ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಬರಗಾಲದ ಛಾಯೆ ಆವರಿಸಿದೆ ಅನ್ನದಾತ ಸಂಕಷ್ಟದ ಹೊಂಡದಲ್ಲಿ ನರಳುತ್ತಿದ್ದಾನೆ ಸಾಲ ಮನ್ನಾ ಮಾಡಲು ಆಗ್ರಹಿಸಿ ರೈತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಕಳೆದ ಒಂದು ವರ್ಷದಿಂದ ಹೋರಾಟ ಮಾಡುತ್ತಿದ್ದಾರೆ ಆದರೆ ರೈತ ಸಂಘಟನೆಗಳ ನಾಯಕರು ತಮ್ಮ ಕಾರಿನ ಹಿಂಬದಿಯಲ್ಲಿ ರೈತರ ಸಾಲ ಮನ್ನಾ ಎಂಬ ತೆಲೆ ಬರಹ ಬರೆಯಿಸಿಕೊಂಡು ಎಲ್ಲರ ಗಮನ ಸೆಳೆಯುತ್ತಿದ್ದಾರೆ
ಬೆಳಗಾವಿ ಜಿಲ್ಲೆಯ ಆರ್ಗ್ಯಾನಿಕ್ ಫಾರ್ಮರ್ಸ ಗ್ರೂಪ್ ಸಂಘಟನೆಯ ನಾಯಕರು ತಮ್ಮ ಕಾರಿನ ಹಿಂಬದಿಯಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಎಂದು ಬರೆಯಿಸಿಕೊಂಡು ತಮ್ಮ ಮನದಾಳದ ಒತ್ತಾಯವನ್ನು ಹೊರ ಹಾಕಿದ್ದಾರೆ
ರಾಜ್ಯದಲ್ಲಿ ಭೀಕರ ಬರಗಾಲವಿದೆ ರೈತ ಸಮುದಾಯ ಸರ್ಕಾರ ಸಾಲ ಮನ್ನಾ ಮಾಡಬಹುದು ಎನ್ನುವ ನೀರಿಕ್ಷೆಯಲ್ಲಿದ್ದಾರೆ ಆದರೆ ಸರ್ಕಾರಕ್ಕೆ ಇವರ ನೋವು ಅರ್ಥವಾಗುತ್ತಿಲ್ಲ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಪರಿಣಾಮಕಾರಿಯಾಗಿ ಹೋರಾಟ ಮಾಡುತ್ತಿಲ್ಲ ನಮ್ಮ ಕೈಗೆ ಅಧಿಕಾರ ಕೊಡಿ ನಾವೇ ಸಾಲ ಮನ್ನಾ ಮಾಡುತ್ತೇವೆ ಎನ್ನುತ್ತಿದ್ದಾರೆ
ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಅವರು ನಾವು ಅಧಿಕಾರಕ್ಕೆ ಬಂದ ಕೆಲವೇ ಘಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಕನ್ನಡಿಯೊಳಗೆ ಭರವಸೆಯ ಗಂಟು ತೋರಿಸುತ್ತಿದ್ದಾರೆ ಈಗ ಸದ್ಯಕ್ಕೆ ಸಾಲ ಮನ್ನಾ ವಿಷಯದಲ್ಲಿ ರಾಜ್ಯದ ರೈತರು ಅನಾಥ ಪ್ರಜ್ಞೆ ಅನುಭವಿಸುವ ಮೂಲಕ ಏಕಾಂಗಿ ಹೋರಾಟ ನಡೆಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ