ಬೆಳಗಾವಿ- ನಾಡ ಹಬ್ಬ ದಸರಾವನ್ನು ಕುಂದಾ ನಗರಿ ಬೆಳಗಾವಿಯಲ್ಲಿ ಅತ್ಯಂತ ವಿಭಿನ್ನವಾಗಿ ಆಚರಣೆ ಮಾಡಲಾಗುತ್ತಿದೆ. ನಗರದಲ್ಲಿ ದಸರಾ ಹಬ್ಬದ ಪ್ರಯುಕ್ತ ದುರ್ಗಾ ಮಾತಾ ದೌಡ್ ಕಾರ್ಯಕ್ರಮ ನಡೆಯುತ್ತಿದೆ. ಈ ದೌಡ್ ನಲ್ಲಿ ಸಾವಿರಾರು ಜನ ಯುವಕರು, ಯುವತಿಯರು ಪಾಲ್ಗೊಳ್ಳುತ್ತಾರೆ. ದೌಡ್ ನಡೆಯುವ ಪ್ರದೇಶದಲ್ಲಿ ಜನರು ರಸ್ತಗಳಿಗೆ ರಂಗೋಲಿಯನ್ನು ಬಿಡಿಸಿ ರಸ್ತೆಗಳನ್ನು ಅಲಂಕರಿಸುತ್ತಾನೆ. ಬೆಳಗ್ಗೆ 5.30ಕ್ಕೆ ಆರಂಭವಾಗುವ ದೌಡ್ ನಲ್ಲಿ ಬಣ್ಣದ ಪೈಜಾಮ, ಕೇಸರಿ ಪೇಟ್ ಧರಿಸಿ ಸಾವಿರಾರು ಜನ ಪಾಲ್ಗೊಳ್ಳುತ್ತಾರೆ. ಇಂದು ಬೆಳಗಾವಿ ಚನ್ನಮ್ಮ ವೃತ್ತದಿಂದ ಕೋಟೆ ದುರ್ಗಾ ದೇವಸ್ಥಾನದ ವರೆಗೆ ದೌಡ್ ಕಾರ್ಯಕ್ರಮ ನಡೆಯಿತು. ದೇಶ ಭಕ್ತಿ, ಧರ್ಮ ಜಾಗೃತಿಗಾಗಿ ಪ್ರತಿ ವರ್ಷ ಆಯೋಜನೆ ಮಾಡಲಾಗುತ್ತಿದೆ. ನವರಾತ್ರಿಯ 9 ದಿನಗಳ ಕಾಲ ಪ್ರತಿಯೊಂದ ಬಡವಾಣೆಯಲ್ಲಿ ಈ ದುರ್ಗಾಮಾತಾ ದೌಡ್ ನಡೆಯುತ್ತದೆ. ದೌಡ್ ನಲ್ಲಿ ಓಡೋ ಜನರಿಗೆ ರಸ್ತೆಯ ಪಕ್ಕದಲ್ಲಿ ನಿಂತಿರುವ ಜನ ಹೂಗಳನ್ನು ಚೆಲ್ಲಿ ಸ್ವಾಗತಿಸುವುದು ಎಲ್ಲರ ಗಮನ ಸೆಳೆಯುತ್ತದೆ. ಜತೆಗೆ ದೌಡ್ ಮುಕ್ತಾಯದ ನಂತರ ಇಂದು ದುರ್ಗಾ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು. ಈ ವೇಳೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
