ಬೆಳಗಾವಿ : ಮಾಳಮಾರುತಿ ಪಿ.ಎಸ್ ಐ ಹೊನ್ನಪ್ಪ ತಳವಾರ ಸಿಸಿ ಟಿವ್ಹಿ ಪೋಟೇಜ್ ಚೆಕ್ ಮಾಡದಿದ್ದರೆ ಕಣಬರ್ಗಿಯ ಆ ಮರ್ಡರ್ ಪ್ರಕರಣ ಬೆಳಕಿಗೆ ಬರುತ್ತಿರಲಿಲ್ಲ.ಸಿಸಿಟಿವ್ಹಿ ಪೋಟೇಜ್ ನಲ್ಲಿ ಶೂಟ್ ಆಗಿದ್ದ ಬೈಕ್ ಆರೋಪಿಯನ್ನು ಜೈಲಿಗೆಟ್ಟಿದೆ.
ಗೆಳೆಯನ ಹೆಂಡತಿಗಾಗಿ ಟಾವೇಲ್ ನಿಂದ ಗೆಳೆಯನ ಕತ್ತು ಹಿಸುಕಿ,ಆತನನ್ನು ಬಣವಿಯಲ್ಲಿ ಹಾಕಿ ಬರ್ಬರವಾಗಿ ಸುಟ್ಟುಹಾಕಿ ಮರ್ಡರ್ ಮಾಡಿದ ಆ ಭೂಪ ಕೊನೆಗೂ ಪೋಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.ಈ ಕೊಲೆ ಪ್ರಕರಣವನ್ನು ಮಾಳಮಾರುತಿ ಠಾಣೆಯ ಪೋಲೀಸರು ತ್ವರಿತವಾಗಿ 48 ಗಂಟೆಗಳಲ್ಲಿ ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅನೈತಿಕ ಸಂಬಂಧದ ಹೊಂದಿದ್ದ ವ್ಯಕ್ತಿಯೋರ್ವ ತನ್ನ ಪ್ರಿಯತಮೆಯ ಪತಿಯನ್ನು ಹತ್ಯೆ ಮಾಡಿ ಹೊಲದಲ್ಲಿನ ಬತ್ತದ ಬಣಿವೆಯಲ್ಲಿ ಶವ ಸುಟ್ಟು ಹಾಕಿದ್ದ ಪ್ರಕರಣವನ್ನು ಮಾಳಮಾರುತಿ ಪೊಲೀಸರು ಬೇಧಿಸಿದ್ದು, 48 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಂದಗಡ ತಾಲೂಕಿನ ಸಂತೋಷ ನಾರಾಯಣ ಫರೀದ (36) ಮೃತ ವ್ಯಕ್ತಿ. ಕಣಬರ್ಗಿ ಗ್ರಾಮದ ಪರಶುರಾಮ ಅಪ್ಪಣ್ಣ ಕುರುಬರ ಕೊಲೆ ಆರೋಪಿ. ಮೃತ ಸಂತೋಷನ ಪತ್ನಿ ಜತೆಗೆ ಅನೈತಿಕ ಸಂಬಂಧ ಹೊಂದಿದ್ದನು. ಅಲ್ಲದೆ ಆರೋಪಿ ತನ್ನ ಮನೆಯಲ್ಲಿ ಅವಳನ್ನು ಇಸಿರಿಕೊಂಡಿದ್ದನು. ಇದನ್ನು ಕೇಳಲು ಮಾ. 2ರಂದು ಕಣಬರ್ಗಿ ಗ್ರಾಮಕ್ಕೆ ಆಗಮಿಸಿದ್ದ ಪತಿ ಸಂತೋಷನನ್ನು ಆರೋಪಿ ಪರಶುರಾಮ ಜಮೀನೊಂದರಲ್ಲಿ ಕರೆದುಕೊಂಡು ಹೋಗಿ ಕಂಠಪೂರ್ತಿ ಮದ್ಯೆ ಕುಡಿಸಿ ಕೊರಳಿಗೆ ಟಾವೇಲ್ ಬಿಗಿದು, ಕೊಲೆ ಮಾಡಿ ಬತ್ತದ ಹುಲ್ಲಿನ ಬಣಿವೆಯಲ್ಲಿ ಶವ ಸುಟ್ಟು ಹಾಕಿದ್ದನು.
ಈ ಬಗ್ಗೆ ಯಲ್ಲಪ್ಪ ಬುಡುಗ ದೂರು ನೀಡಿದ್ದರು. ಪ್ರಕರಣವನ್ನು ದಾಖಲಿಸಿಕೊಂಡಿದ್ದ ಮಾಳಮಾರುತಿ ಪೊಲೀಸರು ಪ್ರಕರಣ ಬೇಧಿಸಿದ್ದಾರೆ. ಡಿಸಿಪಿ ರವೀಂದ್ರ ಗಡಾದಿ ಹಾಗೂ ಮಾರ್ಕೇಟ್ ಎಸಿಪಿ ಸದಾಶಿವ ಕಟ್ಟಿಮನಿ ಅವರ ಮಾರ್ಗದರ್ಶನದಲ್ಲಿ ಮಾಳಮಾರುತಿ ಪೊಲೀಸ್ ಠಾಣೆಯ ಪಿಐ ಸುನೀಲ ಪಾಟೀಲ, ಪಿಎಸ್‌ಐ ಹೊನ್ನಪ್ಪ ತಳವಾರ, ಶ್ರೀಶೈಲ್ ಹುಳಗೇರಿ ಹಾಗೂ ಅವರ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹತ್ಯೆಗೆ ಉಪಯೋಗಿಸಿದ್ದ ಬೈಕ್ ವಶಕ್ಕೆ ಪಡೆದಿದ್ದಾರೆ.