ಬೆಳಗಾವಿ-
ಕಲುಷಿತ ಆಹಾರ ಸೇವಿಸಿ ಐವರು ಅಸ್ವಸ್ಥಗೊಂಡ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಯಮಕನಮರ್ಡಿ ಗ್ರಾಮದಲ್ಲಿ ನಡೆದಿದೆ.
ಬೀಗರು ತಂದಿದ್ದ ಬುತ್ತಿಯ ಊಟ ಸೇವಿಸಿದ ಒಂದೇ ಕುಟುಂಬದ ಐವರು ವಾಂತಿ ಬೇಧಿಯಿಂದ ಅಸ್ವಸ್ಥರಾಗಿದ್ದಾರೆ. ಕೂಡಲೇ ಅವರನ್ನ ಸ್ಥಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆದ್ರೆ ಐವರಲ್ಲಿ ಮೂವರಿಗೆ ಬಿಪಿ ಲೋ ಆಗುತ್ತಿದ್ದು ಕೂಡಲೇ ಜಿಲ್ಲಾಸ್ಪತ್ರೆಗೆ ಒಯ್ಯುವಂತೆ ಅಲ್ಲಿನ ವೈದ್ಯರು ಸೂಚಿಸಿದ ಹಿನ್ನೆಲೆ ಅಸ್ವಸ್ಥ ಮೂವರನ್ನ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸಧ್ಯ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಅಸ್ವಸ್ಥರನ್ನ ಪ್ರೇಮಾ ಚೌಗಾಲಾ 12, ಸ್ನೇಹಾ ಚೌಗಲಾ 14, ಚನ್ನಮ್ಮಚೌಗಲಾ 2, ಸುನೀಲ್ ಚೌಗಲಾ 32 ಮತ್ತು ಅಶೋಕ್ ಚೌಗಲಾ 55 ಎಂದು ಗುರುತಿಸಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ