Breaking News

ಸುಳೇಭಾವಿಯಲ್ಲಿ ಕೊಲೆಯಾದ ಇಬ್ಬರೂ ಜೈಲಿಗೆ ಹೋಗಿ ಬಂದವರು…..

ಸುಳೇಭಾವಿಯಲ್ಲಿ ಕೊಲೆ, ಆದವರು ಈ ಹಿಂದೆ ಜೈಲಿಗೆ ಹೋಗಿ ಬಂದವರು…..

ನಿನ್ನೆ ರಾತ್ರಿ ಬೆಳಗಾವಿ ನಗರದ ಪಕ್ಕದಲ್ಲಿ ಇರುವ ಸುಳೆಭಾವಿ ಗ್ರಾಮದಲ್ಲಿ ಇಬ್ಬರು ಯುವಕರ ಕೊಲೆಯಾಗಿದೆ,ಈ ಯುವಕರು ಈ ಹಿಂದೆ ಕೊಲೆ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿ ಬಂದವರು, ಕೊಲೆ ಮಾಡಿ ಜೈಲಿಗೆ ಹೋದಾಗ ಇವರ ಜೊತೆಗೆ ಜೈಲಿನಲ್ಲಿದ್ದ ಗೆಳೆಯರ ಜೊತೆ ಜಗಳಾಡಿಕೊಂಡಿದ್ದರು.ಜೈಲಿನಿಂದ ಹೊರಗೆ ಬಂದಾಗಲೂ ಜಗಳಾಡಿಕೊಂಡಿದ್ದರು,ಈ ಏರಿಯಾದ ಹಿರಿಯರು ಈ ಗ್ಯಾಂಗ್ ಜಗಳಾಡದಂತೆ ರಾಜಿ ಪಂಚಾಯ್ತಿ ಮಾಡಿದ್ದರೂ ಕಚ್ಚಾಟ ಮುಂದುವರೆದಿತ್ತು ಎಂದು ಹೇಳಲಾಗಿದೆ.

ಈ ಹಿಂದೆ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಆರೋಪಿಗಳಲ್ಲೇ ಎರಡು ಗ್ಯಾಂಗ್ ಆಗಿದ್ದವು.ಈ ಎರಡೂ ಗ್ಯಾಂಗ್ ಗಳ ನಡುವೆ ನಿನ್ನೆ ರಾತ್ರಿ ವಾರ್ ಆಗಿದೆ.ಈ ವಾರ್ ನಲ್ಲಿ ಇಬ್ಬರು ಯುವಕರು ಕೊಲೆಯಾಗಿದ್ದಾರೆ.ಎಂದು ತಿಳಿದು ಬಂದಿದ್ದು, ಗೆಳೆಯರ ಬಳಗದಲ್ಲೇ ಎರಡು ಗ್ಯಾಂಗ್ ಗಳಾಗಿ ನಿನ್ನೆ ರಾತ್ರಿ ಗ್ಯಾಂಗ್ ಗಳ ನಡುವೆ ವಾರ್ ಆಗಿದೆ.ಪೋಲೀಸರು ನಿನ್ನೆ ರಾತ್ರಿ ಇಬ್ಬರನ್ನು ಕೊಲೆ ಮಾಡಿದ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸುವ ಸಾಧ್ಯತೆ ಇದೆ.ಆರೋಪಿ ಗಳ ಬಂಧನದ ನಂತರ ಸತ್ಯಾಂಶ ಬಯಲಾಗಲಿದೆ.

ನಿನ್ನೆ ರಾತ್ರಿ ನಡೆದ ಘಟನೆಯ ವಿವರ

ಬೆಳಗಾವಿ: ತಾಲೂಕಿನ ಸುಳೇಭಾವಿ ಗ್ರಾಮದ ಛತ್ರಪತಿ ಶಿವಾಜಿ ಮಹಾರಾಜ ಪ್ರತಿಮೆ ಹಾಗೂ ಗಣಪತಿ ಮಂದಿರ ಎದುರು ಗುರುವಾರ ರಾತ್ರಿ ಇಬ್ಬರು ಯುವಕರನ್ನು ಹಳೆಯ ದ್ವೇಷ ಹಿನ್ನೆಲೆಯಲ್ಲಿ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಸುಳೇಭಾವಿ ಗ್ರಾಮದ ರಣಧೀರ ಉರ್ಫ ಮಹೇಶ ರಾಮಚಂದ್ರ ಮುರಾರಿ(26) ಹಾಗೂ ಪ್ರಕಾಶ ನಿಂಗಪ್ಪ ಹುಂಕರಿಪಾಟೀಲ(24) ಎಂಬ ಯುವಕರನ್ನು ಹತ್ಯೆ ಮಾಡಲಾಗಿದೆ. ಲಕ್ಷ್ಮೀ ಗಲ್ಲಿಯ ಶಿವಾಜಿ ಮಹಾರಾಜರ ಪ್ರತಿಮೆ ಎದುರೇ ಪ್ರಕಾಶನನ್ನು ಕೊಲೆ ಮಾಡಲಾಗಿದ್ದು, ಗಣಪತಿ ಮಂದಿರ ಎದುರು ರಣಧೀರನ ಮೇಲೆ ಮಾರಕಾಸ್ತçದಿಂದ ಹೊಡೆದು ಕೊಲೆ ಮಾಡಲಾಗಿದೆ.
ಹಳೆ ದ್ವೇಷದ ಹಿನ್ನೆಲೆಯಲ್ಲಿ ಈ ಯುವಕರನ್ನು ಕೊಲೆ ಮಾಡಲಾಗಿದೆ. ಲಕ್ಷಿö್ಮÃ ಗಲ್ಲಿಯ ವೃತ್ತದ ಬಳಿ ನಿಂತಿದ್ದ ಇಬ್ಬರನ್ನು ಸಮಯ ಸಾಧಿಸಿ ಹಂತಕರು ಕೊಲೆಗೈದಿದ್ದು, ಅಲ್ಲಿಂದ ಪರಾರಿಯಾಗಿದ್ದಾರೆ.

ಹಂತಕರ ಶೋಧ ಕಾರ್ಯ ಮುಂದುವರಿದಿದ್ದು, ಪೊಲೀಸರು ತಂಡ ರಚಿಸಿದ್ದಾರೆ.ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ, ಮಾರೀಹಾಳ ಇನ್ಸಪೆಕ್ಟರ್ ಮಹಾಂತೇಶ ಬಸ್ಸಾಪುರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೊಲೆಗೀಡಾದ ರಣಧೀರ ಉರ್ಫ ಮಹೇಶ ಮುರಾರಿ ಈ ಹಿಂದೆ 2019ರಲ್ಲಿ ನಡೆದ ನಾಗೇಶ ಮ್ಯಾಕಲ್ಯಾಗೋಳ ಕೊಲೆ ಪ್ರಕರಣದಲ್ಲಿ ಸೆರೆಯಾಗಿದ್ದನು. ಎರಡು ವರ್ಷಗಳ ಕಾಲ ಜೈವಾಸ ಅನುಭವಿಸಿ ಇತ್ತೀಚೆಗೆ ಜಾಮೀನಿನ ಮೇಲೆ ಹೊರ ಬಂದಿದ್ದನು. ಈತನ ವಿರುದ್ಧ ಹಲ್ಲೆ, ದೊಂಬಿ ಪ್ರಕರಣಗಳು ಅನೇಕ ಠಾಣೆಗಳಲ್ಲಿ ದಾಖಲಾಗಿವೆ. ಜಾಮೀನಿನ ಮೇಲೆ ಹೊರ ಬಂದ ಬಳಿಕ ಕೆಲವು ಗಲಾಟೆಯಲ್ಲಿ ಭಾಗಿಯಾಗಿದ್ದನು. ಈತನೊಂದಿಗೆ ಇದ್ದ ಸಹಚರರ ಜೊತೆಗೂ ಜಗಳವಾಡಿಕೊಂಡಿದ್ದನು. ಸಹಚರರೇ ಕೊಲೆಗೈದಿರುವ ಸಾಧ್ಯೆತೆಯೂ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮನೆ ಬಿಟ್ಟು ಹೋದ ಓಣಿ ಮಂದಿ

ಕೊಲೆ ನಡೆದ ಲಕ್ಷ್ಮೀ ಗಲ್ಲಿಯ ಜನರು ಭಯಭೀತರಾಗಿದ್ದು, ಈ ಓಣಿಯ ಜನರು ಮನೆಗೆ ಬೀಗ ಹಾಕಿ ಅಲ್ಲಿಂದ ಓಡಿ ಹೋಗಿದ್ದಾರೆ. ಕೊಲೆ ಆಗಿರುವುದನ್ನು ನೋಡಿ ಆತಂಕಕ್ಕೀಡಾಗಿದ್ದು, ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ. ಬಹುತೇಕ ಗ್ರಾಮದ ಅನೇಕರ ಮೊಬೈಲ್‌ಗಳು ಸ್ವಿಚ್ ಆಪ್ ಆಗಿವೆ. ಭಯದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ.ಆರೋಪಿಗಳ ಪತ್ತೆಗೆ ಪೋಲೀಸರು ಜಾಲ ಬೀಸಿದ್ದಾರೆ.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *