ಬೆಳಗಾವಿ- ಆತ ಮಾಡುವದು ಗೌಂಡಿ ಕೆಲಸ ಎರಡು ದಿನದ ಹಿಂದೆ ಮನೆಯಲ್ಲಿ ನಾನು ಘಟಪ್ರಭಾ ಹೋಗಿ ಬರುತ್ತೇನೆ ಎಂದು ವೈಭವ ನಗರದ ಮನೆ ಬಿಟ್ಟ 38 ವರ್ಷದ ಶಭ್ಬೀರ ಮುಲ್ಲಾ ಘಟಪ್ರಭಾ ನದಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ನಡೆದಿದೆ
ಎರಡು ದಿನ ಹಿಂದೆ ಮನೆಯಲ್ಲಿ ಘಟಪ್ರಭಾ ಗೆ ಹೋಗಿ ಬರುವೆ ಎಂದು ಹೇಳಿ ಹೋದ ಶಬ್ಬಿರ್ ಎರಡು ತಾಸಿನ ನಂತರ ತನ್ನ ಮಗನಿಗೆ ಫೋನ್ ಮಾಡಿ ನಾನು ಯಮಕನಮರಡಿಯ ಹೊಳೆಯಲ್ಲಿ ಬಿದ್ದು ಸಾಯುತ್ತಿದ್ದೇನೆ ನನ್ನ ಮೋಬೈಲ್ ಗಾಡಿ ಪರ್ಸ ಎಲ್ಲವೂ ನದಿಯ ದಂಡೆಯ ಮೇಲೆ ಇಟ್ಟಿದ್ದೇನೆ ಬಂದು ತೆಗೆದುಕೊಂಡು ಹೋಗು ಎಂದು ಫೋನ್ ಮಾಡಿ ನಂತರ ಫೋನ್ ಸ್ವಿಚ್ ಆಫ್ ಮಾಡಿದ ಶಬ್ಬಿರ್ ಈಗ ಶವವಾಗಿ ಪತ್ತೆಯಾಗಿದ್ದಾನೆ
ತಂದೆ ಫೋನ್ ಮಾಡಿ ಸಾವಿನ ಸುದ್ಧಿ ಹೇಳಿ ನಂತರ ಫೋನ್ ಸ್ವಿಚ್ ಆಫ್ ಮಾಡಿದ ನಂತರ ದಂಗಾದ ಮಗ ತಕ್ಷನ ಅಲ್ಲಿಗೆ ತೆರಳಿದಾಗ ಮೋಬೈಲ್ ಬಟ್ಟೆ ಪರ್ಸ ಬೈಕ್ ಎಲ್ಲವೂ ಸಿಗುತ್ತೆ ಆದ್ರೆ ತಂದೆ ಮಾತ್ರ ಸಿಗದ ಕಾರಣ ಎಪಿಎಂಸಿ ಠಾಣೆಗೆ ಬಂದು ದೂರು ನೀಡಿದಾಗ ಸಿಪಿಐ ಕಾಲಿಮಿರ್ಚಿ ಸ್ಥಳಕ್ಕೆ ದೌಡಾಯಿಸಿ ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದರೂ ಆತ ಸಿಕ್ಕಿರಲಿಲ್ಲ
ಎರಡು ದಿನದ ಬಳಿಕ ಈಗ ಇವತ್ತು ಆರನ ಶವ ಪತ್ತೆಯಾಗಿದ್ದು ತನಿಖೆ ಮುಂದುವರೆದಿದೆ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಕೆಲವರು ಮೆಸ್ಸೆಜ್ ಮಾಡ್ತಾರೆ.ಇನ್ನು ಕೆಲವರು ಫೇಸ್ ಬುಕ್ ಸ್ಟೇಟಸ್ ಹಾಕ್ತಾರೆ ಕೆಲವರು ಡೆತ್ ನೋಟ್ ಬರೀತಾರೆ ಆದರೆ ಈ ಶಬ್ನಿರ್ ತನ್ನ ಮಗನಿಗೆ ಫೋನ್ ಮಾಡಿ ನಾನು ಸಾಯುತ್ತೇನೆ ಎಂದು ಹೇಳಿದಾಗ ಮಗನ ಪರಿಸ್ಥಿತಿ ಏನಾಗಿರಬೇಡ ಶಬ್ಬಿರ್ ಆತ್ಮ ಹತ್ಯೆ ಮಾಡಿಕೊಳ್ಳಲು ಕಾರಣ ಏನು ? ಎನ್ನುವದು ಇನ್ನುವರೆಗೆ ತಿಳಿದಿಲ್ಲ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ