ಬೆಳಗಾವಿ- ಚುನಾವಣೆ ಸಮೀಪ ಬಂದಾಗ ಕಾಲು ಕೆದರಿ ಕ್ಯಾತೆ ತೆಗೆಯುವ ನಾಡದ್ರೋಹಿ ಎಂಇಎಸ್ ಗೆ ಬೆಳಗಾವಿ ಡಿಸಿ ನಿತೇಶ್ ಪಾಟೀಲ ಲಗಾಮು ಹಾಕಿದ್ದಾರೆ.
ರಾತ್ರೋರಾತ್ರಿ ನಾಡದ್ರೋಹಿ ಎಂಇಎಸ್‌ಗೆಬಿಗ್ ಶಾಕ್ ಕೊಟ್ಟ ಬೆಳಗಾವಿ ಡಿಸಿ,ಶಿವಸೇನೆ ಸಂಸದ ಧೈರ್ಯಶೀಲ್ ಮಾನೆಗೆ ಬೆಳಗಾವಿ ಗಡಿ ಪ್ರವೇಶ ನಿರ್ಬಂಧ ಹೇರಿ ನಿನ್ನೆ ರಾತ್ರಿ ಆದೇಶ ಹೊರಡಿಸಿದ್ದಾರೆ. ಜ. 17 ಬೆಳಗಾವಿ ಜಿಲ್ಲೆಯ ಗಡಿ ಪ್ರವೇಶಕ್ಕೆ ನಿರ್ಬಂಧ ಹೇರಿ ಡಿಸಿ ನಿತೇಶ ಪಾಟೀಲ ಆದೇಶ ಹೊರಡಿಸುವ ಮೂಲಕ ನಾಡದ್ರೋಹಿಗಳಿಗೆ ಲಗಾಮು ಹಾಕಿದ್ದಾರೆ.ಎಂಇಎಸ್ ಆಯೋಜಿಸಿದ್ದ ಹುತಾತ್ಮ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಲಿದ್ದ ಮಾನೆಗೆ ಬೆಳಗಾವಿ ಡಿಸಿ ಬ್ರೇಕ್ ಹಾಕಿದ್ದಾರೆ.ಸಿಆರ್‌ಪಿಸಿ 1997, ಕಲಂ 144 (3) ಅನ್ವಯ ವಿಶೇಷ ಅಧಿಕಾರ ಬಳಸಿ ಧೈರ್ಯಶೀಲ್ ಮಾನೆಗೆ ನಿರ್ಬಂಧ ಹೇರಿದ್ದಾರೆ.
ಮಹಾರಾಷ್ಟ್ರದ ಗಡಿ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಧೈರ್ಯಶೀಲ್ ಮಾನೆ,ಬೆಳಗಾವಿಗೆ ಆಗಮಿಸಿ,ಪ್ರಚೋದನಾತ್ಮಕ ಭಾಷಣ ಮಾಡಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆ ಹಿನ್ನಲೆಯಲ್ಲಿ ಡಿಸಿ ಕ್ರಮ ಕೈಗೊಂಡು ಕನ್ನಡದ ಹಿತ ಕಾಪಾಡಿದ್ದಾರೆ.
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ಪ್ರಚೋದನಾತ್ಮಕ ಹೇಳಿಕೆ ನೀಡಿದ್ರೆ ಭಾಷಾ ಸಮಸ್ಯೆ ಉದ್ಭವ ಆಗಿ,ಕಾನೂನು ಸುವ್ಯವಸ್ಥೆ ಧಕ್ಕೆಯಾಗಿ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿಯಾಗುವ ಸಾಧ್ಯತೆ ಇತ್ತು,ಮಹಾಮೇಳಾವ್‌ನಲ್ಲೂ ಪಾಲ್ಗೊಳ್ಳುವುದಾಗಿ ಹೇಳಿದ್ದ ಮಾನೆಗೆ ಡಿ.19ರಂದು ನಿಷೇಧ ಹೇರಿದ್ದ ಡಿಸಿ,ಖಡಕ್ ನಿರ್ಧಾರದ ಮೂಲಕ ಮತ್ತೊಮ್ಮೆ ಕನ್ನಡಿಗರ ಮನ ಗೆದ್ದಿದ್ದಾರೆ.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದ ನಾಡದ್ರೋಹಿ ಎಂಇಎಸ್ ಮತ್ತೆ ಕ್ಯಾತೆ ತೆಗೆಯುತ್ತಿದೆ.ಇಂದು ನಗರದಲ್ಲಿ ಹುತಾತ್ಮ ದಿನ ಆಚರಿಸಲಿರುವ ನಾಡದ್ರೋಹಿ ಎಂಇಎಸ್ ಕಾರ್ಯಕರ್ತರು,ಬೆಳಗಾವಿಯ ಹುತಾತ್ಮ ಚೌಕ್‌ನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಶಿವಸೇನೆ ಠಾಕ್ರೆ ಬಣ ಸಾಥ್ ನೀಡಿದೆ.ಗಡಿವಿವಾದ ಹೋರಾಟದಲ್ಲಿ ಗಲಭೆ ಸೃಷ್ಟಿಸಿ ಗೋಲಿಬಾರ್‌ಗೆ ಮೃತರಾದವರ ಸ್ಮರಣಾರ್ಥ ಕಾರ್ಯಕ್ರಮ ಪ್ರತಿ ವರ್ಷ ನಡೆಯುತ್ತದೆ.ಗೋಲಿಬಾರ್‌ಗೆ ಮೃತರಾದವರನ್ನು ಹುತಾತ್ಮರೆಂದು ಪರಿಗಣಿಸಿ ಎಂಇಎಸ್‌ನಿಂದ ಹುತಾತ್ಮ ದಿನ ಆಚರಣೆ ಮಾಡಲಾಗುತ್ತದೆ.
ಎಂಇಎಸ್‌ನಿಂದ ಭಾಷಾ ಸಾಮರಸ್ಯಕ್ಕೆ ಧಕ್ಕೆ ತರಲು, ಮುಗ್ಧ ಮರಾಠಿಗರನ್ನು ಪ್ರಚೋದಿಸಲು ಯತ್ನ ನಡೆಯುತ್ತಲೇ ಇದೆ.ಕಳೆದ ವಿಧಾನಸಭೆ, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನೆಲಕಚ್ಚಿರುವ ಎಂಇಎಸ್,ಬರುವ ವಿಧಾನಸಭೆ ಚುನಾವಣೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಎಂಇಎಸ್ ಹೆಣಗಾಟ ನಡೆಸಿದೆ.ರಾಜಕೀಯ ಲಾಭಕ್ಕಾಗಿ ಚುನಾವಣೆ ಹೊಸ್ತಿಲಲ್ಲಿ ಹುತಾತ್ಮ ದಿನ ಆಚರಣೆಗೆ ಮುಂದಾಗಿರುವ ಎಂಇಎಸ್ ಗೆ ಬೆಳಗಾವಿ ಡಿಸಿ ಬಿಸಿ ಮುಟ್ಟಿಸಿದ್ದಾರೆ.