ಗೋವಾ,ಮಹಾರಾಷ್ಟ್ರ ಗಡಿಯಲ್ಲಿ ವೈದ್ಯರ ತಂಡದ ನಿಯೋಜನೆ -ಡಿಸಿ ಬೊಮ್ಮನಹಳ್ಳಿ
ಬೆಳಗಾವಿ- ನೆರೆಯ ರಾಜ್ಯಗಳಲ್ಲಿ ಕೊರೋನಾ ಸೊಂಕು ಹರಡುತ್ತಿರುವ ಹಿನ್ನಲೆಯಲ್ಲಿ , ಮುಂಜಾಗೃತಾ ಕ್ರಮವಾಗಿ,ಬೆಳಗಾವಿ ಜಿಲ್ಲೆಯ,ಗೋವಾ,ಮತ್ತು ಮಹಾರಾಷ್ಟ್ರದ ಗಡಿಯಲ್ಲಿ ವೈದ್ಯರ ತಂಡಗಳನ್ನು ನಿಯೋಜಿಸಿ ಬೆಳಗಾವಿ ಜಿಲ್ಲೆ ಗಡಿ ಪ್ರವೇಶ ಮಾಡುವವರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.ಎಂದು ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಮಾಹಿತಿ ನೀಡಿದರು .
ಬೆಳಗಾವಿ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಧಾರ್ಮಿಕ ಮುಖಂಡರ,ವಿವಿಧ ಸಂಘಟನೆಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೊಂಕು ಹರಡದಂತೆ ಎಲ್ಲ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ .ಇದಕ್ಕೆ ಸಾರ್ವಜನಿಕರು ಸಹಕರಿಸಿದ್ದಾರೆ ಈ ಸೊಂಕವನ್ನು ತಡೆಯುವುದು ಎಲ್ಲರ ಸಾಮಾಜಿಕ ಜವಾಬ್ದಾರಿಯಾಗಿದೆ.ವಿದೇಶದಿಂದ ಬೆಳಗಾವಿಗೆ ಬಂದವರ ಬಗ್ಗೆ ಮಾಹಿತಿ ಇದ್ದರೆ ತಿಳಿಸಬೇಕು,ಇದು ಅರೋಗ್ಯಕ್ಕೂ ಒಳ್ಳೆಯದು ,ಸಮಾಜದ ಆರೋಗ್ಯಕ್ಕೆ ಒಳ್ಳೆಯದು ಎಂದು ಡಿಸಿ ಬೊಮ್ಮನಹಳ್ಳಿ ಹೇಳಿದರು .
ಕೋರೋನಾ ಸೊಂಕು ತಡೆಯಲು ಜಿಲ್ಲಾಡಳಿತ ಜೊತೆ ಸಾರ್ವಜನಿಕರು ಸಹಕರಿಸಬೇಕು, ಶುಚಿತ್ವ ಕಾಪಾಡುವದರ ಜೊತೆಗೆ ತಮ್ಮ ತಮ್ಮ ಬಡಾವಣೆ ಗಳಲ್ಲಿ ಹೆಚ್ಚು,ಹೆಚ್ವು ಜನ ಸೇರುವ ಕಾರ್ಯಕ್ರಮಗಳು ಆಗದಂತೆ ನೋಡಿಕೊಳ್ಳಬೇಕು,ಒಂದು ವಾರದವರೆಗೆ ಜಿಲ್ಲೆಯ ಸಂತೆ ಮತ್ತು ಜಾತ್ರೆಗಳನ್ನು ನಿಷೇಧ ಮಾಡಲಾಗಿದ್ದು.ಸಾರ್ವಜನಿಕರು ಸಹಕರಿಸಬೇಕೆಂದು ಜಿಲ್ಲಾಧಿಕಾರಿಗಳು ಮುಖಂಡರಲ್ಲಿ ಮನವಿ ಮಾಡಿಕೊಂಡರು.
ಕೋರೋನಾ ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ಅನೇಕ ಜನ ಮುಖಂಡರು ಸಲಹೆ ಸೂಚನೆಗಳನ್ನು ನೀಡಿದರು.