ಬೆಳಗಾವಿ-ಶುಕ್ರವಾರ ಜಿಲ್ಲಾಧಿಕಾರಿ ಜೈರಾಮ್ ಮದ್ಯಾಹ್ನ ಊಟಕ್ಕೂ ಹೋಗದೇ ಬೆಳಿಗ್ಗೆಯಿಂದ ಸರದಿಯಂತೆ ಮಿಟಿಂಗ್ ಮೇಲೆ ಮೀಟಿಂಗ್ ಮಾಡಿ ಸಂಜೆ ಸುಮಾರು ಐದು ಘಂಟೆಗೆ ಮನೆಗೆ ತೆರಳಲು ತಮ್ಮ ಚೇಂಬರ್ ನಿಂದ ಹೊರಗೆ ಬಂದರು ಅಷ್ಟರೊಳಗೆ ಮೂಡಲಗಿಯಿಂದ ಬಂದಿದ್ದ ಅಜ್ಜಿಯನ್ನು ನೋಡಿದ ಡಿಸಿ ಜೈರಾನ್ ಯಾಕಮ್ಮ ಏನು ಕೆಲಸ ಅಂತಾ ವಿಚಾರಿಸಿದಾಗ ಅಜ್ಜಿ ತನಗಾದ ಅನ್ಯಾಯವನ್ನು ಬಿಚ್ಚಿಟ್ಟ ಘಟಣೆ ನಡೆಯಿತು
ಸಾಹೆಬ್ರ ಹೆಣ್ಮಗಳು ಡಿಸಿ ಇದ್ದಾಗ ನಾನು ಇಲ್ಲಿ ಬರಾಕತೇನ ನನಗೆ ಇರಾಕ ಮನೆ ಇಲ್ಲ ಹತ್ತ ವರ್ಷ ಆಯ್ತು ಆ ಹೆಣ್ಮಗಳು ( ಶ್ಯಾಲಿನಿ ರಜನೀಶ್) ನನಗ ಮನೆ ಕೊಡ್ರಿ ಅಂತಾ ಹೇಳಿದ್ರೂ ನನಗ ಮನೆ ಕೊಡ್ತಾ ಇಲ್ಲ ಸಾಹೇಬ್ರ ನೀವಾದ್ರೂ ನನಗೆ ಮನೆ ಕೊಡಿಸಿ ಅಂತಾ ಪಾಪ ಅಜ್ಜಿ ಡಿಸಿ ಜೈರಾಂ ಎದುರು ಗೋಳಾಡಿದ ಪ್ರಸಂಗ ನಡೆಯಿತು
ಈ ವಿಷಯವನ್ನು ಗಂಭೀರವಾಗಿ ಪರಗಣಿಸಿದ ಡಿಸಿ ಜೈರಾಮ್ ಕೂಡಲೇ ಯೋಜನಾ ನಿರ್ದೇಶಕ(dudc) ಪ್ರವೀಣ ಭಾಗೇವಾಡಿ ಅವರನ್ನು ಕರೆಯಿಸಿ ಯಾಕ್ರೀ ಈ ಅಮ್ಮ ಮೂಡಲಗಿಯೊಳಂತೆ ಈಕೆಗೆ ಮನೆ ಇನ್ನುವರೆಗೆ ಯಾಕೆ ಸಿಕ್ಕಿಲ್ಲ ಯಾರ್ರೀ ಮೂಡಲಗಿ ಚೀಫ್ ಆಫಿಸರ್ ಇಂಥವರಿಗೆ ಮನೆ ಕೋಡೋದಿಲ್ಲ ಅಂದ್ರೆ ಮತ್ಯಾರಿಗೆ ಮನೆ ಕೊಡ್ತೀರಾ ? ಅಂತಾ ತರಾಟೆಗೆ ತೆಗೆದುಕೊಂಡರು
ಡಿಸಿ ಜೈರಾಮ್ ಅಲ್ಲಿಂದ ತರಳಿದ ಬಳಿಕ ಅಜ್ಜಿಯನ್ನು ವಿಚಾರಿಸಿದಾಗ ಪ್ರವೀನ ಬಾಗೇವಾಡಿ ನನಗೆ ನೀನು ಇಲ್ಲಿಗೆ ಬರಬೇಡ ನೀನು ಡಿಸಿ ಕಡೆ ಯ್ಯಾಕೆ ಹೋದಿ ಇನ್ನೊಂದು ಬಾರಿ ಡಿಸಿ ಕಡೆ ಹೋದ್ರೆ ಬಿಡೋದಿಲ್ಲ ಅಂತಾ ಹೆದರಿಸಿದಾನ್ರೀ ಅಂತಾ ಅಜ್ಜಿ ತನಗಾದ ನೋವನ್ನು ಹೇಳಿಕೊಂಡಳು ಈ ಅಜ್ಜಿಗೆ ಮನೆ ಸಿಗುತ್ತದೆಯೋ ಇಲ್ಲವೋ ಅನ್ನೋದನ್ನು ಕಾದು ನೋಡಬೇಕಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ