ಬೆಳಗಾವಿ-ಕೇಂದ್ರ ಸರ್ಕಾರ ನಿಗದಿಪಡಿಸಿದ ಅವಧಿಯವರೆಗೆ ೫೦೦ ಹಾಗೂ ೧೦೦೦ ಮುಖಬೆಲೆ ನೋಟುಗಳನ್ನು ಸ್ವೀಕರಿಸಲು ಆಸ್ಪತ್ರೆ, ಸಹಕಾರಿ ಬ್ಯಾಂಕುಗಳು ಹಾಗೂ ಪೆಟ್ರೋಲ್ ಬಂಕ್ ಮಾಲೀಕರುಗಳಿಗೆ ಬೆಳಗಾವಿಯ ಜಿಲ್ಲಾಧಿಕಾರಿ ಎನ್.ಜಯರಾಮ್ ಸೂಚನೆ. ನೀಡಿದ್ದಾರೆ
ಬ್ಯಾಂಕುಗಳಲ್ಲಿ ಹಣ ಠೇವಣಿ ಹಾಗೂ ಹಳೆಯ ನೋಟುಗಳ ಬದಲಾಣೆಗೆ ಪ್ರತ್ಯೇಕ ಕೌಂಟರ್ ಆರಂಭಿಸಲು ನಿರ್ದೇಶನ ನೀಡಲಾಯಿತು
ಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಖಾಸಗಿ ಆಸ್ಪತ್ರೆ ಮತ್ತು ಔಷಧ ಅಂಗಡಿಗಳಲ್ಲಿ ಹಳೆಯ ನೋಟು ಸ್ವೀಕರಿಸಲು ಡಿಸಿ ಸೂಚನೆ ನೀಡಿದರು
ಹಳೆಯ ೫೦೦ ಹಾಗೂ ೧೦೦೦ ನೋಟುಗಳ ಚಲಾವಣೆ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯಿತು
ನೋಟುಗಳ ಬದಲಾವಣೆ: ಬ್ಯಾಂಕುಗಳ ಎದುರು ಸೂಕ್ತ ಭದ್ರತೆ – ಪೊಲೀಸ್ ಆಯುಕ್ತ ಟಿ.ಜಿ.ಕೃಷ್ಣಭಟ್ ಸಭೆಯಲ್ಲಿ ಭರವಸೆ ನೀಡಿದರು
ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಸಹಕಾರಿ ಬ್ಯಾಂಕುಗಳಿಗೆ ೨೦೦೦ಮುಖಬೆಲೆಯ ಹಾಗೂ ೫೦೦, ರ ನೋಟುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪೂರೈಸಲು ಸಹಕಾರಿ ಬ್ಯಾಂಕುಗಳ ಪ್ರತಿನಿಧಿಗಳು ಒತ್ತಾಯಿಸಿದರು
ಅಪರ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ, ಡಿಸಿಪಿಗಳಾದ ರಾಧಿಕಾ, ಅಮರನಾಥ ರೆಡ್ಡಿ ವಿವಿಧ ಇಲಾಖೆಯ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.