ಬೆಳಗಾವಿ- ಬೆಳೆದು ನಿಂತ ಕಬ್ಬು ಒಣಗುತ್ತದೆ ಕಬ್ಬು ಕಟಾವ್ ಮಾಡಬೇಕಂದ್ರ ಕೃಷಿ ಕೂಲಿಕಾರರು ಸಿಗುತ್ತಿಲ್ಲ ಒಣಗಿದ ಕಬ್ಬನ್ನು ಉಳಿಸಲು ನೀರು ಬೇಕು ನೀರು ಹರಿಸಬೇಕಂದ್ರ ಕರೆಂಟ್ ಇಲ್ಲ ಟ್ರಾನ್ಸಪಾರ್ಮರ್ ಸುಟ್ಟು ತಿಂಗಳಾದ್ರೂ ರೀಪೇರಿ ಮಾಡಿತ್ತಿಲ್ಲ ಟ್ರಾನ್ಸಫಾರ್ಮರ್ ರಿಪೇರಿ ಮಾಡಿಸಿ ಕೊಡಿ ಇಲ್ಲ ಅಂದ್ರೆ ವಿಷ ಕೊಡಿ ಎಂದು ಗೋಕಾಕ ತಾಲ್ಲೂಕಿನ ಹುಲಿಕಟ್ಟಿ ಗ್ರಾಮದ ರೈತರು ಡೆಸಿ ಚೇಂಬರ್ ಎದುರು ಕಣ್ಣೀರು ಸುರಿಸಿದ ಘಟನೆ ನಡೆಯಿತು
ಜಿಲ್ಲಾಧಿಕಾರಿಗಳ ಚೇಂಬರ್ ಎದುರು ಕಣ್ಣೀರು ಸುರಿಸಿ ತಮ್ಮ ಅಳಲು ತೋಡಿಕೊಂಡ ರೈತರು ಹೆಸ್ಕಾಂ ಅಧಿಕಾರಿಗಳು ಟ್ರಾನ್ಸಫಾರ್ಮರ್ ರಿಪೇರಿ ಮಾಡುತ್ತಿಲ್ಲ ಹೆಸ್ಕಾಂ ಕಚೇರಿಗೆ ಸುತ್ತಾಡಿ ಸುಸ್ತಾಗಿದ್ದೇವೆ ನಮ್ಮ ನೆರವಿಗೆ ಯಾರೊಬ್ಬರೂ ಬರುತ್ತಿಲ್ಲ ಎಲ್ಲ ಕಚೇರಿಗಳಿಗೆ ಅಲೆದಾಡಿ ಅಸಹಾಯಕರಾಗಿ ಇಲ್ಲಿಗೆ ಬಂದಿದ್ದೇವೆ ನಮಗೆ ನ್ಯಾಯ ಸಿಗದಿದ್ದರೆ ಇಲ್ಲೇ ವಿಷ ಕುಡಿದು ಸಾಯುತ್ತೇವೆ ಎಂದು ಹೇಳುತ್ತ ರೈತರು ಕಣ್ಣೀರು ಸುರಿಸಿದರು
ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಜಿಲ್ಲಾಧಿಕಾರಿ ಜಿಯಾವುಲ್ಲಾ ಸುದ್ಧಿ ತಿಳಿದ ತಕ್ಷಣ ತಮ್ಮ ಚೇಂಬರ್ ಗೆ ದೌಡಾಯಿಸಿ ರೈತರ ಸಮಸ್ಯೆ ಆಲಿಸಿದ್ರು ದೂರವಾಣಿ ಮೂಲಕ ಹೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿದ ಡಿಸಿ ಜಿಯಾವುಲ್ಲಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ತಕ್ಷಣ ಟ್ರಾನ್ಸಫಾರ್ಮರ್ ರಿಪೇರಿ ಮಾಡಿ ರೈತರ ಸಮಸ್ಯೆಯನ್ನು ಬಗೆ ಹರಿಸುವಂತೆ ಸೂಚಿಸಿ ರೈತರ ಮೆಚ್ಚುಗೆಗೆ ಪಾತ್ರರಾದರು