ಬೆಳಗಾವಿ- ನಾಳೆ ಮಂಗಳವಾರ ಮಹಾರಾಷ್ಟ್ರದ ಇಬ್ವರು ಸಚಿವರು ಬೆಳಗಾವಿಗೆ ಬರಲಿದ್ದು, ಈ ಇಬ್ವರು ಸಚಿವರು ಬೆಳಗಾವಿ ಗಡಿ ಪ್ರವೇಶ ಮಾಡದಂತೆ ನಿರ್ಬಂಧ ವಿಧಿಸಿ ಬೆಳಗಾವಿ ಜಿಲ್ಕಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಮಹಾರಾಷ್ಟ್ರದ ಸಚಿವರಾದ ಚಂದ್ರಕಾಂತ ಪಾಟೀಲ,ಮತ್ತು ಶಂಬುರಾಜೆ ದೇಸಾಯಿ ಇಬ್ಬರೂ ಬೆಳಗಾವಿ ಗಡಿ ಪ್ರವೇಶ ಮಾಡದಂತೆ ಕ್ರಮ ಜರುಗಿಸಲು ಆದೇಶ ಹೊರಡಿಸಿದ್ದಾರೆ.
ಮಹಾರಾಷ್ಟ್ರದ ಇಬ್ಬರು ಸಚಿವರು ಬೆಳಗಾವಿಗೆ ಆಗಮಿಸಿ ಬೆಳಗಾವಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿ,ಶಾಂತಿಗೆ ಭಂಗ ತರುವ ಸಾಧ್ಯತೆ ಇತ್ತು ಹೀಗಾಗಿ ರಾಜ್ಯ ಸರ್ಕಾರ ಈ ವಿಚಾರದಲ್ಲಿ ಕನ್ನಡದ ಹಿತಾಸಕ್ತಿ ಕಾಯುವ ನಿಟ್ಟಿನಲ್ಲಿ ದಿಟ್ಟ ಕ್ರಮ ಕೈಗೊಂಡಿದೆ.
ಬೆಳಗಾವಿ ಜಿಲ್ಲಾಧಿಕಾರಿಗಳು ಹೊರಡಿಸಿದ ಆದೇಶ ಹೀಗಿದೆ.
ನಾಳೆ ಬೆಳಗಾವಿಗೆ ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವರು ಆಗಮಿಸುವ ಸಾಧ್ಯತೆ ಹಿನ್ನೆಲೆ.
ಮಹಾರಾಷ್ಟ್ರ ಇಬ್ಬರು ಸಚಿವರು, ಓರ್ವ ಸಂಸದರಿಗೆ ಬೆಳಗಾವಿಗೆ ಬರಲು ನಿಷೇಧ.
ನಿಷೇಧ ಹೇರಿ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ.
ಡಿ.6ರಂದು ಮಹಾರಾಷ್ಟ್ರದ ಚಂದ್ರಕಾಂತ ಪಾಟೀಲ್, ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ.
ಶಂಬುರಾಜ ದೇಸಾಯಿ, ಅಬಕಾರಿ ರಾಜ್ಯ ಸಚಿವ.
ಹಾಗೂ ಧೈರ್ಯಶೀಲ ಮಾನೆ, ಸಂಸದರು ಇವರು ಬೆಳಗಾವಿ ಜಿಲ್ಲೆಗೆ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರಿದ್ದು, ಆ ಸಂದರ್ಭದಲ್ಲಿ ಪ್ರಚೋದನಾಕಾರಿ ಭಾಷಣ ಅಥವಾ ಪ್ರಚೋದನಾಕಾರಿ ಹೇಳಿಕೆ ನೀಡುವ ಸಾಧ್ಯತೆಗಳು ಇರುತ್ತವೆ. ಇದರಿಂದ ಭಾಷಾ ವೈಷಮ್ಯ ಬೆಳೆದು ಹೆಚ್ಚಿನ ಪ್ರಮಾಣದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆಗಳಿರುತ್ತವೆ. ಅದು ಅಲ್ಲದೇ ಸಾರ್ವಜನಿಕರ ಆಸ್ತಿ ಪಾಸ್ತಿಗಳಿಗೆ ಹಾನಿ ಉಂಟಾಗುವುದನ್ನು ಹಾಗೂ ಕರ್ನಾಟಕದ ಮರಾಠಿ ನಿವಾಸಿಗರನ್ನು ಪ್ರಚೋದಿಸುವ ಸಾದ್ಯತೆ ಇರುವುದರಿಂದ, ಬೆಳಗಾವಿ ಜಿಲ್ಲೆಯಲ್ಲಿ ಕಾನೂನು ಸುವ್ಯಸ್ಥೆಯನ್ನು ಹಾಗೂ ಸಾರ್ವಜನಿಕರ ನೆಮ್ಮದಿಯನ್ನು ಕಾಪಾಡುವ ಹಿಕದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ನಾನು, ನಿತೇಶ್.ಕೆ.ಪಾಟೀಲ ಭಾ.ಆ.ಸೇ. ಜಿಲ್ಲಾ ದಂಡಾಧಿಕಾರಿ, ಬೆಳಗಾವಿ ಜಿಲ್ಲೆ ಸಿಆರ್‌ಪಿಸಿ 1973 ಕಲಂ. 114 (3) ರನ್ವಯ ನನ್ನಲ್ಲಿ ಪ್ರದತ್ತ ಅಧಿಕಾರದ ಮೇರೆಗೆ ದಿನಾಂಕ: 06.12.2022 ರಂದು ಮಹಾರಾಷ್ಟ್ರ ರಾಜ್ಯದ ಶ್ರೀ ಚಂದ್ರಕಾಂತ (ದಾಡಾ) ಪಾಟೀಲ ಮಾನ್ಯ ಉನ್ನತ ಮತ್ತು ತಾಂತ್ರಿಕ ಶಿಕ್ಷಣ, ಜವಳಿ ಹಾಗೂ ಸಂಸದಿಯ ವ್ಯವಹಾರಗಳ ಸಚಿವರು, ಶ್ರೀ ಶಂಬುರಾಜ ದೇಸಾಯಿ ಮಾನ್ಯ ಅಬಕಾರಿ ರಾಜ್ಯ ಸಚಿವರು ಹಾಗೂ ಶ್ರೀ ಧೈರ್ಯಶೀಲ ಮಾನೆ ಮಾನ್ಯ ಸಂಸದರು. ಇವರು ಬೆಳಗಾವಿ ಜಿಲ್ಲೆಯ ಗಡಿಯೊಳಗೆ ಪ್ರವೇಶಿಸದಂತೆ ಕ್ರಮ ವಹಿಸಲು ಈ ನಿರ್ಭಂಧಿತ ಆದೇಶವನ್ನು ಹೊರಡಿಸಿರುತ್ತೇನೆ.