ಬೆಳಗಾವಿ-ನಾಲ್ಕು ವರ್ಷ ಸತತ ಬರಗಾಲ ಇನ್ನೊಂದೆಡೆ ಸಾಲದ ಶೂಲ,ಜತೆಗೆ ಕಬ್ಬಿನ ಬಿಲ್ ಬಾಕಿ ಇಂತಹ ಸಂಕಷ್ಟದಲ್ಲಿಯೂ ಅನ್ನದಾತ ಸಂತ್ರಸ್ಥರ ನೆರವಿಗೆ ಧಾವಿಸಿ ಇತರರಿಗೆ ಸ್ಪೂರ್ತಿಯಾಗಿದ್ದಾರೆ
ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ವಿವಿಧ ರೈತ ಸಂಘಟನೆಗಳು ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಹಲವಾರು ವರ್ಷಗಳಿಂದ ಟೆಂಟ್ ಹೊಡೆದಿದ್ದಾರೆ ಆದರೇ ಇದೇ ಟೆಂಟ್ ಇಂದು ಸಂತ್ರಸ್ಥರ ನೆರವಿಗೆ ಧಾವಿಸಿ ಎಲ್ಲರ ಗಮನ ಸೆಳೆಯಿತು
ರೈತರು ಇಂದು ಬೆಳಿಗ್ಗೆಯದಲೇ ಮನೆಯಿಂದ ಕಡಕ್ ರೊಟ್ಟಿ.ಚಪಾತಿ.ಬಳ್ಳೊಳ್ಳಿ ಚಟ್ನಿ, ಶೇಂಗಾ ಚಟ್ನಿ,ಬ್ರೇಡ್ ಬಿಸ್ಕತ್ ಪಾಕೇಟು.ಬ್ಲಾಂಕೇಟು.ಸೇರಿದಂತೆ ವಿವಿಧ ಅಗತ್ಯ ವಸ್ತುಳನ್ನು ಟೆಂಟ್ ನಲ್ಲಿ ಸಂಗ್ರಹಿಸಿ ಮಡಿಕೇರಿಯ ಸಂತ್ರಸ್ಥರಿಗೆ ರವಾನಿಸಿದರು
ರೈತರ ಈ ಕಾರ್ಯ ನೋಡಿದ ಅನೇಕ ಜನ ಸಾರ್ವಜನಿಕರು ಮಹತ್ಕಾರ್ಯದಲ್ಲಿ ಕೈಜೋಡಿಸಿದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ