ಬೆಳಗಾವಿ – ನಮ್ಮ ಮಗ ಹಾಯ್..ಹಲೋ..ಅನ್ಬೇಕು.ಇಂಗ್ಲಿಷ್ ಕಲಿಯಬೇಕು ಎನ್ನುವ ಕನಸು ಕಾಣುವ ಬೆಳಗಾವಿ ನಗರದ ಸಾವಿರಾರು ಜನ ಪಾಲಕರು ಇಂಗ್ಲಿಷ್ ಶಾಲೆಗಳಲ್ಲಿ ಪ್ರವೇಶ ಪಡೆಯಲು ಇಂಗ್ಲಿಷ್ ಶಾಲೆಗಳ ಎದುರು ಕೀಲೋ ಮೀ ನಷ್ಟು ಕ್ಯೂ ನಿಂತುಕೊಂಡು ಶಾಲೆಗಳ ಎದುರೇ ರಾತ್ರಿಯಲ್ಲ ವಸತಿ ಮಾಡುವ ಪರಿಸ್ಥಿತಿ ಬೆಳಗಾವಿಯಲ್ಲಿ ಎದುರಾಗಿದೆ
ಪ್ರತಿ ವರ್ಷ ಇದೇ ಹಾಡು ನಗರದ ಇಂಗ್ಲೀಷ್ ಮಾದ್ಯಮ ಶಾಲೆಗಳಾದ ಸೆಂಟ್ ಪಾಲ್ಸ,ಸೇಂಟ್ ಮೇರಿ,ಸೇಂಟ್ ಜೋಸೆಫ್ ಸೇಂಟ್ ಝೇವಿಯರ್ಸ ಶಾಲೆಗಳಲ್ಲಿ ಪ್ರತಿ ದಿನ ಬೆಳಿಗ್ಗೆ ಕೇವಲ ಎರಡು ತಾಸು ಅಡ್ಮಿಶನ್ ಫಾರ್ಮಗಳನ್ನು ಹಂಚಲಾಗುತ್ತಿದೆ ಆದರೆ ಪಾಲಕರು ಒಂದು ದಿನ ಮೊದಲೇ ಶಾಲೆಗಳ ಎದುರು ಇಡೀ ರಾತ್ರಿ ಕ್ಯೂ ನಿಂತುಕೊಂಡು ಫಾರ್ಮಗಳನ್ನು ಪಡೆಯುತ್ತಿದ್ದಾರೆ
ಇಂಗ್ಲೀಷ್ ಶಾಲೆಗಳ ಆಡಳಿತ ಮಂಡಳಿಗಳು ತಮ್ಮ ಶಾಲೆಗಳ ಪ್ರತಿಷ್ಟೆ ಹೆಚ್ಚಿಸಿಕೊಳ್ಳಲು ಪ್ರತಿ ದಿನ ಕೇವಲ ಎರಡು ತಾಸು ಮಾತ್ರ ಫಾರ್ಮಗಳನ್ನು ಹಂಚುತ್ತಾರೆ ಶಾಲೆಗಳ ಎದುರು ಪ್ರತಿ ವರ್ಷ ಕ್ಯೂ ಕಾಣಬೇಕು ಶಾಲೆಯ ಪ್ರತಿಷ್ಡೆ ಹೆಚ್ಚಾಗಬೇಕು ಅನ್ನೋದು ಆಡಳಿತ ಮಂಡಳಿಗಳ ಹಠಮಾರಿ ಧೋರಣೆ ಆಗಿದೆ
ಸಾವಿರಾರು ಜನ ಪಾಲಕರು ನಗರದ ನಾಲ್ಕು ಪ್ರತಿಷ್ಟಿತ ಶಾಲೆಗಳ ಎದುರು ರಾತ್ರಿ ಸರದಿಯಲ್ಲಿ ನಿಂತು ಅಡ್ಮಿಶನ್ ಪಡೆಯುತ್ತಾರೆ.ಸರದಿಯಲ್ಲಿ ನಿಂತುಕೊಂಡ ಎಲ್ಲರಿಗೂ ಫಾರ್ಮ ಸಿಗೋದಿಲ್ಲ ಕೇವಲ ಎರಡು ತಾಸಿನಲ್ಲಿ ಕೆಲವರಿಗೆ ಫಾರ್ಮ ಸಿಗುತ್ತದೆ ಕೆಲವರಿಗೆ ಸಿಗೋದೇ ಇಲ್ಲ ಫಾರ್ಮ ಸಿಗದ ಪಸಲಕರು ಮತ್ತೊಂದು ದಿನ ಶಾಲೆಯ ಎದುರು ವಸತಿ ಮಾಡಲೇಬೇಕು
ಇಂಗ್ಲೀಷ್ ಮಾದ್ಯಮ ಶಾಲೆಗಳಲ್ಲಿ ಪ್ರತಿದಿನ ಕೇವಲ ಎರಡು ಘಂಟೆ ಮಾತ್ರ ಫಾರ್ಮಗಳನ್ನು ಹಂಚುವದರಿಂದ ನಗರದ ಸಾವಿರಾರು ಜನ ಪಾಲಕರು ದಿನನಿತ್ಯ ಪರದಾಡಬೇಕಾಗಿದೆ ಜಿಲ್ಲಾಧಿಕಾರಿ ಎನ್ ಜಯರಾಮ ಅವರು ಕೂಡಲೇ ಮದ್ಯಸ್ಥಿಕೆ ವಹಿಸಿ ಶಾಲಾ ಆಡಳಿತ ಮಂಡಳಿಗಳು ದಿನವಿಡೀ ಫಾರ್ಮಗಳನ್ನು ಹಂಚುವಂತೆ ಕ್ರಮ ಕೈಗೊಳ್ಳಬೇಕಾಗಿದೆ
ಪಾಲಕರು ಫಾರ್ಮ ಪಡೆಯಲು ಮೊದಲು ಶಾಲೆಗಳ ಎದುರು ವಸತಿ ಮಾಡುತ್ತಾರೆ ನಂತರ ಅಡ್ಮೀಶನ್ನ್ ಗಾಗಿ ಶಾಸಕರ ಅಥವಾ ಬಿಇಓ ಮತ್ತು ಡಿಡಿಪಿಐ ಕಚೇರಿಗೆ ಅಲೆದಾಡುವದು ಬೆಳಗಾವಿ ನಗರದಲ್ಲಿ ಸಾಮಾನ್ಯವಾಗಿಬಿಟ್ಟಿದೆ
ಜಿಲ್ಲಾಧಿಕಾರಿಗಳು ಇಂಗ್ಲೀಷ್ ಶಾಲೆಗಳ ಅಡ್ಮೀಶನ್ ಫಾರ್ಮಗಳನ್ನು ಕೇವಲ ಎರಡು ತಾಸು ನೀಡುವ ನೀತಿಯನ್ನು ಬದಲಿಸಬೇಕಾಗಿದೆ