ಬೆಳಗಾವಿ- ಬಣ್ಣಕ್ಕೆ ಬೆರೆಸುವ ಟರ್ಪಂಟೈನ್ ಎಣ್ಣೆ ಕುಡಿದು ಒಂದುವರೆ ವರ್ಷದ ಮಗು ಸಾವನ್ನೊಪ್ಪಿದ ಘಟನೆ ಬಾಳೆಕುಂದ್ರಿ ಬಿ ಕೆ ಯಲ್ಲಿ ನಡೆದಿದೆ
ಲಾಕ್ ಡೌನ್ ಹಿನ್ನಲೆಯಲ್ಲಿ ಕೆಲಸ ಏನೂ ಇಲ್ಲ ಅಂತಾ ಮನೆಯವರು ಚಕ್ಕಡಿಗೆ ಬಣ್ಣ ಹಚ್ಚುವಲ್ಲಿ ಪೋಷಕರು ನಿರತರಾಗಿರುವಾಗ ಮನೆಯಿಂದ ಹೊರಗೆ ಬಂದು ನೀರಿನ ಬಾಟಲಿ ಎಂದು ತಿಳಿದು ಬಣ್ಣದ ಡಬ್ಬಿಯ ಬದಿಗಿದ್ದ ಟರ್ಪಂಟೈನ್ ಎಣ್ಣಿ ಬಾಟಲಿ ಎತ್ತಿಕೊಂಡು ಟರ್ಪಂಟೈನ್ ಎಣ್ಣೆ ಕುಡಿದು ಸಾವನ್ನೊಪ್ಪಿದ ಘಟನೆ ನಡೆದಿದೆ
ಈ ಮಗುವನ್ನು ತಕ್ಷಣ ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನೊಪ್ಪಿದೆ
ಬಾಳೆಕುಂದ್ರಿ ಬಿ ಕೆ ಗ್ರಾಮದ ಒಂದು ವರೆ ವರ್ಷದ ಮಗು ರೀಧಾ ಇಮ್ರಾನ ಜಮಾದಾರ ಮೃತಪಟ್ಟಿದ್ದು ಈ ಘಟನೆಯಿಂದಾಗಿ ಪೊಷಕರ ಆಕ್ರಂದನ ಮುಗಿಲು ಮುಟ್ಟಿತ್ತು ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ