ಇಂದು ಪತ್ತೆಯಾದ 9 ಜನ ಎಲ್ಲಿಂದ ಬಂದವರು,ಯಾವ ಊರಿನವರು,ವಿವರ ಇಲ್ಲಿದೆ ನೋಡಿ
ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಇಂದು 9 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ ಇಂದು ಪತ್ತೆಯಾದ 9 ಜನ ಎಲ್ಲಿಂದ ಬಂದವರು ಯಾವ,ಯಾವ ಊರಿನವರು ಮಾಹಿತಿ ಟ್ರಾವೆಲ್ ಹಿಸ್ಟರಿ ಇಲ್ಲಿದೆ ನೋಡಿ
ರಾಮದುರ್ಗ ತಾಲ್ಲೂಕಿನ ಕಲ್ಲೂರ ಗ್ರಾಮದ
ಏಳು ತಿಂಗಳ ಹೆಣ್ಣು ಮಗುವಿನಲ್ಲೂ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು P-1496 – 7 ತಿಂಗಳ ಹೆಣ್ಣು ಮಗುವಿಗೆ ಮಗುವಿಗೆ ಸೊಂಕು ಇರುವದು ಇಂದು ದೃಡವಾಗಿದ್ದು ಮೊದಲ ಬಾರಿಗೆ ರಾಮದುರ್ಗ ತಾಲ್ಲೂಕಿಗೆ ಕೊರೋನಾ ವೈರಸ್ ಎಂಟ್ರಿ ಕೊಟ್ಟಿದೆ. ಮೇ 7ರಂದು ಮಹಾರಾಷ್ಟ್ರದ ಕೊಲ್ಲಾಪುರದಿಂದ ಆಗಮಿಸಿದ್ದ ಕಲ್ಲೂರ ಮೂಲದ ಕುಟುಂಬವನ್ನು ಬಟಕುರ್ಕಿ ಗ್ರಾಮದಲ್ಲಿ ಸಾಮೂಹಿಕ ಕ್ವಾರಂಟೈನ್‌ನಲ್ಲಿಡಲಾಗಿತ್ತು ಈ ಪೈಕಿ ಏಳು ತಿಂಗಳ ಹೆಣ್ಣು ಮಗು P-1496ಗೆ ಕೊರೊನಾ ಸೋಂಕು ದೃಢವಾಗಿದೆ.
ಜಾರ್ಖಂಡ್‌ನ ಶಿಖರ್ಜಿಗೆ ಧಾರ್ಮಿಕ ಯಾತ್ರೆಗೆ ತೆರಳಿದ್ದ ಮೂವರಿಗೂ ಕೊರೊನಾ ಸೊಂಕು ಇರುವದು ದೃಡವಾಗಿದೆ. ಶಿಖರ್ಜಿಯಿಂದ ಮರಳಿದ್ದ P-1489 65 ವರ್ಷದ ವೃದ್ಧೆ 1490 – 63 ವರ್ಷದ ವೃದ್ಧೆ, 1493 – 75 ವರ್ಷದ ವೃದ್ಧನಿಗೆ ಕೊರೊನಾ ದೃಢವಾಗಿದೆ. ಒಂದೂವರೆ ತಿಂಗಳ ಹಿಂದೆ ಜಾರ್ಖಂಡ್‌ನ ಶಿಖರ್ಜಿಗೆ ಧಾರ್ಮಿಕ ಯಾತ್ರೆಗೆ ತೆರಳಿದ್ದ 15 ಜನರ ತಂಡವನ್ನು ಲಾಕ್‌ಡೌನ್ ಸಡಿಲಿಕೆ ಬಳಿಕ ರಾಜ್ಯಕ್ಕೆ ಮರಳಿದ್ದ 15 ಜನರನ್ನು ಮೇ 6ರಂದು 15 ಜನರನ್ನು ಕಾಗವಾಡ ತಾಲೂಕಿನ ಶಿರಗುಪ್ಪಿಯಲ್ಲಿ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು.
ಅಜ್ಮೀರ್‌ನಿಂದ ವಾಪಸ್ ಆಗಿದ್ದ ಇಬ್ಬರಲ್ಲಿ ಕೊರೊನಾ ಸೋಂಕು ಇರುವದು ದೃಢವಾಗಿದೆ. ಸಂಪಗಾಂವ ಗ್ರಾಮದ P-1491 24 ವರ್ಷದ ಯುವಕ, P-1492 – 25 ವರ್ಷದ ಯುವಕನಿಗೆ ಕೊರೊನಾ ಸೊಂಕು ದೃಢವಾಗಿದ್ದು ಸಂಪಗಾಂವ ಗ್ರಾಮದ ಹಾಸ್ಟೆಲ್‌ನಲ್ಲಿ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್‌ಗೆ ಇಡಲಾಗಿತ್ತು,ಅಜ್ಮೇರ್‌ಗೆ ಹೋಗಿ ಮರಳಿದ್ದ 8 ಜನರನ್ನು ಕ್ವಾರಂಟೈನ್‌ನಲ್ಲಿಡಲಾಗಿತ್ತು. ಎಂಟು ಜನರಲ್ಲಿ ಇಬ್ಬರಿಗೆ ಕೊರೊನಾ ಸೋಂಕು ದೃಢವಾಗಿದೆ.
ಹಿರೇಬಾಗೇವಾಡಿಯ ಸೋಂಕಿತ P-721 ಪ್ರಾಥಮಿಕ ಸಂಪರ್ಕದಲ್ಲಿದ್ದ ಮಹಿಳೆಗೂ ಸೋಂಕು ಇರುವದು ದೃಡವಾಗಿದೆ. P-1562 43 ವರ್ಷದ ಮಹಿಳೆಗೆ ಕೊರೊನಾ ಸೋಂಕು ದೃಢವಾಗಿದ್ದು,ಹಿರೇಬಾಗೇವಾಡಿಯಲ್ಲಿ ಸೊಂಕಿತರ ಸಂಖ್ಯೆ 49 ಕ್ಕೆ ತಲುಪಿದ್ದು ,ಹಾಪ್ ಸಂಚ್ಯುರಿ ಬಾರಿಸಲು ಕೇವಲ ಒಂದೇ ಒಂದು ಸಂಖ್ಯೆ ಬಾಕಿ ಇದೆ.
ಮುಂಬೈನಿಂದ ಹುಕ್ಕೇರಿಗೆ ಬಂದಿರುವ ಇಬ್ಬರಿಗೆ ಕೊರೋನಾ ಸೊಂಕು ಇರುವದು ದೃಡವಾಗಿದೆ.ಬೆಳಗಾವಿ ಜಿಲ್ಲೆಯಲ್ಲಿ ಮಹಾರಾಷ್ಟ್ರದ ನಂಜು ಏರುತ್ತಿದೆ.
ಇಂದು ಒಟ್ಟು ಬೇರೆ ರಾಜ್ಯಗಳಿಂದ ಮರಳಿದ್ದ 8 ಜನ ಹಾಗೂ ಓರ್ವ ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಒಬ್ಬ ಸೇರಿ 9 ಜನರಿಗೆ ಕೊರೊನಾ ಸೋಂಕು ದೃಢವಾಗಿದ್ದು ಕೊರೋನಾ ಮಹಾಮಾರಿ ,ಬೈಲಹೊಂಗಲ,ಕಾಗವಾಡ,ರಾಮದುರ್ಗ,ತಾಲ್ಲೂಕಿನಲ್ಲಿ ಮಹಾಮಾರಿ ಕೊರೋನಾ ವೈರಸ್ ಕಾಲಿಟ್ಟಿದೆ.
ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ರಾಜ್ಯ ಹೆಲ್ತ್ ಬುಲಿಟೀನ್ ಪ್ರಕಾರ 125 ಕ್ಕೇರಿದೆ