Breaking News

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ನಡೆಸಲು ರಿಟರ್ನಿಂಗ್ ಆಫಿಸರ್ ನೇಮಕ

ಬೆಳಗಾವಿ- ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ನಡೆಸಲು,ಸರ್ಕಾರ ತೀರ್ಮಾಣಿಸಿದೆ.ಚುನವಣೆ ನಡೆಸಲು ರಿಟರ್ನಿಂಗ್ ಆಫಿಸರ್ ನೇಮಕ ಮಾಡಿ,ಸಹಕಾರ ಚುನಾವಣಾ ಪ್ರಾಧಿಕಾರದ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಭೀಮ್ಸ್ ಆಡಳಿತಾಧಿಕಾರಿ ಸಯೀದಾ ಆಫ್ರೀನ್ ಎಸ್ ಬಳ್ಳಾರಿ ಇವರನ್ನು ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯ ರಿಟರ್ನಿಂಗ್ ಆಫಿಸರ್ ಎಂದು ನೇಮಕ ಮಾಡಲಾಗಿದ್ದು,ಸಹಕಾರ ಚುನಾವಣಾ ಪ್ರಾಧಿಕಾರದ ನಿರ್ದೇಶನಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.

ಈ ಮೊದಲು ಕಾಡಾ ಉಪ ಅಡಳಿತಾಧಿಕಾರಿ ಜಯಶ್ರೀ ಶಿಂತ್ರಿ ಅವರನ್ನು ರಿಟರ್ನಿಂಗ್ ಆಫಿಸರ್ ಎಂದು ನೇಮಿಸಲಾಗಿದ್ದು,ಸರ್ಕಾರ ಇಂದು ಪರಿಷ್ಕೃತ ಆದೇಶ ಹೊರಡಿಸಿ,ಸಯೀದಾ ಆಫ್ರೀನ್ ಬಳ್ಳಾರಿ ಅವರನ್ನು ನೇಮಿಸಿದೆ.

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಅಗಸ್ಟ್ ತಿಂಗಳಲ್ಲಿ ನಡೆಯಯವದು ನಿಶ್ಚಯವಾಗಿದ್ದರೂ ,ಕೊರೊನಾ ಹಾವಳಿಯಿಂದ ಚುನಾವಣೆ ಮುಂದೂಡಯವ ಸಾಧ್ಯತೆ ಇದೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.

Check Also

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ ಬೆಳಗಾವಿ- ಪುಣ್ಯಕ್ಷೇತ್ರ ಧರ್ಮಸ್ಥಳದ ಕುರಿತು ಸರ್ಕಾರ …

Leave a Reply

Your email address will not be published. Required fields are marked *