ಶಾಂತಿ ಕದಡುವ, ಕಿಡಗೇಡಿಗಳ ಕಿವಿ ಹಿಂಡಲು ಸಜ್ಜಾದ ಖಾಕಿ ಪಡೆ….!!
ಬೆಳಗಾವಿ- ಮಹಾರಾಷ್ಟ್ರದ. ಮುಂಬಯಿ ,ಪೂನಾ ಹೊರತು ಪಡೆಸಿದರೆ, ರಾಷ್ಟ್ರದಲ್ಲಿಯೇ ಅತ್ಯಂತ ಅದ್ಧೂರಿಯಾಗಿ ವಿಜೃಂಭಣೆಯಿಂದ ಗಣೇಶ ಹಬ್ಬವನ್ನು ಆಚರಿಸುವದು ಬೆಳಗಾವಿಯಲ್ಲಿ ,ರಾಜ್ಯದಲ್ಲಿಯೇ ಅತ್ಯಂತ ವಿಭಿನ್ನವಾಗಿ ಗಡಿ ಭಾಗದ ಬೆಳಗಾವಿಯಲ್ಲಿ ಗಣೇಶ ಹಬ್ಬವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಹಬ್ಬವನ್ನು ಆಚರಿಸಲಾಗುತ್ತದೆ.
ಸ್ವಾತಂತ್ರ್ಯ ಹೋರಾಟದ ಹಿನ್ನಲೆ ಮತ್ತು ಇತಿಹಾಸ ಹೊಂದಿರುವ ಸಾರ್ವಜನಿಕ ಶ್ರೀಗಣೇಶ ಪ್ರತಿಷ್ಠಾಪನೆ ವಿಚಾರದಲ್ಲಿ ಬೆಳಗಾವಿ ಮಹಾನಗರದ ಜನತೆ ಹೊಸ ಇತಿಹಾಸ ಸೃಷ್ಟಿ ಮಾಡಿದ್ದಾರೆ.ಬೆಳಗಾವಿ ಮಹಾನಗರ ಕಮಿಷ್ನರೇಟ್ ವ್ಯಾಪ್ತಿಯಲ್ಲಿ ಒಟ್ಟು 937 ಸಾರ್ವಜನಿಕ ಗಣೇಶ ಉತ್ಸವ ಮಂಡಳಗಳು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿದ್ದಾರೆ.ಈ ಎಲ್ಲ ಮೂರ್ತಿಗಳನ್ನು ವಿಸರ್ಜನೆ ಮಾಡುವ ಅಭೂತಪೂರ್ವ ಮೆರವಣಿಗೆ ಇಂದು ಬೆಳಗಾವಿಯಲ್ಲಿ ನಡೆಯಲಿದೆ.
ಗಣೇಶ ವಿಸರ್ಜನೆಗೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಬೆಳಗಾವಿ ಮಹಾನಗರ ಪಾಲಿಕೆ ಮಾಡಿಕೊಂಡಿದೆ. ಗಣೇಶ ವಿಸರ್ಜನೆಯ ಕ್ಷಣಗಳನ್ನು ಕಣ್ತುಂಬಿಕೊಳ್ಳಲು, ಕರ್ನಾಟಕ,ಗೋವಾ,ಮತ್ತು ಪಕ್ಕದ ಮಹಾರಾಷ್ಟ್ರದ ಮೂಲೆ,ಮೂಲೆಗಳಿಂದ ಬೆಳಗಾವಿಗೆ ಲಕ್ಷಾಂತರ ಜನ ಬರ್ತಾರೆ, ಅವರಿಗೆ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲ ಅನಕೂಲತೆಗಳನ್ನು ಬೆಳಗಾವಿ ಮಹಾನಗರ ಪಾಲಿಕೆ ಮಾಡುತ್ತದೆ.
ಇಂದು ಸಂಜೆ ಬೆಳಗಾವಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಗಣೇಶ ವಿಸರ್ಜನೆಯ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಈ ಮೆರವಣಿಗೆ ಇಂದು ಗುರುವಾರ ಸಂಜೆ 4 ಗಂಟೆಗೆ ಶುರುವಾಗಲಿದ್ದು ನಾಳೆ ಶುಕ್ರವಾರ ಮಧ್ಯಾಹ್ನದ ವರೆಗೂ ವಿಸರ್ಜನೆ ಮೆರವಣಿಗೆ ನಡೆಯಲಿದೆ.
ಬೆಳಗಾವಿಯ ಗಣೇಶ ಹಬ್ಬಕ್ಕೆ ಲಕ್ಷಾಂತರ ಜನ ಸೇರುತ್ತಾರೆ ಹೀಗಾಗಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಬೆಳಗಾವಿ ಮಹಾನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ಪೋಲೀಸ್ ಬಂದೋಬಸ್ತಿಯನ್ನು ನಿಯೋಜಿಸಲಾಗಿದೆ.ಶಾಂತಿ ಕದಡುವ ಕಿಡಗೇಡಿಗಳ ಮೇಲೆ ಹದ್ದಿನ ಕಣ್ಣಿಡಲು ಪೋಲೀಸರು ದ್ರೋಣ ಕ್ಯಾಮರಾ ಕಣ್ಗಾವಲಿನ ಜೊತೆಗೆ ಸಮಾಜ ಘಾತುಕ ಶಕ್ತಿಗಳ ಕಿವಿ ಹಿಂಡಲು ಬೆಳಗಾವಿ ಪೋಲೀಸರು ಸಜ್ಜಾಗಿದ್ದಾರೆ.