Breaking News

ಸಮಸ್ಯೆಗೆ ಸ್ಪಂದಿಸಲು ಸಹಾಯವಾಣಿ ಆರಂಭಿಸಿದ ಜಿಲ್ಲಾಡಳಿತ

 

ಬೆಳಗಾವಿ- ಬೆಳಗಾವಿ ಜಿಲ್ಲೆಯಾದ್ಯಂತ ಭಯಂಕರವಾದ ಮಳೆ ಸುರಿಯುತ್ತಿದೆ.ಪಕ್ಕದ ಮಹಾರಾಷ್ಟ್ರದಲ್ಲೂ ವಿಪರೀತವಾಗಿ ಮಳೆ ಸುರಿಯುತ್ತಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಹರಿಯುತ್ತಿರುವ ಎಲ್ಲ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ಜಿಲ್ಲೆಯ ಜನರಿಗೆ ಮಳೆ ಮತ್ತು ಪ್ರವಾಹದ ಯಾವುದೇ ರೀತಿಯ ಸಮಸ್ಯೆ ಎದುರಾದರೆ, ತಕ್ಷಣವೇ ಸ್ಪಂದಿಸಲು ಬೆಳಗಾವಿ ಜಿಲ್ಲಾಡಳಿತ ಸಾರ್ವಜನಿಕರ ಅನಕೂಲಕ್ಕಾಗಿ ಸಹಾಯವಾಣಿ ಆರಂಭಿಸಿದೆ.

ಬೆಳಗಾವಿ ಜಿಲ್ಲಾಡಳಿತ ಜಿಲ್ಲೆಯಲ್ಲಿ ಪ್ರವಾಹ ಎದುರಿಸಲು ಬೋಟುಗಳನ್ನು ತರಿಸಿದೆ.NDRF ತಂಡವೂ ಬೆಳಗಾವಿಗೆ ಬಂದಿದೆ.ಪ್ರವಾಹದಿಂದ ತುತ್ತಾಗುವ ಗ್ರಾಮಗಳ ಕುಟುಂಬಗಳನ್ನು ಸುರಕ್ಷಿತವಾದ ಸ್ಥಳಗಳಿಗೆ ಸ್ಥಳಾಂತರ ಮಾಡುವ ಪ್ರಕ್ರಿಯೆ ಶುರುವಾಗಿದೆ.

ಬೆಳಗಾವಿ ಜಿಲ್ಲೆಯ ಜನರಿಗೆ ಮಳೆ ಅಥವಾ ಪ್ರವಾಹ ಅಥವಾ ಮಳೆಯಿಂದ ಯಾವುದೇ ರೀತಿಯ ಸಮಸ್ಯೆ ಆದಲ್ಲಿ, 0831-2407290 ಫೋನ್ ಮಾಡಿ ಪೋಲೀಸರ ಸಹಾಯ ಬೇಕಾದಲ್ಲಿ,0831- 2474054 ಈ ನಂಬರ್ ಗೆ ಫೋನ್ ಮಾಡಿ

Check Also

ಪಂಚಮಸಾಲಿ ಸಮಾಜದ ಮುಖಂಡ ಆರ್ ಕೆ ಪಾಟೀಲ ಇನ್ನಿಲ್ಲ.

ಬೆಳಗಾವಿ- ಪಂಚಮಸಾಲಿ ಸಮಾಜದ ಬೆಳಗಾವಿ ಜಿಲ್ಲಾಧ್ಯಕ್ಷ ಆರ್.ಕೆ.ಪಾಟೀಲ ನಿಧನರಾಗಿದ್ದಾರೆ.ಅವರಿಗೆ 58 ವರ್ಷ ವಯಸ್ಸಾಗಿತ್ತು.ಚಿಕ್ಕೋಡಿ ತಾಲೂಕಿನ,ಡೋಣವಾಡದವರಾಗಿದ್ದ ಆರ್.ಕೆ. ಪಾಟೀಲ ವೃತ್ತಿಯಲ್ಲಿ ವಕೀಲರಾಗಿದ್ದರು. …

Leave a Reply

Your email address will not be published. Required fields are marked *