ಅಪ್ಪ – ಅವ್ವನ ಮಡಿನಲ್ಲಿ ಹಬ್ಬದ ಸಂಭ್ರಮ ಉಲ್ಲಾಸ ಕಾಣಬೇಕಾದ ಮಕ್ಕಳಿಗೆ ಅಪ್ಪ ಅವ್ವ ಬಂಧುಗಳು ಅನ್ನುವವರೆ ಇಲ್ಲದಾದಾಗ ಮಕ್ಕಳ ಮನಸ್ಥಿತಿ ಹೇಗಿರಬೇಡ? ಅಂಥ ಮಕ್ಕಳನ್ನು ಮಡಿಲಿಗೆ ಕರೆದುಕೊಂಡು ಮಕ್ಕಳ ಕಣ್ಣಲ್ಲಿ ಒಬ್ಬ ಉನ್ನತ ಅಧಿಕಾರಿ ಚುಕ್ಕೆ ಚಂದಿರಿನ ಬೆಳಕು ಮೂಡಿಸಿದಾಗ ಮಕ್ಕಳ ಉಲ್ಲಾಸದ ಭಾವ ಹೇಗೆ ರೆಕ್ಕೆ ಬಿಚ್ಚಿ ಹಾರಾಡಬೇಡ? ಇಂಥ ಒಂದು ಮಾನವೀಯ ಅಂತಃಕರಣ ದ ಪ್ರಸಂಗಕ್ಕೆ ಬೆಳಗಾವಿ ಜಿಲ್ಲಾಧಿಕಾರಿಗಳ ನಿವಾಸದ ಆವರಣ ಇಂದು ಸಂಜೆ ಸಾಕ್ಷಿಯಾಗಿತ್ತು!
ಬೆಳಗಾವಿ ಜಿಲ್ಲಾಧಿಕಾರಿಗಳಾದ ಎನ್. ಜಯರಾಮ್ ಅವರುಇಂಥದೊಂದು ಅಂತಃಕರಣದ ಅಪರೂಪದ ಸಮಾರಂಭ ಅನ್ನುವುದಕ್ಕಿಂತ ಸುಮಧುರ ವಾತಾವರಣ ಸೃಷ್ಟಿ ಸಿದ್ದರು. ಜಿಲ್ಲಾಧಿಕಾರಿಗಳು ಸೇರಿದ ಸುಮಾರು ೧೫೦ ಅನಾಥ ಮಕ್ಕಳ ಕೈಕುಲಕಿ, ಅಂತಃಕರಣ ದಿಂದ ಮಾತನಾಡಿಸಿ, ನಗಿಸಿ ತಾವೂ ಅವರೊಂದಿ ಮಗುವಾಗಿ ನಕ್ಕು , ಹಾಡು ಹಾಡಿಸಿ, ಆಟವಾಡಿಸಿ ಮಕ್ಖಳಲ್ಲಿನ ಅನಾಥ ಭಾವವನ್ನು ಸರಿಸಿ ಹೊಸ ಬೆಳಕು ಮೂಡಿಸಿದರು. ಬೆರೆತು ಮಕ್ಕಳಾದರೂ ಜಿಲ್ಲಾಧಿಕಾರಿಗಳ ನಿವಾಸದ ಆವರಣ ಸ್ವಂತ ಮನೆ ಎನ್ನುವಂತೆ ಸಂಭ್ರಮಿಸಿ ಕಣ್ಣು ಗಳಲ್ಲಿ ಭರವಸೆ ಬೆಳಕು ಮೂಡಿಸಿದರು. ಮಕ್ಕಳ ಸಂಭ್ರಮಕ್ಕೆ ಕೊನೆ ಇಲ್ಲದಾಗಿರುವುದನ್ನು ನೆರೆದವರು ಕಂಡು ಸಂಭ್ರಮಸಿದರು.
ಕುಣಿದು ಕುಪ್ಪಳಿ ಜಿಲ್ಲಾಧಿಕಾರಿಗಳೊಂದಿಗೆ ಊಟ ಮಾಡಿದ ಮಕ್ಕಳು ಹೊಸ ಭರವಸೆಯ ಬೆಳಕು ತುಂಬಿಕೊಂಡಿದ್ದರು. ಜಿಲ್ಲಾಧಿಕಾರಿಗಳಾದ ಎನ್. ಜಯರಾಮ್ ಅವರ ಈ ಮಾನವೀಯ ಅಂತಃಕರಣ ದ ಸೆಲೆಯ ಬಗ್ಗೆ ಎಷ್ಟು ಹೊಗಳಿದರೂ ಕಡಿಮೆ. ನಿಜಕ್ಕೂ ಇದೊಂದು ಮಾದರಿ.
ಮಕ್ಕಳೊಂದಿಗೆ ಬೆರೆತ ಐಜಿಪಿ ಕೆ. ರಾಮ ಚಂದ್ರ, ಸಿಇಓ ಗೌತಮ ಬಗಾಧಿ. ಪಾಲಿಕೆ ಆಯುಕ್ತ ಶಶಿಧರ ಕುರೇರ ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಕಾರ್ಯ ಕ್ರಮಕ್ಕೆ ಸಾಕ್ಷಿಯಾಗಿದ್ದರು.