ಸತತ ಮೂರನಾಲ್ಕು ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಮಳೆಯಾಗದೇ ಭೀಕರ ಬರ ಕಾಣಿಸಿಕೊಂಡಿದೆ.ಅನ್ನದಾತ ತೀವ್ರ ಸಂಕಷ್ಟಕ್ಕೀಡಾಗಿದ್ದಾನೆ.ಬತ್ತ ನೆಲ ಬಿಟ್ಟು ಏಳಲಿಲ್ಲ ಕಬ್ಬು ಸೊರಗಿತು ಸೋಯಾಬೀನ್ ಗೆ ದೇವರೇ ಗತಿ ಎನ್ನುವ ಪರಿಸ್ಥಿತಿ ಎದುರಾಗಿದೆ
ಜಾನುವಾರುಗಳಿಗೆ ಮೇವಿಲ್ಲದ ಕಾರಣ ಅವುಗಳ ಮೂಕವೇದನೆ ನೋಡಲಾಗದೇ ರೈತರು ತಮ್ಮ ಎತ್ತುಗಳನ್ನ ಮಾರಾಟ ಮಾಡಿದ್ದಾರೆ. ಸದ್ಯ ಉಳಿಮೆ ಮಾಡಲು ಎತ್ತುಗಳ ಇಲ್ಲದ ಕಾರಣ ರೈತ ಉಳಿಮೆ ಮಾಡಲು ಪರದಾಡುತ್ತಿದ್ದಾನೆ. ಕೈಯಲ್ಲಿ ಹಣವಿಲ್ಲದ ಬಡ ರೈತರು ಹಿಂದು ಮುಂದೆ ನೋಡದೇ ಎಡೆಕುಂಟಿಗಳಿಗೆ ಎತ್ತುಗಳ ಬದಲು ತಮ್ಮ ಹೆಗಲು ಕೊಟ್ಟು ಹೋಲದಲ್ಲಿ ಕೆಲಸ ಮಾಡುತ್ತಿದ್ದಾರೆ
ಇಂತಹ ದೃಶ್ಯ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಮಾರ್ಗನಕೊಪ್ಪ ಗ್ರಾಮದ ಮಂಜುನಾಥ ಹದಗಲ್ ಎನ್ನುವ ರೈತನ ಜಮೀನಿನಲ್ಲಿ
ನೋಡಲು ಸಿಕ್ಕಿತು ಈ ರೈತನ ವೇದನೆ ಕಂಡು ಜೀವ ಮೊಮ್ಮಲ ಮರಗಿತು
ಮನೆಯ ಹಿರಿಯ ಸಹೋದರ ಬಸವಣೆಪ್ಪ ರಂಟೆ ಹೊಡೆಯುತ್ತಿದ್ದರೆ, ಅದನ್ನ ಸಹೋದರ ಮಂಜುನಾಥ್ ಹಾಗೂ ಮಗ ರುದ್ರಪ್ಪ ಕುಂಟೆಯನ್ನ ಎಳೆಯುತ್ತಿದ್ದಾರೆ. ಇನ್ನೂಬ್ಬ ಅಪ್ರಾಪ್ತ ಬಾಲಕ ಶಿವಶಂಕರ್ ಕುಂಟೆಯನ್ನ ಮುಂದೆ ಎಳೆಯುವ ಕೆಲಸ ಮಾಡುತ್ತಿದ್ದಾನೆ.
ಇವರಿಗೆ ಗ್ರಾಮದಲ್ಲಿನ ಒಟ್ಟು 4ಎಕರೆ ಜಮೀನಿದ್ದು,ಹೋಲದಲ್ಲಿ ಮೂರನಾಲ್ಕು ಬೋರವೆಲ್ ಹೊಡೆದ್ರು ನೀರು ಬಿದ್ದಿಲ್ಲ.ಇದರಿಂದಾಗಿ ಈ ಸಹೋದರರು ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದಾರೆ. ಅಷ್ಟೇ ಅಲ್ಲ ಜಾನುವಾರುಗಳಿಗೆ ಮೇವಿಲ್ಲದ ಕಾರಣ ಇದ್ದ ಎರಡು ಎತ್ತು,ಜಾನುವಾರಗಳನ್ನ ಕಳೆದ 5ತಿಂಗಳ ಹಿಂದೆ ಮಾರಾಟ ಮಾಡಿದ್ದಾರೆ.ಸದ್ಯ ಒಂದು ಎಕರೆ ಜಮೀನಿನಲ್ಲಿ ಬೆಳೆದಿರುವ ಭತ್ತವನ್ನ ರಕ್ಷಣೆ ಮಾಡಿಕೊಳ್ಳಲು ಈ ಕುಟುಂಬ ದಿನವಿಡೀ ಪರದಾಡುತ್ತಿದೆ. ಬೇರೆ ಬಾಡಿಗೆ ಎತ್ತುಗಳನ್ನ ತಂದು ಎಡೆಕುಂಟಿ ಹೊಡೆಯುವುದಕ್ಕೆ ಹಣವಿಲ್ಲ. ಹೀಗಾಗಿ ಇಡೀ ಕುಟುಂಬ ಸದಸ್ಯರು ಹೋಲದಲ್ಲಿ ಎತ್ತುಗಳು ಮಾಡುವ ಕೆಲಸವನ್ನ ಇವರು ಮಾಡುತ್ತಿದ್ದಾರೆ. ಈ ದೃಶ್ಯ ನೋಡಿದ ಪ್ರತಿಯೊಬ್ಬರು ರೈತರ ಪರಿಸ್ಥಿತಿ ನೆನೆದು ಮಮ್ಮಲ ಮರುಗುತ್ತಿದ್ದಾರೆ.ಇದು ಕೇವಲ ಒಂದು ರೈತನ ಕುಟುಂಬದ ಕಥೆಯಲ್ಲ. ಬೆಳಗಾವಿ ಜಿಲ್ಲೆಯಲ್ಲಿನ ಹಲವು ರೈತ ಕುಟುಂಬದ ಕಥೆ ಇದೇ ಆಗಿದೆ.
ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ ಆದರೆ ಸದ್ಯ ಬೆಳಗಾವಿ ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದಾರೆ ಹಣದ ಇಲ್ಲದೇ ರೈತರು ತಮ್ಮ ಎತ್ತುಗಳನ್ನು ಮಾರಾಟ ಮಾಡಿ ಬಾಡಿಗೆ ಎತ್ತುಗಳನ್ನು ತರಲಿಕ್ಕಾಗದೇ ತಮ್ಮ ಹೆಗಲಿಗೆ ರೆಂಟೆ ಹೊತ್ತು ಉಳುಮೆ ಮಾಡುತ್ತರುವದು ದುರದೃಷ್ಟಕರ ಸಂಗತಿಯಾಗಿದೆ