ಬೆಳಗಾವಿ- ಬೆಳಗಾವಿಯಲ್ಲಿ ನಡೆಯುವ ಗಣೇಶೋತ್ಸವ ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದಿದ್ದು ಬೆಳಗಾವಿಯಲ್ಲಿ ನಡೆಯುವಂತಹ ಅದ್ಧೂರಿ ಗಣೇಶೋತ್ಸವ ರಾಜ್ಯದ ಬೇರೆ ಯಾವ ಜಿಲ್ಲೆಯಲ್ಲಿ ನಡೆಯುವುದಿಲ್ಲ
ಕರ್ನಾಟಕ ಮತ್ತು ನೆರೆಯ ಮಹಾರಾಷ್ಟ್ರದ ಜನರನ್ನು ಆಕರ್ಷಿಸುತ್ತಿದ್ದ ಬೆಳಗಾವಿ ಗಣೇಶೋತ್ಸವಕ್ಕೆ ಈಗ ವಿದೇಶಿಗರನ್ನು ಆಕರ್ಷಿಸುತ್ತಿರುವದು ಬೆಳಗಾವಿಯ ಹೆಮ್ಮೆ
ಇಂದು ಬೆಳಗಾವಿ ನಗರದ ರವಿವಾರ ಪೇಟೆಯ ಗಣೇಶ ಮಂಡಳದವರು ಗಣೇಶನನ್ನು ಅದ್ದೂರಿ ಮೆರವಣಿಗೆ ಮೂಲಕ ತರುವಾಗ ಇಬ್ಬರು ವಿದೇಶಿಗರು ಗಣಪತಿ ಬಪ್ಪಾ ಮೋರೆಯಾ ಎಂದು ಬರೆಯಲಾದ ಟೋಪಿ ಹಾಕಿ ಕೊಂಡು ದೇಶೀಯ ಝುಬ್ಬಾ ಧರಿಸಿ ಢೋಲ್ ತಾಶಾ ಬಾರಿಸುವದನ್ನು ಗಮನಿಸಿದ ನೋಡುಗರಿಗೆ ಅಚ್ಚರಿಯೇ ಅಚ್ಚರಿ
ಯುನೈಟೆಡ್ ಕಿಂಗ್ ಡಮ್ ನ ವಿದೇಶಿ ಕಪಲ್ ಢೋಲ್ ತಾಶಾ ಬಾರಿಸಿ ಗಣಪತಿ ಬಪ್ಪಾ ಮೋರೆಯಾ ಎಂದು ಭಕ್ತಿ ಘೋಷಗಳನ್ನು ಹಾಕಿ ಗಣೇಶನ ಭಕ್ತಿಯ ಭಂಡಾರದಲ್ಲಿ ಮಿಂದೆದ್ದು ಎಲ್ಲರ ಗಮನ ಸೆಳೆದರು.
ರವಿವಾರ ಪೇಟೆಯ ಗಣಪತಿ ಮಂಡಳದ ಮೆರವಣಿಗೆಯಲ್ಲಿ ವಿದೇಶಿಗರ ಭಕ್ತಿ ನೋಡಿ ಬೆಳಗಾವಿ ಭಕ್ತರು ಭಾವುಕರಾಗಿ ವ್ಹಾರೆ..ವ್ಹಾ ಎಂದು ಫಾರೆನ್ ಅತಿಥಿಗಳನ್ನು ಹುರುದುಂಬಿಸಿದರು