ಬೆಳಗಾವಿ- ಪಕ್ಜದ ಮಹಾರಾಷ್ಡ್ರದಲ್ಲಿ ಕರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ, ಬೆಳಗಾವಿ ಜಿಲ್ಲಾಡಳಿತ ಮಹಾರಾಷ್ಟ್ರದ ಗಡಿಯಲ್ಲಿ ಹೈ ಅಲರ್ಟ್ ಘೋಷಿಸಿ ಗಡಿ ಪ್ರವೇಶ ಮಾಡುವವರ ಆರೋಗ್ಯ ಮೇಲೆ ನಿಗಾ ಇಡಲು ವೈದ್ಯರನ್ನು ನಿಯೋಜನೆ ಮಾಡಿದೆ
ನಿಪ್ಪಾಣಿಯ ಕುಗನೋಳಿಯಲ್ಲಿರುವ ಚೆಕ್ ಪೋಸ್ಟ್ ನಲ್ಲಿ,ಮಹಾರಾಷ್ಟ್ರದಿಂದ ಬೆಳಗಾವಿ ಗಡಿ ಪ್ರವೇಶ ಮಾಡುವ ಬಸ್ ಗಳನ್ನು ಇನ್ನಿತರ ಖಾಸಗಿ ಬಸ್ ಗಳನ್ನು ತಡೆದು,ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡುವ ಕಾರ್ಯಾಚರಣೆ ಇಂದು ಬೆಳಿಗ್ಗೆಯಿಂದ ಆರಂಭವಾಗಿದೆ.
ಮಹಾರಾಷ್ಟ್ರ ದಲ್ಲಿ ಕೊರೋನಾ ಸೊಂಕು ವ್ಯಾಪಕವಾಗಿ ಹರಡುತ್ತಿದ್ದು,ಮೂವತ್ತಕ್ಕೂ ಹೆಚ್ಚು ಜನರಿಗೆ ಕರೋನಾ ಸೊಂಕು ದೃಡವಾದ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲಾಡಳಿತ ಗಡಿಯಲ್ಲಿ ತಪಾಸಣೆ ಮಾಡುವ ನಿರ್ಧಾರ ಕೈಗೊಂಡಿದೆ
ಜೊತೆಗೆ ಪಕ್ಕದ ಗೋವಾ ರಾಜ್ಯಕ್ಕೆ ಜಗತ್ತಿನ ವಿವಿಧ ದೇಶದ ಜನ ಬರುತ್ತಾರೆ,ಗೋವಾದ ಜನ ಬೆಳಗಾವಿಗೆ ಬರ್ತಾರೆ ,ಗೋವಾದಿಂದ ಬೆಳಗಾವಿ ಗಡಿ ಪ್ರವೇಶ ಮಾಡುವ ಜನರ ಆರೋಗ್ಯ ತಪಾಸಣೆ ಮಾಡಲು ಕಣಕುಂಬಿ ಬಳಿ ,ಮೆಡಿಕಲ್ ಚೆಕ್ ಪೋಸ್ಟ್ ತೆರೆಯಲಾಗಿದೆ.
ಒಟ್ಟಾರೆ ಬೆಳಗಾವಿ ಜಿಲ್ಕಾಡಳಿತ ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೊಂಕು ಹರಡದಂತೆ ,ಎಲ್ಲ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ,