ಬೆಲೆ ಕುಸಿತ, ರೈತನಿಂದ ಉಚಿತ ಟೋಮೆಟೋ ವಿತರಿಸಿ ಪ್ರತಿಭಟನೆ
ಬೆಳಗಾವಿ- ರಾಜ್ಯ ಸರ್ಕಾರದ ವಿರುದ್ಧ ಬೆಳಗಾವಿಯಲ್ಲಿ ರೈತನಿಂದ ವಿನೂತನ ಪ್ರತಿಭಟನೆ ನಡೆಯಿತು ಟೋಮೆಟೋ ಬೆಲೆ ಕುಸಿದ ಕಾರಣ ಉಚಿತ ಟೊಮ್ಯಾಟೊ ನೀಡಿ ವಿನೂತನ ಪ್ರತಿಭಟನೆ ನಡೆಸಲಾಯಿತು
ಟೊಮ್ಯಾಟೊ ಬೆಲೆ ಕುಸಿದ ಪರಿಣಾಮವಾಗಿ ರೈತನಿಂದ ಉಚಿತವಾಗಿ ಟೊಮ್ಯಾಟೊ ನೀಡಿ ಪ್ರತಿಭಟನೆ ಅನ್ನದಾತ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಎಲ್ಲರ ಗಮನ ಸೆಳೆದ
ಟೊಮ್ಯಾಟೊ ಬೆಳೆದ ನಾರಾಯಣ್ ಪಾಟೀಲ ಎಂಬ ರೈತನಿಂದ ಈ ರೀತಿಯ ವಿನೂತನ ಪ್ರತಿಭಟನೆ ನಡೆಯಿತು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಮುಂದೆ ವಾಹನದಲ್ಲಿ ಟೊಮ್ಯಾಟೊ ತುಂಬಿಕೊಂಡು ಬಂದು ಸಾರ್ವಜನಿಕರಿಗೆ ಉಚಿತ ನೀಡುತ್ತಿರುವ ರೈತ ಟೊಮ್ಯಾಟೊ ಬೆಲೆ ಕುಸಿದ ಪರಿಮಾಣ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹ ಪಡಿಸಿದ್ದು ವಿಶೇಷವಾಗಿತ್ತು
ಉಚಿತ ಸಿಗುವುದರಿಂದ ನಾ ಮುಂದು ತಾಮುಂದು ಅಂತಾ ಟೊಮ್ಯಾಟೊ ತೆಗೆದುಕೊಂಡು ಹೊಗುತ್ತಿರುವ ಸಾರ್ವಜನಿಕರು ರೈತನ ಸಮಸ್ಯೆ ಏನು ಅಂತ ತಿಳಿದುಕೊಳ್ಳುವ ಪುರಸೊತ್ತು ಅವರಿಗೆ ಇರಲಿಲ್ಲ ಟ್ರ್ಯಾಕ್ಟರ್ ಟ್ರ್ಯಾಲಿ ಟೋಮೆಟೋ ಕ್ಷಣಾರ್ಧದಲ್ಲಿ ಖಾಲಿಯಾಯಿತು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ