ಬೆಳಗಾವಿ- ಬೆಳಗಾವಿ ನಗರದ ಬಹುತೇಕ ಎಲ್ಲ ಪೋಲೀಸ್ ಠಾಣೆಗಳಲ್ಲಿ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ.ಪ್ರತಿವರ್ಷ ಎಲ್ಲ ಠಾಣೆಗಳಲ್ಲಿ ಗಣೇಶ ಹಬ್ಬದ ನಿಮಿತ್ಯ ಮಹಾಪ್ರಸಾದ ಆಯೋಜಿಸುವದು ಬೆಳಗಾವಿ ನಗರದ ಸ್ಪೇಶ್ಯಾಲಿಟಿ.
ಈ ವರ್ಷ ಕೊರೋನಾ ಸಂಕಷ್ಟ,ಜನ ಸೇರಬಾರದು,ಸಾಮಾಜಿಕ ಅಂತರ ಕಾಯ್ದುಕೊಳ್ಳುವದರ ಜೊತೆಗೆ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಬೆಳಗಾವಿಯ ನಗರ ಪೋಲೀಸ್ ಇಲಾಖೆ ನಿರ್ಧರಿಸಿದ್ದು,ಈ ವರ್ಷ. ಬೆಳಿಗ್ಗೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ,ಬೆಳಿಗ್ಗೆಯಿಂದ ಸಂಜೆಯವರೆಗೆ ಗಣೇಶನನ್ನು ಆರಾಧಿಸಿ ಸಂಜೆ ಹೊತ್ತಿಗೆ ಗಣೇಶ ವಿಸರ್ಜನೆ ಮಾಡಲಾಗುತ್ತಿದೆ.
ಕಾನೂನು ಸುವ್ಯವಸ್ಥೆ ಕಾಪಾಡುವ ಪೋಲೀಸರು ಈ ಬಾರಿ ಯಾವುದೇ ಆಡಂಬರ ಇಲ್ಲದೇ ಶಿಸ್ತು ಪಾಲಿಸುವ ಮೂಲಕ ಅತ್ಯಂತ ಸರಳವಾಗಿ ಹಬ್ಬವನ್ನು ಆಚರಿಸುತ್ತಿದ್ದು ಈ ಬಾರಿಯ ಹಬ್ಬವನ್ನು ಹನ್ನೊಂದು ದಿನದ ಬದಲಾಗಿ ಕೇವಲ ಒಂದೇ ದಿನಕ್ಕೆ ಸೀಮಿತಗೊಳಿಸಿದ್ದಾರೆ.
ಬೆಳಗಾವಿಯ ಎಲ್ಲ ಪೋಲೀಸ್ ಠಾಣೆಗಳಲ್ಲಿ ಈ ವರ್ಷ ಮಹಾಪ್ರಸಾದ ಆಯೋಜನೆ ಇಲ್ಲ,ಹೀಗಾಗಿ ಒಂದೇ ದಿನ ಗಣೇಶನ ಪೂಜೆ ನೆರವೇರಿಸಿ ಅತ್ಯಂತ ಶ್ರದ್ಧಾಭಕ್ತಿಯಿಂದ ಹಬ್ಬವನ್ನು ಆಚರಿಸುತ್ತಿದ್ದು ಇಂದು ಸಂಜೆ ಹೊತ್ತಿಗೆ ಬೆಳಗಾವಿ ನಗರದ ಠಾಣೆಗಳಲ್ಲಿ ಪ್ರತಿಷ್ಠಾಪನೆ ಮಾಡಿರುವ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗುತ್ತಿದೆ
ಪೋಟೋ ಕ್ಯಾಪ್ಶನ್
ಬೆಳಗಾವಿಯ ಉದ್ಯಮಬಾಗ್ ಪೋಲೀಸ್ ಠಾಣೆಯಲ್ಲಿ ಸಿಪಿಐ ದಯಾನಂದ ಶೇಗುಣಸಿ ಅವರು ಗಣೇಶನ ಪೂಜೆ ನೆರವೇರಿಸುತ್ತಿರುವ ದೃಶ್ಯ