ಬೆಳಗಾವಿ, ಮಾ.೧೯(ಕರ್ನಾಟಕ ವಾರ್ತೆ): 2019-20ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಬೆಳಗಾವಿ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆದು ರೈತರು ಬೆಳೆದ ತೊಗರಿ ಮತ್ತು ಕಡಲೆ ಕಾಳನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಇವರ ಮೂಲಕ ಖರೀದಿಸಲಾಗುತ್ತಿದೆ. ಸದರಿ ಖರೀದಿ ಪ್ರಕ್ರಿಯೆಯಲ್ಲಿ ಕೆಲವು
ಸಹಕಾರ ಸಂಘಗಳು ರೈತರಿಂದ ಪ್ರತಿ ಕ್ವಿಂಟಾಲ್‌ಗೆ ರೂ.100 ರಿಂದ 200 ಗಳವರೆಗೂ ಅನಧಿಕೃತ ಹಣ
ವಸೂಲಿ ಮಾಡುತ್ತಿರುವುದು ಕೆಲವು ದಿನ ಪತ್ರಿಕೆಗಳಲ್ಲಿ ಮತ್ತು ದೃಶ್ಯ ಮಾಧ್ಯಮಗಳಲ್ಲಿ ವರದಿಯಾಗಿರುತ್ತದೆ.
“ಬೆಂಬಲ ಬೆಲೆ ಯೋಜನೆಯಡಿ” ಮಾರಾಟ ಮಾಡುವ ತೊಗರಿ ಮತ್ತು ಕಡಲೆ ಉತ್ಪನ್ನಗಳಿಗೆ ರೈತರು
ಯಾವುದೇ ರೀತಿಯ ಹಣವನ್ನು ಖರೀದಿ ಕೇಂದ್ರಗಳಲ್ಲಿ ಯಾರೊಬ್ಬರಿಗೂ ನೀಡದೆ ಇರಲು ಕೋರಿದೆ. ರೈತ
ಬಾಂಧವರು ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಸ್ಥಳೀಯವಾಗಿ ದೂರು ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.
ಯಾವುದೇ ಸಹಕಾರ ಸಂಘಗಳು ರೈತರಿಂದ ಹಣ ವಸೂಲಿ ಮಾಡುವುದು ಕಂಡು ಬಂದಲ್ಲಿ ಅಂತಹ ಸಹಕಾರಿ ಸಂಘಗಳ
ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಕಪ್ಪುಪಟ್ಟಿಗೆ ಸೇರಿಸಲಾಗುವುದು. ನಂತರದಲ್ಲಿ ಇಂತಹ ಸಂಘಗಳಲ್ಲಿ
ಖರೀದಿ ಕೇಂದ್ರಗಳನ್ನು ತೆರೆಯಲಾಗುವುದಿಲ್ಲ ಎಂದು ಅವರು ಎಚ್ಚರಿಕೆಯನ್ನು ನೀಡಿದ್ದಾರೆ.
ರೈತರನ್ನು ಹೊರತುಪಡಿಸಿ ಮಧ್ಯವರ್ತಿಗಳು, ವರ್ತಕರು ಖರೀದಿ ಕೇಂದ್ರಗಳಿಗೆ ತೊಗರಿ ಮತ್ತು ಕಡಲೆಕಾಳು ಮಾರಾಟಕ್ಕೆ ತಂದಿದ್ದು ಕಂಡು ಬಂದಲ್ಲಿ ಅಂಥವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
***