ದುಬೈ ಮಾಲ್ಡೀವ್ಸ್ ಮಲೇಶಿಯಾ ಸುತ್ತಾಡಿ ನೇಪಾಳದಲ್ಲಿ ಅಡಗಿದ್ದ ವಂಚಕ ಬೆಳಗಾವಿ ಪೋಲೀಸರ ಬಲೆಗೆ…
ಬೆಳಗಾವಿ- ಬೆಳಗಾವಿ ಹೋಲ್ ಸೇಲ್ ತರಕಾರಿ ಮಾರುಕಟ್ಟೆಯ ವ್ಯಾಪಾರಿಗಳಿಗೆ ,ಸಿಮೆಂಟ್ ಮತ್ತು ಕಬ್ಬಿಣದ ದಂಧೆಯಲ್ಲಿ ಭರಪೂರ ಲಾಭ ಸಿಗುತ್ತದೆ ಎಂದು ನಂಬಿಸಿ ಕೋಟ್ಯಾಂತರ ₹ ಲಪಟಾಯಿಸಿದ್ದ ಕೋಟ್ಯಾಧೀಶ ವಂಚಕನನ್ನು ಬಂಧಿಸುವಲ್ಲಿ ಬೆಳಗಾವಿ ಪೋಲೀಸರು ಯಶಸ್ವಿಯಾಗಿದ್ದಾರೆ.
ಖಾಕಿ ಖದರ್ ತೋರಿಸಿ,ಬೆಳಗಾವಿಯ ಸಿಂಗಮ್ ಎಂದೇ ಪ್ರಸಿದ್ದಿ ಪಡೆದಿರುವ ಎಸಿಪಿ ನಾರಾಯಣ ಭರಮಣಿ ನೇತ್ರತ್ವದ ತಂಡ ಹೋಲ್ ಸೇಲ್ ತರಕಾರಿ ವ್ಯಾಪಾರಿಗಳಿಗೆ ಕೋಟಿ..ಕೋಟಿಯ ಟೋಪಿ ಹಾಕಿ, ಮಾಲ್ಡೀವ್ಸ್, ದುಬೈ,ಮಲೇಶಿಯಾ ಸುತ್ತಾಡಿ ಚೈನೀ ಮಾಡಿ ನಂತರ ನೇಪಾಳದಲ್ಲಿ ಅಡಗಿದ್ದ ವಂಚಕನನ್ನು ಬೆಳಗಾವಿ ಪೋಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಬೆಳಗಾವಿಯ ಕೆಲ ತರಕಾರಿ ವ್ಯಾಪಾರಿಗಳನ್ನು ಮುಂದಿಟ್ಟುಕೊಂಡು ಸಿಮೆಂಟ್ ಮತ್ತು ಕಬ್ಬಣದ ದಂಧೆಯಲ್ಲಿ ಹಣ ಇನ್ವೆಸ್ಟ್ ಮಾಡಿದ್ರೆ ಹಣ ಡಬಲ್ ಮಾಡಿಕೊಡುತ್ತೇನೆಂದು ಇನ್ವೆಸ್ಟ್ ಮಾಡಿದ ಹಣವನ್ನು ಡುಬುಲ್ ಮಾಡಿ ವಿದೇಶಕ್ಕೆ ಹಾರಿಹೋಗಿದ್ದ ಶಿವಾನಂದ ದಾದು ಕುಂಬಾರ ಈಗ ಬೆಳಗಾವಿ ಪೋಲೀಸರ ವಶದಲ್ಲಿದ್ದಾನೆ.
ಈ ವಂಚನೆ ಕಳೆದ ಆರೇಳು ತಿಂಗಳ ಹಿಂದೆಯೇ ನಡೆದಿತ್ತು ಖಾಸಗಿ ಹೋಲ್ ಸೇಲ್ ತರಕಾರಿ ಮಾರುಕಟ್ಟೆಯ ಹಲವಾರು ಜನ ಹೋಲ್ ಸೇಲ್ ವ್ಯಾಪಾರಿಗಳು ಶಿವಾನಂದ ದಾದು ಕಂಬಾರ ಹತ್ತಿರ ಹೋಲ್ ಸೇಲ್ ಆಗಿ ಕೋಟ್ಯಾಂತರ ರೂ ಹಣ ಇನ್ವೆಸ್ಟ್ ಮಾಡಿದ್ದರು.
ಹಣ ಡಬಲ್ ಆಗುವದರ ಬದಲು ಕೋಟ್ಯಾಂತರ ರೂ ಹಣ ಡುಬುಲ್ ಆದ್ರೂ ವಂಚನೆಗೊಳಗಾದ ಕೆಲವೇ ಕೆಲವು ಜನ ಮಾತ್ರ ಪೋಲೀಸರಿಗೆ ದೂರು ನೀಡಿದ್ದರು. ಈ ಕುರಿತು ಸಿಇಎನ್ ಸೈಬರ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು,ತನಿಖಾಧಿಕಾರಿಯನ್ನಾಗಿ ಎಸಿಪಿ ನಾರಾಣ ಭರಮಣಿ ಅವರನ್ನು ನೇಮಿಸಿ ತನಿಖೆ ಶುರು ಮಾಡಿದ್ದ ಬೆಳಗಾವಿ ಪೋಲೀಸರ ತಂಡ ಶಿವಾನಂದ ದಾದೂ ಕುಂಬಾರ ಎಂಬ ಮಹಾ ವಂಚಕನನ್ನು ಬಂಧಿಸಿ ಬೆಳಗಾವಿಗೆ ತಂದಿದ್ದಾರೆ ವಿಚಾರಣೆ ಮುಂದುವರೆಸಿದ್ದಾರೆ.
ಬೆಳಗಾವಿ ಪೋಲೀಸರ ತಂಡ ನೇಪಾಳಕ್ಕೆ ಹೋಗಿ ಮಹಾ ವಂಚಕ ಶಿವಾನಂದ ದಾದು ಕುರಿತು ಮಾಹಿತಿ ಕಲೆ ಹಾಕಿದ್ದರು.ಇಂಟರ್ ಪೋಲ್ ಸಹಕಾರ ಪಡೆದಿದ್ದರು. ಈ ವಂಚಕ ನೇಪಾಳದಿಂದ ಮುಂಬಯಿ ಗೆ ಬರುತ್ತಿರುವ ಮಾಹಿತಿ ಬೆಳಗಾವಿ ಪೋಲೀಸರಿಗೆ ಸಿಗುತ್ತಿದ್ದಂತೆಯೇ ಬೆಳಗಾವಿ ಪೋಲೀಸರ ತಂಡ ಅಲರ್ಟ್ ಆಗಿ ಮಹಾ ವಂಚಕನನ್ನು ಮುಂಬಯಿ ಮಹಾನಗರದಲ್ಲಿ ಬಂಧಿಸಿದ್ದಾರೆ.
ಶಿವಾನಂದ ದಾದು ಕುಂಬಾರ ಬಳಿ ಯಾರು ಎಷ್ಟು ಕೋಟಿ ಹಣ ಇನ್ವೆಸ್ಟ್ ಮಾಡಿದ್ದರು.ಯಾರಿಗೆ ಎಷ್ಟು ಲಾಸ್ ಆಗಿದೆ ಎನ್ನುವ ಮಾಹಿತಿ ಸಿಗಬೇಕಾಗಿದೆ. ಈ ಕುರಿತು ಬೆಳಗಾವಿ ಸುದ್ದಿ ಡಾಟ್ ಕಾಮ್ ಶಿಘ್ರದಲ್ಲೇ ಸಮಗ್ರ ವರದಿ ಪ್ರಕಟಿಸಲಿದೆ.