ಬೆಳಗಾವಿ.- ದಸರಾ ಹಬ್ಬದ ಸಂಬ್ರಮ ಆಯುಧ ಪೂಜೆಯ ಶುಭದಿನ ಬೆಳಗಾವಿ ನಗರದ ಕಾನೂನು ಸುವ್ಯೆವಸ್ಥೆ ವಿಭಾಗದ ಡಿಸಿಪಿ ರಾಧಿಕಾ ಅವರು ಅಧಿಕಾರ ಸ್ವೀಕರಿಸಿದರು
ಭಗವಾ ಪೇಟಾ ಧರಿಸಿ ಆಯುಧ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ರಾಧಿಕಾ ಅವರು ಅಧಿಕಾರ ಸ್ವೀಕರಿಸಿದರು ಕ್ರೈಂ ವಿಭಾಗದ ಡಿಸಿಪಿ ಅಮರನಾಥ ರೆಡ್ಡಿ ಅವರ ಜೊತೆ ಬೆಳಗಾವಿ ನಗರದ ಪರಿಸ್ಥಿತಿಯ ಕುರಿತು ಮಾಹಿತಿ ಪಡೆದುಕೊಂಡರು
ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಮೊದಲ ಬಾರಿಗೆ ಉತ್ತರ ಕರ್ನಾಟಕದ ಭಾಗದಲ್ಲಿ ಕರ್ತವ್ಯ ನಿಭಾಯಿಸುವ ಅವಕಾಶ ಸಿಕ್ಕಿದೆ ಮುಂದೆ ಎದುರಾಗುವ ಸವಾಲುಗಳನ್ನು ಎದುರಿಸಿ ನಗರದಲ್ಲಿ ಕಾನೂನು ಸುವ್ಯೆವಸ್ಥೆಯ ಜೊತೆ ಶಾಂತಿ ಕಾಪಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು
ನಗರ ಪೋಲಿಸ್ ಅಧಿಕಾರಿಗಳು ರಾಧಿಕಾ ಅವರಿಗೆ ಶುಭ ಕೋರಿ ಹೂಗುಚ್ಛ ನೀಡಿ ಬರಮಾಡಿಕೊಂಡರು