Breaking News

ದರ ದುಬಾರಿ ಆದರೂ ಖರೀದಿ ಬರ್ಜರಿ

ಬೆಳಗಾವಿ:

ಜಿಟಿ ಜಿಟಿ ಮಳೆಯಲ್ಲೂ ಬೆಳಗಾವಿ ನಗರದಲ್ಲಿ ದಸರಾ ಉತ್ಸವದ ಉತ್ಸಾಹದಲ್ಲಿ ಕೊಂಚೂ ಏರುಪೇರಾಗಿಲ್ಲ. ಹಣ್ಣು ಹಂಪಲ ಹೂ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳ ಬೆಲೆ ದುಭಾರೀಯಾಗಿದ್ದರೂ ಸಹ ಖರೀದಿ ಬರ್ಜರಿಯಾಗಿ ನಡೆಯುತ್ತಿದೆ.

ಬೆಳಗಾವಿ ನಗರದ ಮಾರುಕಟ್ಟೆ ಗೆ ದಸರಾ ಹಬ್ಬದ ಕಳೆ ಬಂದಿದೆ. ನಗರದ ಖಡೇಬಜಾರ, ಗಣಪತಿ ಬೀದಿ ಸೇರಿದಂತೆ ಎಲ್ಲಿ ನೋಡಿದಲ್ಲಿ ಹೂ ಮಾಲೆ, ಬಣ್ಣಿಗಿಡದ ತಪ್ಪಲು, ಮಾವಿನ ತಪ್ಪಲು, ಕಬ್ಬುಬಸೇರಿದಂತೆ ಹಣ್ಣು ಹಂಪಲಗಳ ಖರೀದಿ ಜೋರಾಗಿಯೇ ನಡೆದಿದೆ.

ನಗರದ ಅಂಗಡಿ ಮುಂಗಟ್ಟುಗಳಲ್ಲಿ ಆಯುಧ ಫೂಜೆ ನೆರವೇರಿಸುವುದರಲ್ಲಿ ನಗರದ ಜನ ನಿರತರಾಗಿದ್ದಾರೆ. ಒಂದು ಕಡೆವಾಯುಧ ಪೂಜೆ. ಇನ್ನೊಂದುಬಕಡೆ ದಸರಾ ಹಬ್ಬದ ತಯಾರಿ ಜೊತೆ ಜೊತೆಯಾಗಿಯೇ ನಡೆಯುತ್ತಿದೆ. ಬೆಳಗಾವಿ ಮಾರುಕಟ್ಟೆಯ ಲ್ಲಿ ಹಬ್ಬದ ಖರೀದಿ ಯಲ್ಲಿ ಜನರು ಮುಗಿ ಬಿದ್ದಿದ್ದಾರೆ.

ಮಂಗಳವಾರ ದಸರಾ ಹಬ್ಬ ಬೆಳಗಾವಿ ನಗರದಲ್ಲಿ ಈ ಹಬ್ಬವನ್ನು ವೈಶಿಷ್ಯ ಪೂರ್ಣವಾಗಿ ಆಚರಣೆ ಮಾಡಲಾಗುತ್ತದೆ. ಕ್ಯಂಪ್ ಪ್ರದೇಸದಲ್ಲಿ ನವರಾತ್ರಿ ಸಂದರ್ಭದಲ್ಲಿ ದುರ್ಗಾದೇವಿ ಮೂರ್ತಿಯನ್ನು ಪ್ರತಿಷ್ಠಾನ ಮಾಡಲಾಗುತ್ತದೆ. ಮಂಗಳವಾರ ದಸರಾ ಹಬ್ಬದ ದಿನ ಪ್ರತಿಷ್ಠಾಪನೆಗೊಂಡ ಎಲ್ಲ ಮೂರ್ತಿಗಳನ್ನು ಭವ್ಯ ಮೆರವಣಿಗಗಳ ಮೂಲಕ ವಿಸರ್ಜನೆ ಮಾಡಲಾಗುತ್ತದೆ ‌.

ಕ್ಯಾಂಪ್ ಪ್ರದೇಶದಲ್ಲಿ ನಡೆಯುವ ದಸರಾ ಮಹೋತ್ಸವದಲ್ಲಿ, ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚನ್ ಬಂದುಗಳು ಸೇರಿಕೊಂಡು ಹಬ್ಬ ಆಚರಿಸುತ್ತಿರುವು ದು ವೈಶಿಷ್ಟ್ವಾಗಿದೆ.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *