ಕೊರೊನಾ ವಿರುದ್ಧದ ಹೋರಾಟಗಾರರಿಗೆ ದೇಶ ಕಾಯುವ ಸೈನಿಕರಿಂದ ಗೌರವ ಸಮರ್ಪಣೆ
ಇಡೀ ಪ್ರಪಂಚಕ್ಕೆ ಮಹಾಮಾರಿಯಾಗಿ ಒಕ್ಕರಿಸಿ ಮಾನವಕುಲಕ್ಕೆ ಕಂಠಕ ತಂದಿರುವ ಕೋವಿಡ್ -19ರ ವಿರುದ್ಧ ವೈದ್ಯಲೋಕ ಸೇರಿದಂತೆ ಪೊಲೀಸ್ ವ್ಯವಸ್ಥೆ, ಸಾಮಾಜಿಕ ಕಾರ್ಯಕರ್ತರು, ಸರಕಾರ, ಅಧಿಕಾರಿಗಳು ಸಮರ ಸಾರಿದ್ದಾರೆ. ಕೊರಾನು ವೈರಾಣು ವಿರುದ್ಧ ಎದುರಿಗೆ ನಿಂತು ಹೋರಾಟ ನಡೆಸುವ ವೈದ್ಯಲೋಕದ ಸಾಹಸ ಅದ್ಭತವಾದದ್ದು. ಅಂಥ ವೈದ್ಯಲೋಕದ ಅನುಪಮ ಸೇವೆಯನ್ನು ಸ್ಮರಿಸಿ ಗೌರವಿಸುವ ಮಹತ್ ಕಾರ್ಯವನ್ನು ವೈರಿಗಳನ್ನು ಸದೆಬಡೆದು ದೇಶಕಾಯುವ ಸೈನಿಕ ಲೋಕ ಸನ್ಮಾನಿಸಿ ಗೌರವಿಸುವ ಅಪರೂಪದ ಸಂದರ್ಭಗಳು ದೇಶದ ಎಲ್ಲಡೆ ನಡೆಯುತ್ತಿವೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ವಿರುದ್ದ ಸಮರ ಸಾರಿರುವ ವೈದ್ಯ ಜಗತ್ತನ್ನು ಒಂದಿಷ್ಟು ಸಮಯ ಬಯಲಿಗೆ ಕರೆತಂದು ಹೆಲಿಕಾಪ್ಟರ್ ಮೂಲಕ ಆಕಾಶದಿಂದ ಹೂಮಳೆ ಗರೆದು ಗೌರವಿಸಿದ ರೋಮಾಂಚನ ಗಳಿಗೆ ನಡೆಯಿತು. ಇದೇ ಸಂದರ್ಭದಲ್ಲಿ ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನಾ ವಿರುದ್ದ ನಿತ್ಯ ಹೋರಾಟ ನಡೆಸುತ್ತಿರುವ ವೈದ್ಯಲೋಕವನ್ನು ಬೆಳಗಾವಿ ಮರಾಠಾ ಲಘು ಪದಾತಿ ದಳದ ಸೈನಿಕರು ನೇರವಾಗಿ ಸಂದಿಸಿ ಗೌರವಿಸಿದ ಅಪರೂಪತೆ ಜರುಗಿದೆ.
ಇಂದು ಮುಂಜಾನೆ ಅಂತಃಕರಣದಿಂದ ವೈದ್ಯ ಲೋಕದ ಹತ್ತಿರ ಆಗಮಿಸಿದ ಸೌನಿಕರು ತುಂಬಿದ ಅಂತಃಕರದಿಂದ ಬೆಳಗಾವಿಯ ಎಲ್ಲ ವೈದ್ಯರಿಗೆ, ದಾದಿಯರಿಗೆ, ನರ್ಸಗಳಿಗೆ ವೈದ್ಯರೊಂದಿಗೆ ಸಹಾಯಕರಾಗಿ ಕೆಲಸ ಮಾಡುವ ಎಲ್ಲರಿಗೂ ಹೊತ್ತುತಂದ ಹೂಗುಚ್ಚಗಳನ್ನು ಸಮರ್ಪಿಸಿ, ಪ್ರೀತಿಯಿಂದ ತಂದ ಕಿಟ್‌ಗಳನ್ನು ನೀಡಿ ಗೌರವಿಸಿದರು. ಮರಾಠಾ ಲಘು ಪದಾತಿ ದಳದ ಬ್ರಿಗೆಡಿಯರ್ ರೋಹಿತ್ ಚೌದರಿ ಅವರ ನೇತೃತ್ವದಲ್ಲಿ ಅನುಪವಾದ ಗೌರವ ಸಮರ್ಪಣೆ ನಡೆಯುತ್ತಿದ್ದಂತೆ ವೈದ್ಯಲೋಕವೂ ಬೆರಗಾಗಿ ಭಾವ ತುಂಬಿಬಂದ ದೃಶ್ಯ ಅಪರೂಪವಾಗಿತ್ತು. ಪರಸ್ಪರ ದೇಶಭಿಮಾನ ಉಕ್ಕುವ ವಂದೆ ಮಾತರಂ ಗೀತೆ ಮೊಳಗಿತು.
ವೈರಿಗಳ ವಿರುದ್ದ ಹೋರಾಡುವ ಸೈನಿಕರು, ಕೊರಾನಾ ವಿರುದ್ಧ ಹೋರಾಡುವ ವೈದ್ಯರ ಸಮಾಗಮ ಪರಸ್ಪರ ಗೌರವ ಸಮರ್ಣೆ ಅಪರೂಪದ ದೃಶ್ಯ ಬೆಳಗಾವಿ ಜಿಲ್ಲಾ ಆಸ್ಪತ್ರೆಯ ಎದುರು ಇಂದು ನಿರ್ಮಾಣವಾಗಿತ್ತು.
ಕೊರೊನಾ ವಾರಿಯರ್ಸ್‌ಗೆ ಸೇನಾ ಅಧಿಕಾರಿಗಳಿಂದ ಅಭಿನಂದನೆ ಸಲ್ಲಿಸಲಾಯಿತು ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಹೂವು, ಉಡುಗೊರೆ ನೀಡಿ ಅಭಿನಂದನೆ ಸಲ್ಲಿಸಿದ ಮರಾಠಾ ಲೈಟ್ ಇನ್ಫೆಂಟ್ರಿ, ಮಿಲಿಟರಿ ಹಾಸ್ಪಿಟಲ್ ಅಧಿಕಾರಿಗಳು ಹಾಗೂ ಬ್ರಿಗೇಡಿಯರ್ ರೋಹಿತ್ ಚೌಧರಿ, ಕರ್ನಲ್ ಪದ್ಮಿನಿ ಹೆಚ್.ಎಸ್.ರಿಂದ ಅಭಿನಂದನೆ ಸಲ್ಲಿಸಿದರು
ಬ್ರಿಗೇಡಿಯರ್ ರೋಹಿತ್ ಚೌಧರಿ, ಮರಾಠಾ ಲೈಟ್ ಇನ್ಫೆಂಟ್ರಿ ಸ್ಟೇಷನ್ ಕಮಾಂಡರ್ ಅವರು ಜಿಲ್ಲಾ ಆಸ್ಪತ್ರೆ ಪ್ರವೇಶ ಮಾಡುತ್ತಿದ್ದಂತೆಯೇ ಸೇನಾಧಿಕಾರಿಗಳ ಎದುರು ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಜೈ ಹಿಂದ್, ಭಾರತ್ ಮಾತಾ ಕೀ ಜೈ ಘೋಷಣೆಗಳು ಕೂಗಿದರು. ಘೋಷಣೆ ಕೂಗಿದ ಜಿಲ್ಲಾಸ್ಪತ್ರೆಯ ವಾರ್ಡ್‌ಬಾಯ್‌ಗಳು, ಆಯಾಗಳು ಮನದಾಳದಲ್ಲಿದ್ದ ದೇಶಾಭಿಮಾನವನ್ನು ಹೊರಹಾಕಿದ್ರು
ಬೆಳಗಾವಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಕಂಡು ಬಂದ ಹೃದಯಸ್ಪರ್ಶಿ ದೃಶ್ಯ ನೋಡಿ ಅಲ್ಲಿದ್ದವರು ಕೆಲ ಕಾಲ ಭಾವುಕರಾಗಿದ್ದು ನಿಜ