ಬೆಳಗಾವಿ-ಬೆಳಗಾವಿ ಅಧಿವೇಶನದ ಕೊಡುಗೆಯಾಗಿ ಬೆಳಗಾವಿ ನಗರದ ಅಭಿವೃದ್ಧಿಗೆ 500 ಕೋಟಿ ರೂ ವಿಶೇಷ ಅನುದಾನ ನೀಡುವಂತೆ ಬೆಳಗಾವಿ ಮಹಾನಗರ ಪಾಲಿಕೆಯಿಂದ ಸರ್ಕಾರಕ್ಕ 500 ಕೋಟಿ ರೂ ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಶಶಿಧರ ಕುರೇರ ತಿಳಿಸಿದ್ದಾರೆ
ಬೆಳಗಾವಿ ಮಹಾನಗರದ ರಸ್ತೆಗಳ ಅಭಿವೃದ್ಧಿ,ನಾಲೆಗಳ ಅಭಿವೃದ್ಧಿ,ಗಾರ್ಡನ್ ಗಳ ಅಭಿವೃದ್ಧಿ ಸೇರಿದಂದೆ ಬೆಳಗಾವಿ ಜನತೆಗೆ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ 500 ಕೋಟಿ ರೂ ವೆಚ್ಚದ ಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಲಾಗಿ ಬೆಳಗಾವಿ ಮೇಯರ್ ಬಸವರಾಜ ಚಿಕ್ಕಲದಿನ್ನಿ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಬೆಳಗಾವಿಗೆ ಅಧಿವೇಶನದ ಕೊಡುಗೆಯಾಗಿ ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ
ಬೆಳಗಾವಿಯಲ್ಲಿ ಅಧಿವೇಶನ ನಡೆದರೂ ಬೆಳಗಾವಿಯ ಜನತೆಗೆ ಯಾವುದೇ ಲಾಭವಾಗುತ್ತಿಲ್ಲ ಬೆಳಗಾವಿ ನಗರ ರಾಜ್ಯದ ಎರಡನೇಯ ರಾಜಧಾನಿಯ ಪಟ್ಟಕ್ಕೇರಲಿದ್ದು ಬೆಳಗಾವಿ ನಗರದ ಸರ್ವಾಂಗೀಣ ಅಭಿವೃದ್ಧಿಗಾಗಿ ವಿಶೇಷ ಅನುದಾನ ಕೊಡಬೇಕು ಎನ್ನುವದು ಬೆಳಗಾವಿ ಜಿಲ್ಲೆಯ ಸಾಮಾನ್ಯ ಜನರ ಬೇಡಿಕೆಯಾಗಿದ್ದು ಸಮ್ಮಿಶ್ರ ಸರ್ಕಾರ ಈ ಬಾರಿಯಾದರೂ ವಿಶೇಷ ಅನುದಾನ ಕೊಡುತ್ತದೆಯೋ ಇಲ್ಲವೋ ಎನ್ನುವದನ್ನು ಕಾದು ನೋಡಬೇಕಾಗಿದೆ.