ಸುದ್ಧಿಗಳ ಪ್ರಸಾರ ಪೈಪೋಟಿಗೆ ಎದುರಾಗಿ ವಾಸ್ತವಕ್ಕೆ ದೂರವಿರುವ ಸಂಗತಿಗಳ ಬಗ್ಗೆ ಆದ್ಯತೆ ನೀಡದೇ ವಿಷಯದ ಸತ್ಯಾಸತ್ಯೆಯನ್ನು ಸರಿಯಾಗಿ ಪರಿಶೀಲಿಸುವುದು ಹೆಚ್ಚು ಅಗತ್ಯವಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಎನ್.ಜಯರಾಮ ಸಲಹೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಇಂದು ಯುನಿಸೆಫ್, ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಾರ್ತಾ, ಪೊಲೀಸ್ , ಜಿಲ್ಲಾ ಪಂಚಾಯಿತಿ, ಸ್ಪಂದನ ಸಂಸ್ಥೆ ಇನ್ನಿತರ ಸರಕಾರಿ ಇಲಾಖೆಗಳು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ‘ಮಕ್ಕಳ ಹಕ್ಕುಗಳು ಮತ್ತು ಮಾಧ್ಯಮ’ ಮಕ್ಕಳ ಸಂರಕ್ಷಣೆಯಲ್ಲಿ ಮಾಧ್ಯಮಗಳ ಪಾತ್ರ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಶೋಷಿತ ಮಕ್ಕಳ ಬಗ್ಗೆ ವರದಿ ಮಾಡುವಾಗ ತುಂಬಾ ಎಚ್ಚರವಹಿಸುವುದು ಅಗತ್ಯವಿದೆ ಎಂದರು.
ಅನ್ಯಾಯಕೊಳ್ಳಗಾದ ಮಕ್ಕಳಿಗೆ ನ್ಯಾಯ ಕೊಡಿಸುವ ವೇಗದಲ್ಲಿ ಬಾಲಕಿಯ ಮುಂದಿನ ಭವಿಷ್ಯದ ಬಗ್ಗೆ ವಿಚಾರ ಮಾಡಬೇಕಾಗುತ್ತದೆ. ಸುದ್ದಿ ಮಾಡುವ ಸಂದಭ೯ದಲ್ಲಿ ಕುಲಕುಂಶವಾಗಿ ಪರಿಶೀಲಸದಿದ್ದರೇ ಅದು ಸಮಾಜಕ್ಕೆ ಅನ್ಯಾಯಮಾಡಿದಂತೆ. ಕ್ಷಣಾರ್ಧದಲ್ಲಿ ಸುದ್ದಿ ನೀಡುವ ಭರದಲ್ಲಿ ಗುಣಮಟ್ಟ ಹಾಗೂ ವಸ್ತುನಿಷ್ಠ ವರದಿ ಪ್ರಕಟಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಹೆಚ್ಚು ವಸ್ತುನಿಷ್ಠ ವರದಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದು ಎಂದು ಜಿಲ್ಲಾಧಿಕಾರಿಗಳು ಸಲಹೆ ನೀಡಿದರು
ಡಿಸಿಪಿ ರಾಧಿಕಾ ಅವರು ಮಾತನಾಡಿ, ಮಕ್ಕಳ ಹಕ್ಕುಗಳ ಸಂರಕ್ಷಣೆಯ ದೃಷ್ಟಿಯಿಂದ ಹೆಚ್ಚು ತಿಳುವಳಿಕೆ ಮೂಡುವ ನಿಟ್ಟಿನಲ್ಲಿ ಮಾಧ್ಯಮ ಪ್ರಮುಖ ಪಾತ್ರ ನಿರ್ವಹಿಸಬೇಕಾಗುತ್ತದೆ . ಸಂತ್ರಸ್ತ ಮಗುವಿನ ಮಾಹಿತಿ ಗೌಪ್ಯತೆ ಕಾಪಾಡುವುದು ಅಗತ್ಯವಿದೆ ಎಂದು ಹೇಳಿದರು.
ಯನಿಸೇಫ್ ನ ಉಷಾ ಅವರು ಮಾತನಾಡಿ, ಮಕ್ಕಳ ಹಕ್ಕುಗಳ ಸಂರಕ್ಷಣೆ ಪ್ರಜ್ಞೆ ಕಡಿಮೆ ಇರುವುದರಿಂದ ಮಾನವ ಸಂಪನ್ಮೂಲ ಪ್ರಗತಿಯಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. RTE ಸಂಬಂಧಿಸಿದಂತೆ ಇಂದು ಸಾರ್ವಜನಿಕ ರಿಂದ ಹೆಚ್ಚಿನ ಪ್ರಮಾಣದಲ್ಲಿ ಅರ್ಜಿಗಳು ಆಯೋಗ ಕ್ಕೆ ಬರುತ್ತಿವೆ ಎಂದು ಹೇಳಿದರು.
ನಂತರ ಕೆ.ರಾಘವೇಂದ್ರ ಭಟ್ ಹಾಗೂ ವಾಸುದೇವ ಶರ್ಮ ಮಾಧ್ಯಮದವರೊಂದಿಗೆ ಸಂವಾದ ನಡೆಸಿದರು.