ಬೆಳಗಾವಿ- ಪಕ್ಕದ ಮಹಾರಾಷ್ಟ್ರ ಮತ್ತು ಪಶ್ಚಿಮ ಘಟ್ಟದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಬೆಳಗಾವಿ ಜಿಲ್ಲೆಯ ಬಹುತೇಕ ಎಲ್ಲ ನದಿಗಳು ಅಪಾಯದ ಮಟ್ಟದಲ್ಲಿ ಉಕ್ಕಿ ಹರಿಯುತ್ತಿವೆ.
ಪಕ್ಕದ ಮಹಾರಾಷ್ಟ್ರದಲ್ಲಿ ವಿಪರೀತ ಮಳೆಯಿಂದಾಗಿ ವೇದಗಂಗಾ ಸೇರಿದಂತೆ ಉಳಿದ ನದಿಗಳಿಂದ ಕಲ್ಲೋಳ ಸೇತುವೆಗೆ ಒಂದು ಲಕ್ಷ 31 ಸಾವಿರ ಕ್ಯುಸೆಕ್ಸ ನೀರು ಹರಿದು ಬರುತ್ತಿದ್ದು ಕೃಷ್ಣಾ ವೇದಗಂಗಾ ಸೇರಿದಂತೆ ಉಳಿದ ನದಿಗಳ ಒಟ್ಟು ,7 ಕೆಳಸೇತುವೆಗಳು ಮುಳುಗಡೆಯಾಗಿವೆ.ಮಹಾರಾಷ್ಟ್ರದಿಂದ ಇದೇ ರೀತಿ ಒಳ ಹರಿವು ಮುಂದುವರೆದರೆ ಬೆಳಗಾವಿ ಜಿಲ್ಲೆಯ ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹದ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ.
ಕೃಷ್ಣಾ ನದೀ ಪಾತ್ರದ ಗದ್ದೆಗಳಲ್ಲಿ ನದಿ ನೀರು ನುಗ್ಗಿದ್ದು ಬೆಳೆಗಳು ಜಲಾವೃತಗೊಂಡಿವೆ.ನದಿ ದಡದಲ್ಲಿರುವ ಮಂದಿರಗಳು,ಕೆಳ ಸೇತುವೆಗಳು ಮುಳುಗಡೆಯಾಗಿದ್ದು ನದಿ ಪಾತ್ರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ಜಿಲ್ಲಾಡಳಿತ ಸೂಚನೆ ನೀಡಿದೆ.
ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದ ಪರಿಸ್ಥಿತಿ ಇರುವದರಿಂದ ಮುಂಜಾಗೃತಾ ಕ್ರಮವಾಗಿ ಪ್ರವಾಹದ ಪರಿಸ್ಥಿತಿ ಎದುರಿಸಲು,NDRF, ಮತ್ತು SDRF ಪಡೆಗಳನ್ನು ಜಿಲ್ಲೆಯ ಪ್ರವಾಹ ಪರಿಸ್ಥಿತಿ ಇರುವ ಸ್ಥಳಗಳಲ್ಲಿ ನಿಯೀಜನೆ ಮಾಡಲಾಗಿದ್ದು ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡದೆ.
ಪಶ್ಚಿಮ ಘಟ್ಟದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು,ಮಲಪ್ರಭಾ,ಘಟಪ್ರಭಾ, ಹಿರಣ್ಯಕೇಶಿ ಮಾರ್ಕಂಡೇಯ ನದಿಗಳು ಉಕ್ಕಿ ಹರಿಯುತ್ತಿವೆ.ಮಲಪ್ರಭಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು ಖಾನಾಪೂರ ಪ್ರದೇಶದ ಮಲಪ್ರಭಾ ನದಿ ಪಾತ್ರದಲ್ಲಿ ಪ್ರವಾಹದ ಪರಿಸ್ಥಿತಿ ಎದುರಾಗಿದೆ.ಜಾಂಬೋಟಿ ಸುತ್ತಮುತ್ತಲಿನ ಕೆಲವು ಗ್ರಾಮಗಳ ರಸ್ತೆಗಳು ಜಲಾವೃತಗೊಂಡ ಪರಿಣಾಮ ಕೆಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಇವತ್ತು ಮಳೆ ಪ್ರಮಾಣ. ಸ್ವಲ್ಪ ಕಡಿಮೆಯಾಗಿದೆ.ಆದರೂ ಪ್ರವಾಹದ ಆತಂಕ ಎದುರಾಗಿದೆ.ಪಕ್ಕದ ಮಹಾರಾಷ್ಟ್ರ ದಿಂದ ಕೃಷ್ಣಾ ನದಿಗೆ 2 ಲಕ್ಷ ಕ್ಯುಸೆಕ್ಸ್ ನೀರು ಹರಿದು ಬಂದರೆ ಕೃಷ್ಣಾ ನದಿ ತೀರದಲ್ಲಿ ಪ್ರವಾಹದ ಪರಿಸ್ಥಿತಿ ಎದುರಾಗಲಿದೆ.