ಬೆಳಗಾವಿ- ಬೆಳಗಾವಿಯ ರಾಮತೀರ್ಥ ನಗರದಲ್ಲಿ ಸರಗಳ್ಳರು ಮತ್ತೆ ತಮ್ಮ ಕೈಚಳಕ ತೋರಿಸಿದ್ದು ವೃದ್ಧೆಯ 30 ಗ್ರಾಂ ತೂಕದ ಸರವನ್ನು ದೋಚಿಕೊಂಡಿದ್ದಾರೆ
ರಾಮತೀರ್ಥ ನಗರದ ನಿವಾಸಿ 50 ವರ್ಷ ವಯಸ್ಸಿನ ಪ್ರೇಮಾ ರಾಚಂದ್ರ ಚೌಗಲೆ ಎಂಬ ಮಹಿಳೆ ತಳ್ಳುವ ಗಾಡಿಯಿಂದ ತರಕಾರಿ ಖರಿಧಿಸಲು ಶಿವಾಲಯದ ಬಳಿ ಬಂದ ಸಂಧರ್ಭದಲ್ಲಿ ಬೈಕ್ ಮೇಲೆ ಬಂದ ಇಬ್ಬರು ಸರಗಳ್ಳರು ಇವರ ಕೊರಳಲ್ಲಿದ್ದ 40 ಗ್ರಾಂ ತೂಕದ ಘಂಟನ್ ದೋಚಿಕೊಂಡು ಪರಾರಿಯಾಗಿದ್ದಾರೆ
ಸರ ದೋಚುವಾಗ ಪ್ರೇಮಾ ಚೌಗಲೆಯವರ ಕೈಯಲ್ಲಿ ಹತ್ತು ಗ್ರಾಮ ತೂಕದ ಬಂಗಾರ ಉಳಿದುಕೊಂಡಿದ್ದು 30 ಗ್ರಾಂ ಚಿನ್ನ ಸರಗಳ್ಳರ ಕೈ ಸೇರಿದೆ ಮಾಳ ಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ