Breaking News

ಬೆಳಗಾವಿಯಲ್ಲಿ ಸಂಬ್ರಮದ ಈದ ಮಿಲಾದ ಆಚರಣೆ

ಬೆಳಗಾವಿ- ನಗರದಲ್ಲಿ ಈದ ಮಿಲಾದ ಹಬ್ಬವನ್ನು ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು

ನಗರದ ಫೋರ್ಟ ರಸ್ತೆಯಲ್ಲಿ ಸಮಾವೇಶಗೊಂಡ ಮುಸ್ಲಿಂ ಧರ್ಮ ಗುರುಗಳು ಮೌಲ್ವಿಗಳು ಹಾಗು ಗಣ್ಯರು ಸಾಮೂಹಿಕ ಪ್ರಾರ್ಥನೆ ಮೂಲಕ ಹಬ್ಬದ ಆಚರಣೆಗೆ ಚಾಲನೆ ನೀಡಿದರು ಆರಂಭದಲ್ಲಿ ಮದರಸಾ ಮಕ್ಕಳು ಪ್ರಾರ್ಥನಾ ಗೀತೆಯನ್ನು ಹಾಡುವದರ ಮೂಲಕ ಎಲ್ಲರ ಗಮನ ಸೆಳೆದರು

ಮುಫ್ತಿ ಮಂಜೂರ ಆಲಂ ಅವರು ಹಬ್ಬದ ಸಂದೇಶ ನೀಡಿದರು ಮಹ್ಮದ ಪೈಗಂಬರ ಅವರು ಶಾಂತಿಯ ಸಂದೇಶ ನೀಡಿದರು ಅವರ ಬದುಕು ಅವರ ಸಂದೇಶವಾಗಿತ್ತು ಇಸ್ಲಾಂ ಧರ್ಮವನ್ನು ಶಾಂತಿ ಹಾಗು ಸಹ ಬಾಳ್ವೆಯ ಮೂಲಕ ಧರ್ಮ ಪ್ರಸಾರ ಮಾಡಿದರು ಇಸ್ಲಾಂ ಧರ್ಮ ಶಾಂತಿಯ ಪ್ರತೀಕವಾಗಿದ್ದು ಮುಸ್ಲಿಂ ಬಾಂಧವರು ಮಹ್ಮದ ಪೈಗಂಬರ ಅವರ ತತ್ವಾದರ್ಶಗಳನ್ನು ಪಾಲನೆ ಮಾಡಬೇಕು ಎಂದು ಕರೆ ನೀಡಿದರು

ಶಾಸಕ ಫೀರೋಜ್ ಸೇಠ ಮಾತನಾಡಿ ಏನಾದರೂ ಆಗು ಮೊದಲು ಮಾನವನಾಗು ಎನ್ನುವಂತೆ ಪ್ರತಿಯೊಬ್ಬರು ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಸಾಮರಸ್ಯ ಬದುಕಿನ ದ್ಯೇಯವಾಗಬೇಕು ಧರ್ಮ ದಿನಚರಿಯಾಗಬೇಕು ಸಹಬಾಳ್ವೆ ಪ್ರೇಮ ನಮ್ಮ ಮಂತ್ರವಾಗಬೇಕು ಅಂದಾಗ ಮಾತ್ರ ನಮ್ಮ ಧರ್ಮಾಚರಣೆ ಸಾರ್ಥಕವಾಗುತ್ತದೆ ಎಂದರು

ನಗರ ಸೇವಕ ರಮೇಶ ಕಳಸಣ್ಣವರ,ವಿಕಾಸ ಕಲಘಟಗಿ ಬಾಬುಲಾಲ ರಾಜಪುರೋಹಿತ ಸೇರಿದಂತೆ ಅನೇಕ ಮುಖಂಡರು ಕಾರ್ಯಕ್ರಮದಲ್ಲಿ‌ ಪಾಲ್ಗೊಂಡು ಸಾಮರಸ್ಯದ ಸಂದೇಶ ಸಾರಿದರು

ಡಿಸಿಪಿ ರಾಧಿಕಾ  ರಾಜು ಸೇಠ ಫೈಜಾನ ಸೇಠ ಮಹ್ಮದ ಪೀರಜಾದೆ ಸಲೀಂ ಖತೀಬ ಮೈನೋದ್ದೀನ ಮಕಾನದಾರ ಸೇರಿದಂತೆ ಮುಸ್ಲಿಂ ಮುಖಂಡರು ಹಾಗು ಸಾವಿರಾರು ಜನ ಮುಸ್ಲಿಂ ಬಾಂಧವರು ಹಾಜರಿದ್ದರು

ಅರ್ಥಪೂರ್ಣ ಮೆರವಣಿಗೆ

ಈದ ಮಿಲಾದ ಹಬ್ಬದ ನಿಮಿತ್ಯ ನಗರದಲ್ಲಿ ಅರ್ಥಪೂರ್ಣ ಮೆರವಣಿಗೆ ಹೊರಡಿಸಲಾಗಿತ್ತು ಮಹ್ಮದ ಪೈಗಂಬರ ಅವರ ಸಂದೇಶ ಸಾರುವ ರೂಪಕಗಳು ಮೆರವಣಿಗೆಯ ಕೇಂದ್ರ ಬಿಂದುವಾಗಿದ್ದವು ಇಸ್ಲಾಂ ಧರ್ಮದ ಧ್ವಜಗಳು ರಾರಾಜಿಸಿದವು ಧರ್ಮ ಗೀತೆಗಳು ಕವ್ವಾಲಿಗಳು ನಾತಗಳು ಮೆರವಣಿಗೆಯಲ್ಲಿ ಝೇಂಕರಿಸಿದವು

ಮೆರವಣಿಗೆ ಫೋರ್ಟ ರಸ್ತೆಯಿಂದ ಆರಂಭವಾಗಿ ಹಳೆ ಪಿಬಿ ರಸ್ತೆಯ ಮೂಲಕ ರಾಯಣ್ಣ ವೃತ್ತ ಚನ್ನಮ್ಮ ವೃತ್ತದ ಮೂಲಕ ಕಾಲೇಜು ರಸ್ತೆಯ ಮೂಲಕ ಕ್ಯಾಂಪ ಪ್ರದೇಶದ ಅಸದಖಾನ ದರ್ಗಾದಲ್ಲಿ ಸಮಾರೋಪ ಗೊಂಡಿತು

ಹಬ್ಬದ ನಿಮಿತ್ಯ ಭಕ್ತರು ಅಲ್ಲಲ್ಲಿ ಶರಬತ ಹಾಗು ಸಿಹಿ ಹಂಚಿ ಎಲ್ಲರ ಗಮನ ಸೆಳೆದರು

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *