ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸಕ್ಕೆ ಮೊತ್ತೊಂದು ಬಲಿಯಾಗಿದೆ.ಈ ಭಯಾನಕ ವೈರಸ್ ಗೆ ಜಿಲ್ಲೆಯಲ್ಲಿ ಒಟ್ಟು ಇಬ್ಬರು ಬಲಿಯಾದಂತಾಗಿದೆ.
ಇಂದು ಅಥಣಿಯಲ್ಲಿ ಕೊರೋನಾ ಸೊಂಕಿಗೆ ಮೊತ್ತೊಬ್ಬ ಬಲಿಯಾಗಿದ್ದು ಇಂದು ಸಂಜೆ ಬಿಡುಗಡೆಯಾದ ಹೆಲ್ತ್ ಬುಲಿಟೀನ್ ನಲ್ಲಿ ಇಬ್ಬರು ಜನ ಸೊಂಕಿತರು ಪತ್ತೆಯಾಗಿದ್ದಾರೆ.
ಇಂದು ಪತ್ತೆಯಾದ ಇಬ್ಬರು ಸೊಂಕಿತರ ಪೈಕಿ ಅಥಣಿ ತಾಲ್ಲೂಕಿನ ಸುಂಕಾನಟ್ಟಿ ಗ್ರಾಮದ 32 ವರ್ಷದ ಸೊಂಕಿತ ಮೃತಪಟ್ಟಿದ್ದು, ಈತ ನಿನ್ನೆ ರಾತ್ರಿಯೇ ತೀವ್ರ ಉಸಿರಾಟದ ತೊಂದರೆಯಿಂದಾಗಿ ಮೃತಪಟ್ಟಿದ್ದು ಈತನಿಗೆ ಸೊಂಕು ಇರುವದು ಇಂದು ದೃಡವಾಗಿದೆ.
ಕೊರೋನಾ ಮಹಾಮಾರಿಗೆ ಮೃತಪಟ್ಟಿರುವ ಅಥಣಿ ತಾಲ್ಲೂಕಿನ ವ್ಯೆಕ್ತಿ ಜನೇವರಿ ತಿಂಗಳಲ್ಲಿಯೇ ಇಂಗ್ಲೆಂಡ್ ನಿಂದ ಮರಳಿ ಅಥಣಿ ತಾಲ್ಲೂಕಿಗೆ ಬಂದಿದ್ದ ಎಂದು ತಿಳಿದು ಬಂದಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ