿರುವ ಖದೀಮರು ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ
ಟಿಳಕವಾಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ