ಬೆಳಗಾವಿ- ಯಾವುದೇ ಹಬ್ಬ ಇರಲಿ ಅದನ್ನು ವಿಶಿಷ್ಟವಾಗಿ ವಿಭಿನ್ನವಾಗಿ ಆಚರಿಸುವದು ಬೆಳಗಾವಿಯ ಸ್ಪೇಶ್ಯಾಲಿಟಿ ತುಂತುರ ಹನಿ ನೀರಿನಲ್ಲಿ ಮುಳುಗಿ ಬೀದಿ ತುಂಬ ನೀರಿನ ಕಾರಂಜಿಯಲ್ಲಿ ಉರುಳು ಸೇವೆ ಮಾಡಿ ಬಣ್ಣ ಆಡೋದು ಬೆಳಗಾವಿಯ ವೈಶಿಷ್ಟ
ನಾಳೆ ಕುಂದಾನಗರಿಯಲ್ಲಿ ಬಣ್ಣದ ಹಬ್ಬ ನಡೆಯುತ್ತದೆ ಅದಕ್ಕಾಗಿ ಗಲ್ಲಿ ಗಲ್ಲಿಗಳಲ್ಲಿ ಮಕ್ಕಳು ಯುವಕರು ಯುವತಿಯರು ಎಲ್ಲ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ.ಚವ್ಹಾಟ ಗಲ್ಲಿ ,ಪಾಂಗುಳಗಲ್ಲಿ,ಭಡಕಲ್ ಗಲ್ಲಿ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ತುಂತುರ ಹನಿ ನೀರಿನ ಕಾರಂಜಿಯ ವ್ಯೆವಸ್ಥೆ ಮಾಡಲಾಗುತ್ತಿದೆ. ಜೊತೆಗೆ ಬ್ಯಾರಲ್ ಗಳಲ್ಲಿ ಬಣ್ಣ ತುಂಬಿಡುವ ಕಾರ್ಯವೂ ಬೆಳಗಾವಿಯಲ್ಲಿ ಜೋರಾಗಿಯೇ ನಡೆದಿದೆ
ಬೆಳಗಾವಿಯ ಹೋಳಿ ಹಬ್ಬದ ಇನ್ನೊಂದು ಸ್ಪೇಶ್ಯಾಲಿಟಿ ಏನಂದ್ರೆ ಶಾಸಕ ಅಭಯ ಪಾಟೀಲ ಕಳೆದ ಹತ್ತು ವರ್ಷಗಳಿಂದ ಹೋಳಿ ಮಿಲನ್ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದ್ದು ಈ ವರ್ಷವೂ ಹೋಳಿ ಮಿಲನ್ ಸಕತ್ತ್ ಆಗಿ ನಡೆಯಲಿದೆ ಅಭಯ ಪಾಟೀಲರು ಆಯೋಜಿಸುವ ಹೋಳಿ ಮಿಲನ್ ದಲ್ಲಿ ಯುವ ಸಾಗರವೇ ಹರಿದು ಬಂದು ಬಣ್ಣದ ಬಣ್ಣ ಬಣ್ಣದ ಚಿತ್ತಾರ ಮೂಡಸಲಿದೆ
ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮಹಿಳೆಯರಿಗಾಗಿಯೇ ವುಮೇನಿಯಾ ಹೋಳಿ ಕಾರ್ಯಕ್ರಮ ಆಯೋಜಿಸಿದ್ದಾರೆ ಸಾವಿರಾರು ಮಹಿಳೆಯರು ಯಾವುದೇ ಆತಂಕವಿಲ್ಲದೇ ಸಾಮೂಹಿಕವಾಗಿ ಬಣ್ಣದ ಹಬ್ಬದ ಸಂಬ್ರಮದಲ್ಲಿ ಮುಳುಗಲಿದ್ದು ಈ ವುಮೇನಿಯಾ ಬೆಲಗಾಮ್ ಕ್ಲಬ್ ನಲ್ಲಿ ನಡೆಯಲಿದೆ
ಒಟ್ಟಾರೆ ಬೆಳಗಾವಿ ನಗರಿಯಲ್ಲಿ ಬಣ್ಣದ ಬುಗುರಿ ತಿರುಗುತ್ತಿದ್ದು ನಾಳೆ ಬಣ್ಣದ ಬಿರುಗಾಳಿಯೇ ಬೀಸಲಿದೆ
ಅಭಯ ಪಾಟೀಲರ ಹೋಳಿ ಮಿಲನ್ ಬ್ಯುಟಿಫುಲ್…ಲಕ್ಷ್ಮೀ ಹೆಬ್ಬಾಳಕರ ಅವರ ವುಮೇನಿಯಾ ವಂಡರ್ ಫುಲ್…ಕುಂದಾ ನಗರಿ ಕಲರ್ ಫುಲ್ ……