ಬೆಳಗಾವಿ- ಕಳೆದ ಮೂರು ತಿಂಗಳಿನಿಂದ ಕರೆಂಟ್ ಬಿಲ್ ತುಂಬದ ಕಾರಣ ಕರೆಂಟ್ ಕನೆಕ್ಷನ್ ಕಟ್ ಮಾಡಿದ ಕಾರಣ ಗ್ರಾಮ ಪಂಚಾಯತಿಯ ಸದಸ್ಯನೋರ್ವ ಇಬ್ಬರು ಲೈನ್ ಮನ್ ಗಳ ಮೇಲೆ ಹಲ್ಲೆ ಮಾಡಿದ ಘಟನೆ ಕಾಕತಿ ಪೋಲೀಸ್ ಠಾಣೆಯ ಗೋಜಗಾ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ
ಬೋಜಗಾ ಗ್ರಾಮ ಪಂಚಾಯತಿ ಸದಸ್ಯ ಚೇತನ ಪಾಟೀಲ ಕಳೆದ ಮೂರು ತಿಂಗಳಿನಿಂದ ಕರೆಂಟ್ ಬಿಲ್ ತುಂಬದ ಕಾರಣ ಕಳೆದ ಭಾನುವಾರ ಇತನ ಕರೆಂಟ್ ಕನೆಕ್ಷನ್ ಕಟ್ ಮಾಡಲಾಗಿತ್ತು ಕರೆಂಟ್ ಕಟ್ ಮಾಡಿದ ಇಬ್ಬರು ಲೈನ್ ಮನ್ ಗಳು ಮಂಗಳವಾರ ಮಧ್ಯಾಹ್ನ ಗ್ರಾಮದಲ್ಲಿ ಸುತ್ತಾಡುವಾಗ ಚೇತನ ಪಾಟೀಲ ಮತ್ತು ಆತನ ಬೆಂಬಲಿಗರು ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ
ಹಲ್ಲೆಗೊಳಗಾದ ಲೈನ್ ಮನ್ ಗಳಿಗೆ ಗಂಬೀರ ಸ್ವರೂಪದ ಗಾಯಗಳಗಾಗಿದ್ದು ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಹಲ್ಲೆ ಮಾಡಿರುವ ಚೇತನ ಪಾಟೀಲ ಗ್ರಾಮ ಪಂಚಾಯತಿ ಸದಸ್ಯನಾಗಿದ್ದು ಜೊತೆಗೆ ಎಂಈಎಸ್ ಸಂಘಟನೆಯ ಪದಾಧಿಕಾರಿ ಎಂದು ಹೇಳಲಾಗುತ್ತಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ