ಬೆಳಗಾವಿ- ಬೆಳಗಾವಿಯಲ್ಲಿ ಅವ್ಯಾಹತವಾಗಿ ಕಂಟ್ರಿ ಸರಾಯಿ ಮಾರಾಟವಾಗುತ್ತಿದೆ.ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಆರೋಪ ಮಾಡಿದ ಬೆನ್ನಲ್ಲಿಯೇ ಬೆಳಗಾವಿಯಲ್ಲಿ ಕಂಟ್ರಿ ಸಾರಾಯಿ ಕುಡಿದು ವ್ಯಕ್ತಿಯೊಬ್ನ ಸಾವನ್ನೊಪ್ಪಿರುವ ಶಂಕೆ ವ್ಯೆಕ್ತವಾಗಿದೆ.
ಅಶೋಕ್ ನಗರ ನಿವಾಸಿ ಪ್ರಕಾಶ್ ಮಸರಗುಪ್ಪಿ(33) ಮೃತ ವ್ಯಕ್ತಿಯಾಗಿದ್ದು ಇತನ ಶವ ಶಿವಬಸವನಗರದ ಬಳಿ ದೊರೆತಿದೆ.
ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ಪ್ರಕಾಶ ಮಸರಗುಪ್ಪಿ ಮದ್ಯವ್ಯಸನಿಯಾಗಿದ್ದ ಪ್ರಕಾಶ್ ಮಸರಗುಪ್ಪಿ ಅನುಮಾನಾಸ್ಪದವಾಗಿ ಸಾವನ್ನೊಪ್ಪಿದ್ದಾನೆ.
ಮದ್ಯದ ಅಂಗಡಿ ಬಂದ್ ಹಿನ್ನೆಲೆ ಕಂಟ್ರಿ ಸಾರಾಯಿ ಕುಡಿಯಲು ಅಶೋಕ ನಗರದಿಂದ ತೆರಳಿದ್ದ ಈತ ಕಂಟ್ರಿ ಸರಾಯಿ ಕುಡಿದು ಮರಳಿ ಮನೆಗೆ ಬರುವಾಗ ಮಾರ್ಗದ ಸಾವೊನ್ನೊಪ್ಪಿದ್ದಾನೆ ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಮಾಳಮಾರುತಿ ಠಾಣೆ ಪೊಲೀಸರು ದೌಡಾಯಿಸಿದ್ದು ಈತನ ಸಾವಿನ ಕುರಿತು ಪರಿಶೀಲನೆ ನಡೆಸಿದ್ದಾರೆ.ಪೋಲೀಸರ ತನಿಖೆಯ ನಂತರವೇ ಸಾವಿಗೆ ಕಾರಣ ಏನು ಎಂಬುದು ಗೊತ್ತಾಗಲಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ