ಬೆಳಗಾವಿ – ನಗರದ ಖಡೇಬಝಾರ್ ಪೋಲೀಸರು ಭರ್ಜರಿ ಬೇಟೆಯಾಡಿ ಮುಂಬಯಿಯಿಂದ ಬೆಳಗಾವಿಗೆ ಬೆಳ್ಳಿ ಮತ್ತು ಶ್ರೀಗಂಧದ ಕಟ್ಟಿಗೆಯನ್ನು ಸ್ಮಗಲಿಂಗ್ ಮಾಡುತ್ತಿದ್ದ ಎರಡು ಪ್ರಕರಣಗಳನ್ನು ಬೇಧಿಸಿದ್ದಾರೆ
ಆಕ್ರಮವಾಗಿ ಬೆಳ್ಳಿ ಸಾಗಾಣಿಕೆ ಮತ್ತು ಶ್ರೀಗಂಧದ ಕಟ್ಟಿಗೆ ಸ್ಮಗಲಿಂಗ್ ಸಮಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಿರುವ ಖಡೇಬಝಾರ್ ಪೋಲೀಸರು ಐದು ಕೆಜಿ ಅರವತ್ತು ಗ್ರಾಂ ಬೆಳ್ಳಿ ಮತ್ತು ಎಂಟು ಕೆಜಿ ಶ್ರೀಗಂಧದ ಕಟ್ಟಿಗೆಯನ್ನು ವಶ ಪಡಿಸಿ ಕೊಂಡಿದ್ದಾರೆ
ಬೆಳ್ಳಿ ಸಾಗಾಣಿಕೆ ಪ್ರಕರಣಕ್ಕೆ ಸಮಂಧಿಸಿದಂತೆ ಮುಂಭೈ ಮೂಲದ ಅಮೀತ ಧಣಪತರಾಜ ಜೈನ ಶ್ರೀಗಂಧ ಸಾಗಾಣಿಕೆ ಪ್ರಕರಣಕ್ಕೆ ಸಮಂಧಿಸಿದಂತೆ ಬೆಳಗಾವಿ ವಿಜಯ ನಗರದ ನಿವಾಸಿಗಳಾದ ಪ್ರಶಾಂತ ಮೌನೇಶ ಹುಸುಳಕರ.ಕುಮಾರ ಸುರೇಶ ಹುಸುಳಕರ,ಶ್ರೀಪಾದ ರವಿಂದ್ರ ಭಟ್ ಮತ್ತು ಹಿಂಡಲಗಾ ಗ್ರಾಮದ ಶಂಕರ ಅಶೋಕ ಗೈರಿ ಸೇರಿದಂತೆ ಒಟ್ಟು ಐದು ಜನರನ್ನು ಬಂಧಿಸಲಾಗಿದೆ
ಖಡೇಬಝಾರ್ ಸಿಪಿಐ ಸಾತೇನಹಳ್ಳಿ ನೇತ್ರತ್ವದ ಪೋಲೀಸ್ ತಂಡ ಎಸಿಪಿ ಜೈಕುಮಾರ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿತ್ತು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ