ಬೆಳಗಾವಿ- ಬೆಳಗಾವಿ ಜಿಲ್ಲಾ ಗೋ ರಕ್ಷಣಾ ಸಂಘಟನಾ ಸಮೀತಿಯಿಂದ ನಗರದ ಧರ್ಮವೀರ ಸಂಬಾಜಿ ವೃತ್ತದಲ್ಲಿ ಗೋ ಸತ್ಯಾಗ್ರಹ ಆರಂಭವಾಗಿದೆ
ಸತ್ಯಾಗ್ರಹ ದಲ್ಲಿ ರಾಜೇಂದ್ರ ಜೈನ.ಶ್ರೀರಾಮ ಸೇನೆಯ ರಾಮಾಕಾಂತ ಕುಂಡಸ್ಕರ್ ವೀರೇಶ ಕಿವಡಸೋಮಣ್ಣವರ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ನಾಯಕರು ಭಾಗವಹಿಸಿದ್ದರು
ಗೋ ಸತ್ಯಾಗ್ರಹದ ಸಾನಿದ್ಯ ವಹಿಸಿ ಮಾತನಾಡಿದ ಶ್ರೀ ಚಿತ್ತಪ್ರಕಾಶನಂದ ಶ್ರೀಗಳು ಮಾತನಾಡಿ ಗೋ ರಕ್ಷಣೆಗೆ ಜನಾಂದೋಲನ ನಡೆಯಬೇಕು ಕೇಂದ್ರ ಸರ್ಕಾರ ಗೋರಕ್ಷಣೆಯ ನಿಟ್ಟಿನಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳಬೇಕು ಪಾಲಕರು ತಮ್ಮ ಮಕ್ಕಳಿಗೆ ಗೋ ರಕ್ಷಣೆಯ ಸಂಸ್ಕಾರ ಬೆಳೆಸಬೇಕು ಎಂದು ಕರೆ ನೀಡಿದರು
ಗೋ ಸತ್ಯಾಗ್ರಹದ ಮೂಲಕ ರಾಷ್ಟ್ರಾದ್ಯಂತ ಗೋ ಹತ್ಯೆ ನಿಷೇಧಿಸಬೇಕು,ಗೋ ವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಗೋ ಹಂತಕರಿಗೆ ಏಳು ವರ್ಷ ಜೈಲು ಶಿಕ್ಷೆ ಮತ್ತು ಲಕ್ಷ ರೂ ದಂಡ ವಿಧಿಸುವ ಕಾನೂನು ರೂಪಿಸುವದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಲಾಯಿತು