ಬೆಳಗಾವಿ
ಕುಂದಾ ನಗರಿ ಬೆಳಗಾವಿಯಲ್ಲಿ ಸ್ಮಾರ್ಟ ಸಿಟಿ ಯೋಜನೆಯ ಕೆಲಸ ಯಾವಾಗ ಪ್ರಾರಂಭ ವಾಗುತ್ತದೆಯೋ ಗೊತ್ತಿಲ್ಲ ಆದರೆ ನೂರು ಕೋಟಿ ಅನುದಾನದಲ್ಲಿ ನಗರದಲ್ಲಿ ಹತ್ತು ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ
ಬೆಳಗಾವಿ ನಗರದ ಹೃದಯ ಭಾಗದಲ್ಲಿರುವ 27 ರಸ್ತೆಗಳ ಡಾಂಬರೀಕರಣ ಮಾಡಲು ಪಾಲಿಕೆ ನಿರ್ಧರಿದಿದ್ದು 27 ರಸ್ತೆಗಳಲ್ಲಿ ಮೂರು ರಸ್ತೆಗಳ ಡಾಂಬರೀಕರಣ ಕಾರ್ಯ ಮುಗಿದಿದೆ 24 ರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ಹೆಸ್ಕಾಂ ಕೇಬಲ್ ಕಾಮಗಾರಿ ಅಡ್ಡಿಯಾಗಿದೆ ಗ್ಯಾಸ್ ಪೈಪ್ ಲೈನ್ ಕಾಮಗಾರಿ ಮುಗಿದ ಬಳಿಕ 24 ರಸ್ತೆಗಳ ಡಾಂಬರೀಕರಣ ಕಾಮಗಾರಿ ಆರಂಭವಾಗಲಿದೆ
ಬೆಳಗಾವಿಯ ಸರ್ಧಾರ್ ಮೈದಾನ ಮತ್ತು ಕ್ಯಾಂಪ್ ಪ್ರದೇಶದ ಹಾಕಿ ಮೈದಾನದ ಅಭಿವೃದ್ಧಿ ಕಾಮಗಾರಿ ನಡೆದಿದೆ ಜೊತೆಗೆ ನಗರದ ವಿವಿಧ ಬಡಾವಣೆಗಳಲ್ಲಿ ಚರಂಡಿ ನಿರ್ಮಾಣದ ಕಾಮಗಾರಿಗಳು ನಡೆಯುತ್ತಿವೆ
ಹನುಮಾನ ನಗರ ಹಾಗು ಅಶೋಕ ನಗದರದಲ್ಲಿ ಸ್ವೀಮಿಂಗ್ ಫೂಲ್ ಗಳನ್ನು ನಿರ್ಮಿಸುವ ಕಾಮಗಾರಿ ಆರಂಭವಾಗಿದೆ ಬಾಕ್ಸ್ಐಟ್ ರಸ್ತೆಯ ವಿದ್ಯಾನಗರದ ಬಳಿ ಸ್ವಿಮಿಂಗ್ ಫೂಲ್ ನಿರ್ಮಿಸಲಾಗುತ್ತಿದ್ದು ಅದಕ್ಕಾಗಿ ಜಾಗೆಯನ್ನು ಪಾಲಿಕೆ ಅಧಿಕಾರಿಗಳು ಅಂತಿಮಗೊಳಿಸುತ್ತಿದ್ದಾರೆ
ಬೆಳಗಾವಿಯ ಧರ್ಮನಾಥ ಭವನದ ಬಳಿ ಪಾಲಿಕೆ ಜಾಗೆಯಲ್ಲಿ ಬ್ಯಾಡ್ಮಿಂಟನ್ ಹಾಲ್ ನಿರ್ಮಿಸುವ ಕಾಮಗಾರಿ ಆರಂಭವಾಗಿದೆ ಮಾಳಮಾರುತಿ ಬಡಾವಣೆಯ ಶಿವತೀರ್ಥ ಅಪಾರ್ಟಮೆಂಟ್ ಬಳಿ ಆರ್ಟ ಗ್ಯಾಲರಿ ನಿರ್ಮಿಸಲು DPR ರೆಡಿಯಾಗಿದ್ದು ಶೀಘ್ರದಲ್ಲಿಯೇ ಆರ್ಟ ಗ್ಯಾಲರಿ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗುತ್ತಿದೆ
ಕಿಲ್ಲಾ ಕೆರೆಯಲ್ಲಿ ಫ್ಲೋಟಿಂಗ್ ರೆಸ್ಟೋರೆಂಟ್
ಬೆಳಗಾವಿಯ ಕಿಲ್ಲಾ ಕೆರೆಯಲ್ಲಿ ಫ್ಲೋಟಿಂಗ್ ರೆಸ್ಟೋರೆಂಟ್ ,ಭಗವಾನ್ ಬುದ್ಧನ ವಿಗ್ರಹ ,ಜೊತೆಗೆ ಅತೀ ಎತ್ತರದ ರಾಷ್ಟ್ರ ಧ್ವಜ ನಿರ್ಮಿಸುವ DPR ಸಿದ್ಧಪಡಿಸಲು ಕನ್ಸಲ್ ಟನ್ಸಿ ಫಿಕ್ಸಾಡಲಾಗುತ್ತಿದೆ
ಗ್ಯಾಸ್ ಪೈಪ್ ಲೈನ್
ನಗರದ ಡಾ ಬಿಆರ್ ಅಂಬೇಡ್ಕರ್ ರಸ್ತೆಯಲ್ಲಿ ಗ್ಯಾಸ್ ಪೈಪಲೈನ್ ಅಳವಡಿಸುವ ಕಾಮಗಾರಿ ನಡೆದಿದೆ ಬೆಳಗಾವಿಯ ಚನ್ನಮ್ಮ ವೃತ್ತದಿಂದ ಕೃಷ್ಣ ದೇವರಾಯ ಸರ್ಕಲ್ ವರೆಗೆ ಸ್ಮಾರ್ಟ ರಸ್ತೆ ನಿರ್ಮಾಣ ಮಾಡಲಾಗುತ್ತುದೆ ಈ ಎಸ್ತೆಯಲ್ಲಿ ಈಗಾಗಲೆ ಚರಂಡಿ ನಿರ್ಮಾಣ ಡಿವೈಡರ್ ಅಭಿವೃದ್ಧಿ ಕಾಮಗಾರಿ ಜೊತೆಗೆ ಡಿವೈಡರ್ ಗಳಲ್ಲಿ ಅತ್ಯಾಕರ್ಷಕ ಬೀದಿ ದೀಪಗಳನ್ನು ಅಳವಡಿಸುವ ಕಾಮಗಾರಿ ನಡೆದಿದೆ
ಬೆಳಗಾವಿಗೂ ಬಂತೂ ಮಲ್ಟಿ ಲೇವಲ್ ಪಾರ್ಕಿಂಗ್
ಬೆಳಗಾವಿ ನಗರದ ಭಾಪಟ್ ಗಲ್ಲಿಯಲ್ಲಿ 24 ಕೋಟಿ ರೂ ವೆಚ್ಚದಲ್ಲಿ ಮಲ್ಟಿ ಲೇವಲ್ ಕಾರ್ ಪಾರ್ಕಿಂಗ್ ನಿರ್ಮಿಸಲು ಟೆಂಡರ್ ಕರೆಯಲಾಗಿದ್ದು ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ಕಾಮಗಾರಿ ಆರಂಭವಾಗಲಿದೆ ಎಂದು ಪಾಲಿಕೆ ಆಯುಕ್ತ ಶಶಿಧರ ಕುರೇರ ತಿಳಿಸಿದ್ದಾರೆ
ಪಾಲಿಕೆ ಆಯುಕ್ತ ಶಶಿಧರ ಕುರೇರ ಅವರು ಬೆಳಗಾವಿ ಸುದ್ಧಿ ಜೊತೆ ಮಾತನಾಡಿ ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಕಾಲ ಮಿತಿಯಲ್ಲಿ ಪೂರ್ಣಗೊಳಿಸುವ ಸಂಕಲ್ಪ ಮಾಡಲಾಗಿದೆ ರಸ್ತೆಗಳ ಡಾಂಬರೀಕರಣ ,ಚರಂಡಿಗಳ ನಿರ್ಮಾಣ ಮತ್ತು ಸ್ಮಾರ್ಟ ರಸ್ತೆಗಳ ಕಾಮಗಾರಿಗಳನ್ನು ಮಳೆಗಾಲಕ್ಕೂ ಮುನ್ನ ಪೂರ್ಣಗೊಳಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು