ಬೆಳಗಾವಿ – ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಶನಿವಾರ ಮೊದಲ ಬಾರಿಗೆ ಬೆಳಗಾವಿ ಪಾಲಿಕೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು
ಸಭೆಯ ಆರಂಭದಲ್ಲಿ ಮಾತನಾಡಿದ ಜಿಲ್ಲಾ ಮಂತ್ರಿ ರಮೇಶ ಜಾರಕಿಹೊಳಿ ಪಾಲಿಕೆಯಲ್ಲಿರುವ ಎಲ್ಲ ೫೮ ಜನ ನಗರ ಸೇವಕರು ನನ್ನವರು. ಇಲ್ಲಿ ಎಲ್ಲ ಭಾಷಿಕರು ಒಂದೇ. ಇಲ್ಲಿ ನಾಡವಿರೋಧಿ ಕೆಲಸಗಳಿಗೆ ಅವಕಾಶ ಇಲ್ಲ ಎಂದು ಎಚ್ಚರಿಕೆ ನೀಡಿದರು
ಪಾಲಿಕೆ ಅಧಿಕಾರಿಗಳು ಎಲ್ಲ ನಗರ ಸೇವಕರನ್ನು ಮತ್ತು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ನೂರು ಕೋಟಿ ಸರ್ಕಾರದ ಅನುದಾನ ಇರಲಿ ಅಥವಾ ಸರ್ಕಾರದ ಯಾವುದೇ ಅನುದಾನ ಬಳಕೆ ಮಾಡುವಾಗ ಪಾಲಿಕೆಯ ಎಲ್ಲ ನಗರ ಸೇವಕರ ಅಭಿಪ್ರಾಯ ಆಲಿಸಬೇಕು ಎಂದು ಜಿಲ್ಲಾ ಮಂತ್ರಿಗಳು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು
ಇದೇ ಸಂಧರ್ಭದಲ್ಲಿ ಪಾಲಿಕೆಯ ಕಂದಾಯ ಅಧಿಕಾರಿ ರಾಜಶೇಖರ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವ ರಮೇಶ ಜಾರಕಿಹೊಳಿ ಮೇಯರ್ ಚುನಾವಣೆ ಸಂಧರ್ಭದಲ್ಲಿ ಯಾರ ಮಾತು ಕೇಳಿ ನಗರ ಸೇವಕಿ ಮೀನಾ ಬಾಯಿ ಚೌಗಲೆ ಅವರ ವಿರುದ್ಧ ಕೇಸ್ ದಾಖಲು ಮಾಡಿದ್ದಿಯಾ.? ನಿನೇನು ಇಲ್ಲಿ ಪಾಲಿಟಿಕ್ಸ ಮಾಡ್ತಿಯಾ? ತಪ್ಪು ಮಾಡಿದವರ ಎಲ್ಲರ ವಿರುದ್ಧ ಕೇಸ್ ಹಾಕ ಬೇಕಾಗಿತ್ತು ಎಂದು ಮಂತ್ರಿಗಳು ಕಂದಾಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು
ವಿರೋಧ ಪಕ್ಷದ ನಾಯಕ ರವಿ ಧೋತ್ರೆ ಮಾತನಾಡಿ ಸರ್ಕಾರದ ನೂರು ಕೋಟಿ ವಿಶೇಷ ಅನುದಾನ ಬಳಕೆ ಮಾಡುವಾಗ ನಗರ ಸೇವಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರೆ ಅದಕ್ಕೆ ದೀಪಕ ಜಮಖಂಡಿ ಮಾತನಾಡಿ ಪಾಲಿಕೆ ಅಧಿಕಾರಿಗಳು ೧೩ ನೇಯ ಹಣಕಾಸು ಹಾಗು ೧೪ ನೇ ಹಣಕಾಸು ಯೋಜನೆಯ ಅನುದಾನದ ಕಾಮಗಾರಿಗಳನ್ನು ಶಾಸಕರೊಬ್ಬರ ಮನೆಯಲ್ಲಿ ಕುಳಿತುಕೊಂಡು ನಿರ್ಧರಿಸುತ್ತಾರೆ ನಗರ ಸೇವಕರನ್ನು ಅಧಿಕಾರಿಗಳು ವಿಶ್ವಾಸಕ್ಕೆ ತೆಗೆದುಕೊಳ್ಳುವದಿಲ್ಲ ಎಂದು ಆರೋಪಿಸಿದರು
ಮದ್ಯ ಪ್ರವೇಶಿಸಿ ಮಾತನಾಡಿದ ಜಿಲ್ಲಾ ಮಂತ್ರಿ ರಮೇಶ ಜಾರಕಿಹೊಳಿ ಇನ್ನು ಮುಂದೆ ಪಾಲಿಕೆಯಲ್ಲಿ ಹುಕುಂ ಶಾಹಿ ಆಡಳಿತ ನಡೆಸಲು ಅವಕಾಶ ನೀಡುವದಿಲ್ಲ ಸರ್ಕಾರದ ನೂರು ಕೋಟಿ ಅನುದಾನ ಆಗಿರಬಹುದು ಅಥವಾ ಸರ್ಕಾರದ ಯಾವುದೇ ಅನುದಾನ ಆಗಿರಬಹುದು ಯೋಜನೆ ರೂಪಿಸುವಾಗ ಪಾಲಿಕೆಯ ೫೮ ಜನ ನಗರ ಸೇವಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವದು ಎಂದು ಸಚಿವ ರಮೇಶ ಜಾರಕಿಹೊಳಿ ಭರವಸೆ ನೀಡಿದಾಗ ಎಲ್ಲ ನಗರ ಸೇವಕರು ಮೇಜು ಕುಟ್ಟಿ ಸಚಿವರ ನಿರ್ಧಾರವನ್ಮುಸ್ವಾಗತಿಸಿದರು
ಕೊನೆಯಲ್ಲಿ ಮಾತನಾಡಿದ ಸಚಿವ ರಮೇಶ ಜಶರಕಿಹೊಳಿ ಇಂದಿನಿಂದ ಪಾಲಿಕೆಯಲ್ಲಿ ಹೊಸ ಆದ್ಯಾಯ ಆರಂಭವಾಗಿದೆ ಜೈ ಕರ್ನಾಟಕ ಎಂದು ಸಭೆಯನ್ನು ಸಮಾರೋಪಗೊಳಿಸಿದರು
ಶಾಸಕ ಸಂಬಾಜಿ ಪಾಟೀಲ ಮಾತನಾಡಿ ಪಾಲಿಕೆ ಅಂದರೆ ಸಿಮಿ ಗೌರ್ಮೆಂಟ್ ಇದ್ದಂಗೆ,ಸ್ಥಳಿಯ ಸಂಪನ್ಮೂಲಗಳನ್ನು ಕ್ರೋಢಿಕರಿಸಿ ಬರುವ ಅಕ್ಟ್ರಾಯ ಅನುದಾನದಲ್ಲಿ ಶೇ ೫೦ ರಷ್ಟು ಅನುದಾನವನ್ನು ಪಾಲಿಕೆಗೆ ನೀಡಿದರೆ ನಮ್ಮ ಮನೆಯನ್ನು ನಾವು ನಡೆಸಿಕೊಂಡು ಹೋಗುತ್ತೇವೆ ಎಂದರು
ಮೇಯರ್ ಸಂಜೋತಾ ಬಾಂಧೇಕರ ಮಾತನಾಡಿ ಜಿಲ್ಲಾ ಮಂತ್ರಿಗಳು ನಡೆಸಿದ ಸಭೆಯಿಂದ ತುಂಬಾ ಖುಷಿಯಾಗಿದೆ ಎಲ್ಲ ನಗರ ಸೇವಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವೆ ಎಂದು ಹೇಳಿ ನಗರ ಅಭಿವೃದ್ಧಿಗೆ ಸಧಿಸಿದಂತೆ ಜಿಲ್ಲಾ ಮಂತ್ರಿಗಳಿಗೆ ಮನವಿ ಅರ್ಪಿಸಿದರು
ರಮೇಶ ಸೊಂಟಕ್ಕಿ,ಕಿರಣ ಸೈನಾಯಕ,ಪಂಡರಿ ಪರಬ ಸೇರಿದಂತೆ ಹಲವಾರು ಜನ ನಗರ ಸೇವಕರು ನಗರ ಅಭಿವೃದ್ಧಿಗೆ ಸಮಂಧಿಸಿದಂತೆ ಸಲಹೆ ಸೂಚನೆ ನೀಡಿದರು
ಶಾಸಕ ಸೇಠ ಗೈರು
ಜಿಲ್ಲಾ ಮಂತ್ರಿಗಳು ಕರೆದ ಪಾಲಿಕೆ ಸಭೆಯಲ್ಲಿ ಶಾಸಕ ಫಿರೋಜ್ ಸೇಠ ಗೈರಾಗಿದ್ದರು ಶಾಸಕ ಸಂಬಾಜಿ ಪಾಟೀಲ ಮೇಯರ್ ಸಂಜೋತಾ ಬಾಂಧೇಕರ,ನಾಗೇಶ ಮಂಡೋಳ್ಕರ್ ಪಾಲಿಕೆ ಆಯುಕ್ತ ಶಶಿಧರ ಕುರೇರ ಉಪಸ್ಥಿತರಿದ್ದರು