ಬೆಳಗಾವಿ- ಹತ್ತರಗಿ ಗ್ರಾಮದ ಹದ್ದಿಯಲ್ಲಿರುವ ಏಕಸ್ ಕಂಪನಿಯ ಆವರಣದಲ್ಲಿ ವವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ ನಡೆಸುತ್ತಿದ್ದ ಕಾರ್ಮಿಕರ ಮೇಲೆ ಪೋಲಿಸರು ಹಿಗ್ಗಾ ಮುಗ್ಗಾ ಲಾಠಿ ಬೀಸಿದ ಕಾರಣ ನಾಲ್ವತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ
ಶನಿವಾರ ಸಂಜೆ ಹೊತ್ತಿಗೆ ಕಾರ್ಖಾನೆಗೆ ನುಗ್ಗಿದ ಪೋಲೀಸರು ಧರಣಿ ನಿರತ ಕಾರ್ಮಿಕರ ಮೇಲೆ ಮನಬಂದಂತೆ ಲಾಠಿ ಪ್ರಹಾರ ನಡೆಸಿರುವ ಪೋಲೀಸರು ಕಾರ್ಮಿಕರನ್ನು ಈಡೀ ರಾತ್ರಿ ಕಾರ್ಖಾನೆಯಲ್ಲಿಯೇ ಕೂಡಿ ಹಾಕಿದ್ದರೆಂದು ತಿಳಿದು ಬಂದಿದೆ
. ಏಕಸ್ ಕಂಪನಿಯಲ್ಲಿ ಕಾರ್ಯನಿಹಿಸುತ್ತಾ ಕಾರ್ಮಿಕ ಸಂಘಟನೆ ಮಾಡಿದ್ದಕ್ಕೆ ಕಂಪನಿಯ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವೆ ವಾಗ್ವಾದ.ನಡೆದು ಕಾರಮಿಕರು ಕಾರ್ಖಾನೆಯ ಆಡಳಿತ ಮಂಡಳಿಯ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನೆ ಮಾಡಿದ ಹಿನ್ನಲೆಯಲ್ಲಿ ಪೋಲೀಸರು ಕಾರ್ಮುಕರ ಮೇಲೆ ಖಾಕಿ ದರ್ಪ ತೋರಿಸಿದ್ದಾರೆ
ಕಾರ್ಮಿಕರ ಮೇಲೆ ಯಮಕನಮರಡಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ನ್ಯಾಯಕ್ಜಾಗಿ ಕಾರ್ಮಿಕರ ಹೋರಾಟ. ಮುಂದುವರೆದಿದೆ
ಕಾರ್ಮಿಕರು ಶಾಂತಿಯುತವಾಗಿ ಹೋರಾಟ ಮಾಡುವಾಗ ಪೋಲೀಸರು ಕಾರ್ಮಿಕರ ಮೇಲೆ ಲಾಠಿ ಬೀಸಿದ್ದು ಯಾರ ಪರವಾಗಿ ಎನ್ನುವ ವಿಷಯ ಚರ್ಚೆಗೆ ಕಾರಣವಾಗಿದೆ
ಇನ್ನಷ್ಟು ಚಿತ್ರಗಳನ್ನು ಬೆಳಗಾವಿ ಸುದ್ಧಿ ಫೇಸ್ ಬುಕ್ ಪೇಜ್ ನಲ್ಲಿ ನೋಡಿ