ಬೆಳಗಾವಿ-ಕಬ್ಬಿನ ಎಫ್ ಆರ್ ಪಿ ದರವನ್ನು ಕಾರ್ಖಾನೆಗಳಿಂದ ಖಾತ್ರಿಪಡಿಸಬೇಕು ಕಬ್ಬಿನ ಬಾಕಿ ಬಿಲ್ ಕೊಡದ ಕಾರ್ಖಾನೆಗಳನ್ನು ಬಂದ್ ಮಾಡಬೇಕು ಎಂದು ರೈತರು ನಿನ್ನೆಯಿಂದ ಆರಂಭಿಸಿರುವ ಧರಣಿ ಅಹೋ ರಾತ್ರಿ ನಡೆದು ಬೆಳಿಗ್ಗೆ ವಿಭಿನ್ನ ವಿಶಿಷ್ಟ ಸ್ವರೂಪ ಪಡೆದುಕೊಂಡಿದೆ
ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲೇ ರೈತರು ಸ್ನಾನ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು ಅಹೋರಾತ್ರಿ ಧರಣಿ ನಡೆಸಿದ್ದ ರೈತರು ಡಿಸಿ ಕಚೇರಿಯ ಮುಂಭಾಗದಲ್ಲಿರುವ ನಳದಲ್ಲಿ ಸ್ನಾನ ಮಾಡುವ ಮೂಲಕ ತಮ್ಮ ಪ್ರತಿಭಟನೆ ಮುಂದುವರೆಸಿದರು
ನಿನ್ನೆಯಿಂದ ಕಬ್ಬು ಬೆಳೆಗೆ ದರ ನಿಗದಿ ಪಡಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆ ಇಂದು ಬೆಳಿಗ್ಗೆ ಮತ್ತಷ್ಟು ತೀವ್ರಗೊಂಡಿದೆ ಖುದ್ದು ಸಿಎಂ ಪ್ರತಿಭಟನೆ ಸ್ಥಳಕ್ಕೆ ಆಗಮಿಸುವಂತೆ ರೈತರ ಆಗ್ರಹ ಪಡಿಸಿದ್ದು ಪ್ರತಿಭಟನೆಯಲ್ಲಿ ರೈತ ಮಹಿಳೆಯೊಬ್ಬಳು ಬಿಕ್ಕಿ ಬಿಕ್ಕಿ ಅಳುತ್ತ ಈ ಮಹಿಳಾ ರೈತ ಮಖಂಡೆ
ಕಣ್ಣೀರು ಹಾಕುತ್ತ ತಲೆ ಮೇಲೆ ಕಲ್ಲು ಹೊತ್ತುಕೊಂಡು ಪ್ರತಿಭಟನೆ ನಡೆಸಿ ಎಲ್ಲರ ಗಮನ ಸೆಳೆದಿದ್ದಾಳೆ
ಸಿಎಂ ಹಾಗೂ ಜಿಲ್ಲಾಧಿಕಾರಿಗಳ ಬೇಜವಾಬ್ದಾರಿಗೆ ಕಣ್ಣೀರಿಟ್ಟ ರೈತ ಮಹಿಳೆ ಜಿಲ್ಲಾಧಿಕಾರಿಗಳ ಬೇಜವಾಬ್ದಾರಿಯಿಂದ ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾಳೆ
ಡಿಸಿ ಕಚೇರಿ ಎದುರು ಸ್ನಾನ ಅರಬೆತ್ತಲೆ ಪ್ರತಿಭಟನೆ,ಡಿಸಿ ಕಚೇರಿ ಎದುರು ಗಜಂ ನಿಲ್ಲುವ ಮೂಲಕ ಪ್ರತಭಟನೆ ತೆಲೆ ಮೇಲೆ ಕಲ್ಲಿಟ್ಟು ಕಣ್ಣೀರು ಹಾಕಿದ ನಂತರ ಪ್ರತಿಭಟನಾ ನಿರತ ರೈತರು ಜಿಲ್ಲಾಧಿಕಾರಿ ಕಚೇರಿ ಗೇಟ್ ಬಂದ್ ಮಾಡಿದ್ದರಿಂದ
ಹಿಂಬಾಗಿಲಿಂದ ಸಿಬ್ಬಂದಿ ಕಚೇರಿ ಕೆಲಸಕ್ಕೆ ಹಾಜರ್ ಆಗಬೇಕಾಯಿತು
ರೈತ ಮಂಜು ಗದಾಡಿಯಿಂದ ವಿಭಿನ್ನ ಪ್ರತಿಭಟನೆ ನಡೆಯಿತು ಉಲ್ಟಾ ನಿಂತು ಪ್ರತಿಭಟನೆ ನಡೆಸಿದ ರೈತ ಮುಖ್ಯಮಂತ್ರಿ ಕುಮಾರಸ್ವಾಮಿ ಬೆಳಗಾವಿಗೆ ಬರಲಿ ರೈತರ ಸಮಸ್ಯೆಗಳನ್ನು ಬಗೆಹರಿಸಲಿ ಎಂದು ವಿಶಿಷ್ಟ ರೀತಿಯಲ್ಲಿ ಒತ್ತಾಯ ಮಾಡಿ ಎಲ್ಲರ ಗಮನ ಸೆಳೆದರು