ಬೆಳಗಾವಿ- ರೈತರ ಜೀವನಾಡಿ,ಸಹಕಾರ ಕ್ಷೇತ್ರದ ಆಧಾರ ಸ್ತಂಭವಾಗಿರುವ ಬೆಳಗಾವಿ ಡಿಸಿಸಿ ಬ್ಯಾಂಕಿನ ಅದ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಶನಿವಾರ ಚುನಾವಣೆ ನಡೆಯಲಿದೆ.
ಈಗಾಗಲೇ ಡಿಸಿಸಿ ಬ್ಯಾಂಕಿನ ನಿರ್ದೇಶಕ ಮಂಡಳಿಯ ಚುನಾವಣೆ ನಡೆದಿದ್ದು,13 ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ,ಮೂರು ಸ್ಥಾನಗಳಿಗೆ ಚುನಾವಣೆ ನಡೆದಿತ್ತು.ಒಟ್ಟು16 ಜನ ನಿರ್ದೇಶಕರು ಆಯ್ಕೆಯಾಗಿದ್ದಾರೆ.
ಡಿಸಿಸಿ ಬ್ಯಾಂಕ್ ಚುನಾವಣೆ ಘೋಷಣೆಯಾದ ಬಳಿಕ,ಲಕ್ಷ್ಮಣ ಸವದಿ,ರಮೇಶ್ ಕತ್ತಿ,ಬಾಲಚಂದ್ರ ಜಾರಕಿಹೊಳಿ,ರಮೇಶ್ ಜಾರಕಿಹೊಳಿ,ಅಣ್ಣಾಸಾಹೇಬ್ ಜೊಲ್ಲೆ ಸೇರಿದಂತೆ ಬೆಳಗಾವಿ ಜಿಲ್ಲೆಯ ಎಲ್ಲ ಬಿಜೆಪಿ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಒಗ್ಗಟ್ಟಿನ ಬಲ ಪ್ರದರ್ಶನ ಮಾಡಿದ್ದರು.
ಈಗ ಸದ್ಯದ ಪರಿಸ್ಥಿತಿ ಅವಲೋಕಿಸಿದರೆ ರಮೇಶ್ ಕತ್ತಿ ಅವರೇ ಡಿಸಿಸಿ ಬ್ಯಾಂಕಿನ ಅದ್ಯಕ್ಷ ಸ್ಥಾನಕ್ಕೆ ಅವಿರೋಧ ವಾಗಿ ಆಯ್ಕೆ ಆಗುತ್ತಾರೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.ಆದ್ರೆ ಗುರುವಾರ ಅಥಣಿಯಲ್ಲಿ ನಡೆದ ಗುಪ್ತ ಸಭೆ,ರಮೇಶ್ ಜಾರಕಿಹೊಳಿ ಅವರ ಹೇಳಿಕೆಯನ್ನು ಗಮನಿಸಿದರೆ ಅನೇಕ ಅನುಮಾನಗಳು ಎದುರಾಗುತ್ತವೆ.
ಎಲ್ಲರೂ ಒಗ್ಗಟ್ಟಾಗಿ ಡಿಸಿಸಿ ಬ್ಯಾಂಕ್ ಚುನಾವಣೆ ಮಾಡಿದ್ದಾರೆ,ಎಲ್ಲ ನಾಯಕರಲ್ಲಿ ಸಹಮತ ಇದೆ,ಆದರೆ ಗುರುವಾರ ಕತ್ತಿ ಸಹೋದರರು ಅಥಣಿಗೆ ಹೋಗಿ ,ಲಕ್ಷ್ಮಣ ಸವದಿ ಅವರ ಜೊತೆ ಮೀಟೀಂಗ್ ಮಾಡುವ ಅನಿವಾರ್ಯತೆ ಎದುರಾಗಿದ್ದು ಯಾಕೆ..? ಎನ್ನುವ ಹಲವಾರು ಪ್ರಶ್ನೆಗಳು ಎಲ್ಲರನ್ನು ಕಾಡುತ್ತಿವೆ.
ಡಿಸಿಸಿ ಬ್ಯಾಂಕಿಗೆ ರಮೇಶ್ ಕತ್ತಿ ಅವರನ್ನು ಕೈ ಬಿಟ್ಟು ಬೇರೊಬ್ಬರನ್ನು ಬ್ಯಾಂಕಿನ ಅದ್ಯಕ್ಷ ಸ್ಥಾನಕ್ಕೆ ಕೂರಿಸುವ ಪ್ರಯತ್ನಗಳು ನಡೆಯುತ್ತಿವೆಯಾ ? ಲಕ್ಷ್ಮಣ ಸವದಿ ಅವರನ್ನು ಮನವೊಲಿಸಲು ಕತ್ತಿ ಸಹೋದರರು ನಿರ್ಧರಿಸಿ ಅವರನ್ನು ಖುದ್ದಾಗಿ ಭೇಟಿಯಾಗಲು ಅಥಣಿಗೆ ಹೋಗಬೇಕಾಯಿತಾ ..? ಎನ್ನುವ ಪ್ರಶ್ನೆ ಈಗ ಎಲ್ಲರ ಮುಂದಿದೆ.
ಡಿಸಿಸಿ ಬ್ಯಾಂಕಿನ ಅದ್ಯಕ್ಷ ಸ್ಥಾನಕ್ಕೆ ಸಮಂಧಿಸಿದಂತೆ ಗುಟ್ಟಾಗಿ ಬೇರೆ,ಬೇರೆ ಪ್ರಯತ್ನಗಳು ನಡೆದಿವೆ,ಅದಕ್ಕಾಗಿಯೇ ಕತ್ತಿ ಸಹೋದರರು ಲಕ್ಷ್ಮಣ ಸವದಿ ಅವರನ್ನು ಭೇಟಿಯಾಗಿ,ಗಂಟೆಗಳ ಕಾಲ ಅಥಣಿಯ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದ್ದಾರೆ.ಎನ್ನುವ ಮಾತುಗಳು ಈಗ ಎಲ್ಲೆಡೆ ಸುಳಿದಾಡುತ್ತಿವೆ.
ಗುರುವಾರ ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿದ ರಮೇಶ್ ಜಾರಕಿಹೊಳಿ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಮಾದ್ಯಮಗಳ ಜೊತೆ ಮಾತನಾಡಿ ರಮೇಶ್ ಕತ್ತಿ ಅವರೇ ಡಿಸಿಸಿ ಬ್ಯಾಂಕಿನ ಅದ್ಯಕ್ಷರಾಗಲಿ ಎಂದು ಒತ್ತಾಯಿಸಿದ್ದು ಅಚ್ಚರಿಗೆ ಕಾರಣವಾಯಿತು,ಯಾಕಂದ್ರೆ ರಮೇಶ್ ಜಾರಕಿಹೊಳಿ ಅವರ ಕೈಯಲ್ಲೇ ಎಲ್ಲವೂ ಇರುವಾಗ,ರಮೇಶ್ ಕತ್ತಿ ಅವರೇ ಅದ್ಯಕ್ಷರಾಗಲಿ ಎಂದು ಒತ್ತಾಯ ಮಾಡಿದ್ದನ್ನು ಗಮನಿಸಿದರೆ,ಬೇರೆ ರೀತಿಯ ಬೆಳವಣಿಗೆಗಳು ನಡೆಯುತ್ತಿವೆ ಅದಕ್ಕಾಗಿಯೇ ರಮೇಶ್ ಜಾರಕಿಹೊಳಿ ಅವರು ,ರಮೇಶ್ ಕತ್ತಿ ಅವರ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ ಅನ್ನೋದು ಖಾತ್ರಿಯಾಗುತ್ತದೆ.
ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರು ನಿಜವಾಗಿಯೂ ಒಂದಾಗಿದ್ದಾರೆಯೇ,ಒಳಗಿನ ಬೇಗುದಿ ಬಾಕಿ ಇದೆಯಾ ? ಎನ್ನುವ ಎಲ್ಲ ಪ್ರಶ್ನೆಗಳಿಗೆ ಶನಿವಾರ ಸ್ಪಷ್ಟ ಉತ್ತರ ಸಿಗಲಿದೆ.
ಜೈ…ಢವಳೇಶ್ವರ…