ಬೆಳಗಾವಿ- ಜಿಟಿ,ಜಿಟಿ ಮಳೆಯಲ್ಲೂ ಭಕ್ತರ ಉತ್ಸಾಹ ಕುಗ್ಗಲಿಲ್ಲ,ಗಣೇಶ ಗಣೇಶ ಮೋರೆಯಾ,ಗಣಪತಿ ಬಪ್ಪಾ ಮೋರೆಯಾ ಎನ್ನುವ ಜೈಘೋಷಗಳೊಂದಿಗೆ ಬೆಳಗಾವಿಯಲ್ಲಿ ವಿಘ್ನೇಶ್ವರನಿಗೆ ಅದ್ದೂರಿಯಾಗಿ ಬರಮಾಡಿಕೊಂಡರು
ಬೆಳಗಾವಿಯಲ್ಲಿ ಬೆಳಗಿನ ಜಾವ ಜಿಟಿ ಜಿಟಿ ಮಳೆ ಸುರಿಯುತ್ತಲೇ ಇತ್ತು ಮಳೆಯನ್ನು ಲೆಕ್ಕಿಸದೇ ಭಕ್ತರು ಗಣೇಶನನ್ನು ಉತ್ಸಾಹದಿಂದಲೇ ಬರಮಾಡಿಕೊಂಡ ದೃಶ್ಯ ಬೆಳಗಾವಿಯಲ್ಲಿ ಸಾಮಾನ್ಯವಾಗಿತ್ತು.
ಕೋವೀಡ್ ಹಿನ್ನಲೆಯಲ್ಲಿ ಈ ಬಾರಿ ಪಟಾಕಿ ಸದ್ದು ಅಷ್ಟೊಂದು ಜೋರಾಗಿ ಕೇಳಿಸಲಿಲ್ಲ,ವಾದ್ಯಮೇಳ ಗಳು ಕಾಣಿಸಲಿಲ್ಲ ಆದರೂ ಭಕ್ತರು ಶ್ರದ್ಧೆ ಮತ್ತು ಭಕ್ತಿಯಿಂದ ಶ್ರೀ ಗಣೇಶನನ್ನು ಬರಮಾಡಿಕೊಂಡರು.
ಮಾಸ್ಕ ಹಾಕಿಕೊಂಡು,ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಭಕ್ತರು ಶಿಸ್ತು ಪಾಲಿಸುವ ಮೂಲಕ ಎಲ್ಲರ ಗಮನ ಸೆಳೆದರು ಹನ್ನೊಂದು ಗಂಟೆಗೆ ಮಳೆರಾಯ,ಮಾಯವಾದ ಹಿನ್ನಲೆಯಲ್ಲಿ, ಒಂದು ಗಂಟೆ ಕಾಲ ಬೆಳಗಾವಿ ನಗರದಲ್ಲಿ ಸ್ವಲ್ಪ ರಶ್ ಆಗಿತ್ತು
ಗಣೇಶ ಮಂಡಳಗಳ ಪದಾಧಿಕಾರಿಗಳು ಯಾವುದೇ ರೀತಿಯ ಮೆರವಣಿಗೆ ಗದ್ದಲ ಇಲ್ಲದೇ ಗಣೇಶ ಮೂರ್ತಿಗಳನ್ನು ತಮ್ಮ ತಮ್ಮ ಮಂಟಪಗಳಿಗೆ ತೆಗೆದುಕೊಂಡು ಹೋಗುತ್ತಿದ್ದು ಈ ಬಾರಿಯ ಹಬ್ಬದಲ್ಲಿ ಪಟಾಕಿ,ಬ್ಯಾಂಡ್,ಸದ್ದು ಕೇಳಿಸದೇ ಇರುವದು ಹಬ್ಬದ ವಿಶೇಷವಾಗಿತ್ತು.
ಕೊರೊನಾ, ಮಳೆ ನಡುವೆಯೂ ಗಣೇಶ ಉತ್ಸವದ ಸಂಭ್ರಮ ಕುಗ್ಗಲಿಲ್ಲ ಬೆಳಗಾವಿ ನಗರದ ಗಲ್ಲಿ ಗಲ್ಲಿಗಳಲ್ಲಿ ಮೊಳಗಿದ ‘ಗಣಪತಿಬಪ್ಪಾ ಮೋರೆಯಾ’ ಘೋಷಣೆಗಳು ಮೊಳಗಿದವು ಇವತ್ತು ಬೆಳಗ್ಗೆಯಿಂದಲೇ ಗಣೇಶನನ್ನ ಬೆಳಗಾವಿಯ ಭಕ್ತರು ಬರಮಾಡಿಕೊಂಡರು
ಸಾರ್ವಜನಿಕ ಗಣೇಶ ಉತ್ಸವ ನಿಷೇಧ ಹಿನ್ನೆಲೆ
ತಮ್ಮಮನೆ, ದೇವಸ್ಥಾನಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದರು.ಕುಂದಾನಗರಿಯಲ್ಲಿ ಸರ್ಕಾರದ ಮಾರ್ಗ ಸೂಚಿಯಂತೆ ಗಣೇಶ ಉತ್ಸವ ನಡೆಯಿತು