ಬೆಳಗಾವಿ-ಪೋಸ್ಕೋ ಪ್ರಕರಣದಡಿಯಲ್ಲಿ ಬಂಧನಕ್ಕೊಳಗಾಗಿ ಮೆಡಿಕಲ್ ಟೆಸ್ಟ್ ಗಾಗಿ ಜಿಲ್ಲಾ ಆಸ್ಪತ್ರೆಗೆ ತರಲಾಗಿದ್ದ ಆರೋಪಿಯೊಬ್ನ ಪರಾರಿಯಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಪೋಸ್ಕೋ ಪ್ರಕರಣಕ್ಕೆ ಸಮಂಧಿಸಿದಂತೆ ….ಎಂಬ ಆರೋಪಿಯನ್ನು ಕಾಕತಿ ಪೋಲೀಸರು ಬಂಧಿಸಿ ಮೆಡಿಕಲ್ ಟೆಸ್ಟ್ ಮಾಡಲು ಆತನನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ತರಲಾಗಿತ್ತು,ಆದ್ರೆ ಈ ಆರೋಪಿ ಪೋಲೀಸರ ಕಣ್ಣುತಪ್ಪಸಿ ಆಸ್ಪತ್ರೆಯಿಂದ ಪರಾರಿ ಆಗಿದ್ದಾನೆ.
ಆರೋಪಿಯ ಪತ್ತೆಗೆ ಪೋಲೀಸರು ವ್ಯಾಪಕ ಶೋಧ ನಡೆಸಿದ್ದಾರೆ.ಪರಾರಿಯಾದ ಆರೋಪಿ ಪೋಸ್ಕೋ ಪ್ರಕರಣದ ಆರೋಪಿ ಆಗಿರುವದರಿಂದ ಆರೋಪಿಯ ಹೆಸರು ಗೌಪ್ಯವಾಗಿದೆ.
ಸುಮಾರು ಒಂದು ಘಂಟೆ ಕಾಲ ಶೋಧ ಕಾರ್ಯಚರಣೆ ನಡೆಸಿದ ಕಾಕತಿ ಪೋಲೀಸರು ಕೇವಲ ಒಂದು ಘಂಟೆಯಲ್ಲೇ ಪರಾರಿಯಾದ ಆರೋಪಿಯನ್ನು ಬಂಧಿಸುವಲ್ಲಿ ಕಾಕತಿ ಪೋಲೀಸರು ಯಶಸ್ವಿಯಾಗಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ