ಇಂದು ಭಾನುವಾರದ ಸಂಜೆ ಹೆಲ್ತ್ ಬುಲಿಟೀನ್ ಬಿಡುಗಡೆಯಾಗಿದ್ದು ಬೆಳಗಾವಿ ಜಿಲ್ಲೆಯ ಯಾವುದೇ ಪಾಸಿಟೀವ್ ಕೇಸ್ ಪತ್ತೆಯಾಗಿಲ್ಲ.
ಐ ಸಲ್ಯುಟ್ ಡಿಸಿ.,…ಬಿಗ್ ಸಲ್ಯುಟ್ ಟು ನಿಪ್ಪಾಣಿ ಪೋಲೀಸ್….!!!!
ಬೆಳಗಾವಿ ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿಯವರ ಕ್ವಾರಂಟೈನ್ ಸಮಯ ಪ್ರಜ್ಞೆ ; ಪೊಲೀಸ್ ರ ಕರ್ತವ್ಯ ಪ್ರಜ್ಞೆ : ತಪ್ಪಿದ ಕೊರೊನಾ ಸ್ಪೋಟದ ಭಾರೀ ಅನಾಹುತ*
ಇಂದು 22 ಜನ ಕೊರೊನಾ ಸೋಂಕಿತರ ಸಂಖ್ಯೆಯೇ
ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಆಘಾತಕಾರಿ ಸಂಗತಿಯಾಗಿದೆ. ಆದರೆ, ಇದೇ ಸೋಂಕಿತರಿಂದ ಬೆಳಗಾವಿ ಜಿಲ್ಲೆಯಲ್ಲಿ ದಿನಗಳ ಹಿಂದೆ ಮತ್ತೋಂದು ಭಾರಿ ಸ್ಪೋಟವಾಗಿ, ಇಡೀ ಜಗತ್ತೇ ಬೆಳಗಾವಿಯತ್ತ ನೋಡುವಂತಾಗುತ್ತಿತ್ತು. ಬೆಳಗಾವಿ ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಅವರ ಸಮಯ ಪ್ರಜ್ಞೆ ಹಾಗೂ ದೃಢ ನಿರ್ಧಾರದಿಂದಾಗಿ ಮತ್ತು ನಿಪ್ಪಾಣಿ ಪೊಲೀಸ್ ರ ಕರ್ತವ್ಯ ಪ್ರಜ್ಞೆಯಿಂದಾಗಿ ಆ
ಅನಾಹುತ ತಪ್ಪಿದಂತಾಗಿದೆ.
*ಘಟನೆ ಹಿನ್ನಲೆ:*
ಕಳೆದ ಮಾರ್ಚ ತಿಂಗಳಿನಲ್ಲಿ ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಸುಮಾರು 38 ಜನರು ರಾಜಸ್ತಾನದ ಅಜ್ಮೀರ ದರ್ಗಾ ದರ್ಶನಕ್ಕೆಂದು ತೆರಳಿದ್ದರು. ಅದೇ ಸಂದರ್ಭದಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗುತ್ತದೆ. ಇದರಿಂದ ಬೆಳಗಾವಿ ಜಿಲ್ಲೆಯಿಂದ ಅಜ್ಮೀರಕ್ಕೆ ತೆರಳಿದ ಇವರೆಲ್ಲ ಅಲ್ಲಿಯೇ ಉಳಿದುಕೊಳ್ಳುತ್ತಾರೆ. ಅಲ್ಲಿ ಇವರಿಗೆಲ್ಲ ಕ್ವಾರಂಟೈನ್ ನಲ್ಲಿ ಇಡಲಾಗುತ್ತದೆ. ಒಂದು ತಿಂಗಳದ ನಂತರ ಇವರೆಲ್ಲ ಅಲ್ಲಿಯ ವೈದ್ಯಕೀಯ ಪರೀಕ್ಷೆಗೆ ಒಳಪಟ್ಟು ಅಜ್ಮೇರ ವ್ಯಾಪ್ತಿಯ ಡಿಸಿಯ ಅನುಮತಿ ಪತ್ರದೊಂದಿಗೆ ವೈದ್ಯಕೀಯ ಸರ್ಟಿಫಿಕೇಟ್ ಸಮೇತ ರಾಜ್ಯಕ್ಕೆ ಮರಳುತ್ತಾರೆ. ಬೆಳಗಾವಿ ಗಡಿಗೆ ಆಗಮಿಸಿದಾಗ ಬೆಳಗಾವಿಯ ಒಳ ಪ್ರವೇಶಕ್ಕೆ ಅವಕಾಶ ದೊರೆಯದೇ ನಿರಾಶೆಯಾಗುತ್ತದೆ.
ರಾಜಸ್ತಾನ ರಾಜ್ಯದ ಡಿಸಿಯ ಅನುಮತಿ ಪತ್ರ ಮತ್ತು ವೈದ್ಯಕೀಯ ವರದಿಯೊಂದಿಗೆ ಬೆಳಗಾವಿಗೆ ಬಂದರೂ ಇವರನ್ನು ಗಡಿಭಾಗವಾದ ನಿಪ್ಪಾಣಿ ಚೆಕ್ ಪೋಸ್ಟ್ ನಲ್ಲಿ ತಡೆಹಿಡಿಯಲಾಗುತ್ತದೆ. ಅಷ್ಟೇ ಅಲ್ಲ, ಇವರನೆಲ್ಲ ಮತ್ತೇ ಮರಳಿ ರಾಜಸ್ತಾನಕ್ಕೆ ಕಳೆಸಲಾಗುತ್ತದೆ. ಬೆಳಗಾವಿ ಪ್ರವೇಶ ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುತ್ತಾರೆ. ದುರಂತವೆಂದರೆ, ಇವರೆಲ್ಲ ರಾಜಸ್ತಾನದ ಅಜ್ಮೇರ್ ಗೆ ವಾಪಸ್ಸಾಗದೇ ಕಳ್ಳ ಮಾರ್ಗದಿಂದ ಬೆಳಗಾವಿ ಪ್ರವೇಶಿಸುತ್ತಾರೆ. ಗುಪ್ತ ಪ್ರವೇಶ ಪಡೆದ ಇವರ ಬಗ್ಗೆ ಮಾಹಿತಿ ಪಡೆದ ಪೋಲಿಸರು
ಇವರನೆಲ್ಲ ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾರೆ.
ಕಳ್ಳ ಮಾರ್ಗದಿಂದ ಒಳಪ್ರವೇಶಿಸಿ ಇವರೆಲ್ಲ ತಮ್ಮ ತಮ್ಮ ಊರುಗಳಿಗೆ ಪ್ಲ್ಯಾನ್ ಮಾಡಿಕೊಂಡಿದ್ದರು ಆದರೆ, ಜಿಲ್ಲಾಡಳಿತ ಇದಕ್ಕೆ ಅವಕಾಶ ಮಾಡಿಕೊಡದೆ ನಿಪ್ಪಾಣಿಯ ಮೂರಾರಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗುತ್ತದೆ.ಜೊತೆಗೆ ವಾಹನವನ್ನೂ ಸೀಜ್ ಮಾಡುತ್ತಾರೆ.
ಮೇ 2ರಂದು ನಡೆದ ಈ ಎಲ್ಲ ಘಟನೆಯ ನಂತರ ಮೇ 7ರಂದು ಇವರೆಲ್ಲರ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಕಳೆಸಲಾಗುತ್ತದೆ. ಇಂದು ಪರೀಕ್ಷೆ ಪ್ರಕಟಗೊಂಡಿದ್ದು, 38 ಜನರ ಪೈಕಿ 30 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರಲ್ಲಿಯ 22 ಜನರು ಬೆಳಗಾವಿ ಜಿಲ್ಲೆಯವರಾಗಿದ್ದು ಉಳಿದ 8 ಜನ ಬಾಗಲಕೋಟದವರಾಗಿದ್ದಾರೆ.
ಈ ಎಲ್ಲ ಪುಣ್ಯಾತ್ಮರು ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕಾ ಕೇಂದ್ರಗಳ ಸರ್ಕಾರಿ ಪ್ರವಾಸಿ ಕೇಂದ್ರಗಳಲ್ಲಿ ಆಹಾರ ತಯಾರಕರಾಗಿದ್ದಾರೆ. ಎಲ್ಲರೂ ನಾನ್ ವೆಜ್ ತಯಾರಿಕೆಯಲ್ಲಿ ಕೈಎತ್ತಿದವರು. ಎನ್ನುವದು ವಿಶೇಷ
*ತಪ್ಪಿದ ಅನಾಹುತ:*
ಮೇ 2ರಂದು ಕೊರೊನಾ ವೈದ್ಯಕೀಯ ಪರೀಕ್ಷೆಯ ನೆಗೆಟಿವ್ ಸರ್ಟಿಫಿಕೇಟ್ ಹಿಡಿದುಕೊಂಡು ಬಂದಾಗ, ಆ ಸರ್ಟಿಫಿಕೇಟ್ ನಂಬಿ ಇವರನೆಲ್ಲ ಅವರವರ ಊರುಗಳಿಗೆ ಕಳುಹಿಸಿ ಕೊಟ್ಟಿದ್ದರೆ, ಇಂದು ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಮಾಡುವ ಸ್ಪೋಟ್ ಊಹಿಸಲು ಅಸಾಧ್ಯವಾಗುತ್ತಿತ್ತು. ಇಂಥ ದೊಡ್ಡ ಅನಾಹುತವನ್ನು ನಿಪ್ಪಾಣಿ ಪೋಲಿಸರು, ಬೆಳಗಾವಿ ಜಿಲ್ಲಾಧಿಕಾರಿಗಳು ಸಮಯ ಪ್ರಜ್ಞೆ ಹಾಗೂ ದೃಢ ನಿರ್ಧಾರದಿಂದಾಗಿ ತಪ್ಪಿಸಿದ್ದಾರೆ.
ಹೀಗಾಗಿ, ಇವರ ಸಾಹಸಕ್ಕೆ, ಕಾಳಜಿಗೆ, ನಿರ್ಧಾರಕ್ಕೆ ದೊಡ್ಡದಾದ ಸಲಾಮ್ ಹೇಳಲೇಬೇಕಾಗುತ್ತದೆ!
****